ಹಲ್ಲೆಗೈದ ವ್ಯಕ್ತಿಯ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ತಾಲೂಕಾ ಆಸ್ಪತ್ರೆಯ ನೌಕರರಿಂದ ಶಾಸಕರಿಗೆ ಮನವಿ.
ಅಥಣಿ ಜನೇವರಿ.5

ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಇತ್ತೀಚೆಗೆ ಕರ್ತವ್ಯ ನಿರತ ಸಿಬ್ಬಂದಿಯೊಬ್ಬರ ಮೇಲೆ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದು, ಹಲ್ಲೆ ಮಾಡಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳ ಬೇಕಾಗುತ್ತದೆ ಎಂದು ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ರಾಜ್ಯ ನೌಕರರ ಸಂಘದ ಅಥಣಿ ತಾಲೂಕಾ ಅಧ್ಯಕ್ಷರಾದ ಆರ್.ಎಸ್. ಪಾಟೀಲ ಹಾಗೂ ಜಿ.ಎಮ್. ಹಿರೇಮಠ ಅವರ ನೇತೃತ್ವದಲ್ಲಿ ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರ ನಿವಾಸಕ್ಕೆ ದಿ. 5-1-24.ರಂದು ಭೇಟಿ ನೀಡಿ ಶಾಸಕರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಟಿಎಚ್‌ಒ ಬಸಗೌಡ ಕಾಗೆ, ಹಾಗೂ ಆಸ್ಪತ್ರೆಯ ಎಲ್ಲ ನೌಕರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ