ರೈತಾಪಿ ವರ್ಗದ ಜಮೀನುಗಳಿಗೆ ಹೋಗುವ ರಸ್ತೆಗಳ ಅಭಿವೃದ್ಧಿ ಮರೀಚಿಕೆಯಾಗಿರುವ ಉದ್ದೇಶಕ್ಕೆ ಯಾರು ಹೊಣೆ ?.

ಹುನಗುಂದ ಜುಲೈ.15

ರೈತಾಪಿ ವರ್ಗಕ್ಕೆ ತಮ್ಮ ಜಮೀನುಗಳಿಗೆ ಹೋಗಲು ಸರಕಾರದ ಯೋಜನೆಯಾದ “ ನಮ್ಮ ಹೊಲ ನಮ್ಮ ರಸ್ತೆ – ಈ ಯೋಜನೆಯ ಒಂದು ನೈಜ ಉದಾಹರಣೆ ಹುನಗುಂದಿಂದ ಹೂಲಗೇರಿ ರಸ್ತೆ ಈ ರಸ್ತೆಯಲ್ಲಿ ಹುನಗಂದ ನಗರದ ಬಹಳಷ್ಟು ರೈತಾಪಿ ವರ್ಗದವರ ಜಮೀನುಗಳು ಇದ್ದು ಈ ರಸ್ತೆಯಲ್ಲಿ ಒಟ್ಟು ರೈತನು ತನ್ನ ಎತ್ತಿನಗಾಡಿಯನ್ನು ತೆಗೆದುಕೊಂಡು ನಡೆದರೆ ರಸ್ತೆಯಲ್ಲಿ ತೆಗ್ಗು ದಿನ್ನಿಗಳು-ನೀರು-ಪೇರು-ಇಳಿವು-ಇಕ್ಕಟ್ಟಾದ ಸ್ಥಿತಿ ಜೊತೆಗೆ ರಸ್ತೆಯ ಅಕ್ಕ- ಪಕ್ಕ ಬೆಳೆದ ಜೀನಿಕಂಠಿಗಳ ದರ್ಬಾರ್ ಇದರ ಜೊತೆಗೆ ಜೀನಿಕಂಠಿಗಳಿಂದ ಎತ್ತುಗಳ ಮೈ ಪರುಚುವುದರ ಜೊತೆಗೆ ಒಮ್ಮೊಮ್ಮೆ ರೈತರ ಮೈ-ಕೈ-ಕಾಲುಗಳಿಗೂ ಜೀನಿಕಂಠಿಗಳು ಪರಚಿಕೊಳ್ಳುವುದು ಸಾಮಾನ್ಯವಾಗಿ ನಡೆದೇ ಇದೆ. ಈ ರಸ್ತೆಗೆ ಸುಮಾರು ವರ್ಷಗಳ ಹಿಂದೆ ತೆನಹಳ್ಳಿಯವರ ಹೊಲದಿಂದ ಅವಾರಿಯವರ ಜಮೀನಿನವರೆಗೆ ಗಿಂಠಿಗಳನ್ನು ಅರ್ಧ-ಮರ್ದ ಜೆ.ಸಿ.ಬಿ ಯಿಂದ ತೆಗೆದು ಸ್ವಲ್ಪ ಪ್ರಮಾಣದಲ್ಲಿ ಗರಸು ಹಾಕಿ * ನಮ್ಮ ಹೊಲ ನಮ್ಮ ರಸ್ತೆ * ಯೋಜನೆಯಲ್ಲಿ ಮಾಡಿ ಸರಕಾರದ ಹಣವನ್ನು ಸ್ವಾಹ – ಮಾಡಿರುವರೆಂದು ರೈತಾಪಿ ವರ್ಗದವರು ಮಾನಾಡುವುದು ಸಾಮಾನ್ಯವಾಗಿದೆ

. ಈ ರಸ್ತೆಯು ಹನಗುಂದದಿಂದ ಗ್ರಾನೈಟ್ ಶಿಲೆಗೆ ಪ್ರಸಿದ್ಧವಾಗಿರುವ ಕುಷ್ಟಗಿ ತಾಲೂಕಿಗೆ ಒಳಪಡುವ ಹೂಲಗೇರಿ ಗ್ರಾಮಕ್ಕೆ ತಲುಪುವುದು ಈ ಗ್ರಾಮಕ್ಕೆ ಹೋಗಬೇಕಾದರೆ ಹುನಗುಂದದಿಂದ 12 ಕಿ.ಮೀ, ಇಲಕಲ್ ಗೆ ಹೋಗಬೇಕು ಇಲಕಲ್ಲದಿಂದ 10 ಕಿ.ಮೀ. ಹೂಲಗೇರಿಗೆ ಒಟ್ಟು 22 ಕಿ.ಮೀ ಆದರೆ ಹುನಗುಂದದಿಂದ ರೈತರ ಜಮೀನುಗಳಿಗೆ ಹೋಗುವ ರಸ್ತೆಯಾದ ಹೂಲಗೇರಿ ರಸ್ತೆಯಿಂದ ಕೇವಲ 8 ಕಿ. ಮೀ-ದಲ್ಲಿ ಹೂಲಗೇರಿ ಗ್ರಾಮವನ್ನು ತಲುಪಬಹುದು ಇಲ್ಲಿ “14 ಕಿ.ಮೀ” ಅಂತರ ಕಡಿಮೆಯಾಗುವುದು ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿದರೆ ಹೂಲಗೇರಿ ರಸ್ತೆ ಇಂದಿಗೂ ರಸ್ತೆಗೆ ರೈತಾಪಿ ವರ್ಗ ರೂಢಿಯಲ್ಲಿ ಮಾತನಾಡುವದರ ಜೊತೆಗೆ ರೈತರು ಜಮೀನುಗಳಲ್ಲಿ ಬಿತ್ತನೆ ಮಾಡುವ ಸಂದರ್ಭ ಹಾಗೂ ಬೆಳೆಗಳು – ಕೊಯಿಲಿಗೆ ಬಂದ ಸಂದರ್ಭದಲ್ಲಿ ಈ ರಸ್ತೆ ಎಷ್ಟು ಹೊಲಸಾಗಿದೆ- ಹದಗೆಟ್ಟಿರುವದು ಹೊಲಕ್ಕೆ ಹೋಗೋದ ಒಂದು ದೊಡ್ಡ ಸಾಹಸ ಪಡಬೇಕು ಎಂದು ರೈತಾಪಿ ವರ್ಗ ಇಂದಿಗೂ ಆ ನಿರ್ಜೀವ ರಸ್ತೆಗೆ ಹಿಡಿಶಾಪ ಹಾಕುತ್ತಲೆ ಇದ್ದಾರೆ ಮತ್ತೊಂದು ಕಡೆ * ಜನಪ್ರತಿನಿಧಿಗಳು * ಹೇಳುವರು ” ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ಪ್ರತಿ ಮತಕ್ಷೇತ್ರಕ್ಕೆ – 37 ಕಿ.ಮೀ. – ನಿರ್ಮಾಣಕ್ಕೆ – ಉದ್ಯೋಗ ಖಾತ್ರಿ ಯೋಜನೆ ಅಡಿ ಅವಕಾಶ ನೀಡಿದ್ದು, ಅದರಂತೆ ಆಧಿಕಾರಿಗಳು ನಕಾಶದಲ್ಲಿಯ ರಸ್ತೆಗಳ ನಕ್ಷೆ ತೆಗೆದುಕೊಂಡು ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳುವರು ಆದರೆ ” ದೇವರು ವರಕೊಟ್ಟರು, ಪೂಜಾರಿ ವರ ಕೊಡಬೇಕಲ್ಲಾ? – ಎಂಬಂತೆ ಯಾವ ಒಬ್ಬ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ರಸ್ತೆಯ ಗೋಜಿಗೆ ಇದುವರೆಗೂ ಹೋಗಿರುವುದಿಲ್ಲಾ, ಇನ್ನು ಕೆಲವು ಪ್ರಮುಖ ರಸ್ತೆಗಳಾದ ಗುಂಡಮ್ಮನ ರಸ್ತೆ – ಕಾಲುದಾರಿ ರಸ್ತೆ – ಚಿಕ್ಕಬಾದವಾಡಗಿ ಒಳರಸ್ತೆ – ದ್ಯಾಮವ್ವನ ರಸ್ತೆ – ಇದಿರಾಳು ಹನಮಪ್ಪನ ಪಕ್ಕದ ರಾಮವಾಡಗಿ – ಮರೋಳ ರಸ್ತೆ. ಈ ಎಲ್ಲಾ ರೈತಾಪಿ ವರ್ಗದ ರಸ್ತೆಗಳು ಗಿಡ- ಗಂಟೆಗಳು – ತೆಗ್ಗು – ದಿನ್ನಿಗಳಿಂದ ರಸ್ತೆಗಳು ಸಂಪೂರ್ಣ ಹಾಳಾಗಿ ರೈತಾಪಿ ವರ್ಗ ತಮ್ಮ ಜಮೀನುಗಳಿಗೆ ಹೋಗಿ ಬರಲು ಚಿಂತಾಜನಕವಾಗಿರುವದು ಎಷ್ಟು ವಿಪರ್ಯಾಸ ಇನ್ನು ಕೆಲವು ರಸ್ತೆಗಳು ಅತಿಕ್ರಮಣಕಾರರಿಂದ ರಸ್ತೆಗಳೇ ಮಾಯವಾಗಿರುವವು ರೈತಾಪಿ ವರ್ಗಕ್ಕೆ ತಮ್ಮ ಜಮೀನುಗಳಿಗೆ ರಸ್ತೆ ಯಾವುದಯ್ಯಾ ಈ ವಿಷಯವಾಗಿ ಆಗಾಗ ಕದನಗಳು ನಡೆಯುತ್ತಲೇ ಇದೆ ,-, ನಡೆಯುತ್ತಲೇ ಇದೆ “ನೀನೇ ಹೇಳಬೇಕು ನಮ್ಮ ಹೊಲ ನಮ್ಮ ರಸ್ತೆ….! “.

ಪತ್ರಿಕೆ ವರದಿಗಾರರು:ಮಹಾಂತೇಶ.ಎಸ್.ಜಿಗಳೂರ. ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button