ವಿಜಯನಗರ ಜಿಲ್ಲೆಯ ಕರವೇ ಸ್ವಾಭಿಮಾನಿ ಸೇನೆ ಅಧ್ಯಕ್ಷರಾಗಿ ಆಯ್ಕೆ ಗುರಿಕಾರ ಮಂಜಪ್ಪ.
ಕೊಟ್ಟೂರು ಜನೇವರಿ.6
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ರಾಜ್ಯಧ್ಯಕ್ಷರು ಲಿಂಗರಾಜು ಗೌಡರವರು ಬೆಂಗಳೂರು ನಗರದ ಕೇಂದ್ರ ಕಚೇರಿಯಲ್ಲಿ ವಿಜಯನಗರ ಜಿಲ್ಲೆಯ ಯೂಥ್ ಘಟಕದ ಜಿಲ್ಲಾಧ್ಯಕ್ಷರನ್ನಾಗಿ ಗುರಿಕಾರ ಮಂಜಪ್ಪ ನೇಮಕ ಮಾಡಲಾಯಿತು.ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವಿಜಯನಗರ ಜಿಲ್ಲೆಯ ಯೂತ್ ಅಧ್ಯಕ್ಷರನ್ನಾಗಿ ಗುರಿಕಾರ ಮಂಜಪ್ಪ ನವರನ್ನು ರಾಜ್ಯಧ್ಯಕ್ಷರಾದ ನಿಂಗರಾಜು ಗೌಡ್ರು ರವರು ನೇಮಿಸಿ ಆದೇಶ ಹೊರಡಿಸಿದ್ದಾರೆ.

ನನ್ನ ಹೋರಾಟಕ್ಕೆ ಮತ್ತು ಸಂಘಟನೆಗೆ ಚ್ಯುತಿ ಬರದಂತೆ ನೋಡಿ ಕೊಳ್ಳುತ್ತೇನೆ ಮತ್ತು ನನ್ನ ಕನ್ನಡ ಭಾಷೆ ನೆಲ ಜಲ ಇಂತಹ ವಿಷಯ ಬಂದಾಗ ಕಂಕಣ ಬದ್ಧನಾಗಿ ನಿಂತು ಹೋರಾಡುತ್ತೇನೆ.ಕೆಲವೊಂದು ಕಂಪನಿಗಳಿಂದ ರೈತರಿಗೆ ಕಾರ್ಮಿಕರಿಗೆ ಅನ್ಯಾಯವಾದರೆ ಯಾವುದೇ ಕಾರಣಕ್ಕೂ ಅದನ್ನು ಸಹಿಸದೆ ಹೋರಾಟ ಮಾಡುವ ಮೂಲಕ ನ್ಯಾಯ ಕೊಡಿಸುತ್ತೇನೆ.ವಿಜಯನಗರ ಜಿಲ್ಲೆಯ ಜನತೆ ಸಹಕಾರ ಕೊಡಬೇಕೆಂದು ತಮ್ಮಲ್ಲಿ ಹೃದಯ ಪೂರ್ವಕವಾಗಿ ಕೇಳಿ ಕೊಳ್ಳುತ್ತೇನೆ. ಎಂದು ಗುರಿಕಾರ್ ಮಂಜಪ್ಪ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಸಂಘದ ಯೂಥ್ ಅಧ್ಯಕ್ಷರು ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು