ಮಹಾಂತ ನಗರದ ಶಿವಮಾರುತಿ ದೇವಸ್ಥಾನದ ರಸ್ತೆಯಲ್ಲಿ ಬುಧವಾರ ಸಂತೆ ಆರಂಭಿಸಲು – ಶಾಸಕರಿಗೆ ಮನವಿ.
ಹುನಗುಂದ ಜನೇವರಿ.7

ಪಟ್ಟಣದ ಮಹಾಂತ ನಗರದ ಬಸ್ ನಿಲ್ದಾಣದ ಹಿಂದೆ ಶಿವಮಾರುತಿ ದೇವಸ್ಥಾನದ ಮಾರ್ಗದಲ್ಲಿ ಪ್ರತಿ ಬುಧವಾರ ಕಾಯಿಪಲ್ಲೆ ವಾರದ ಸಂತೆಯನ್ನು ಪ್ರಾರಂಭಿಸುವಂತೆ ಮಹಾಂತ ನಗರ ಹಾಗೂ ವಿವಿಧ ಬಡಾವಣೆಯ ಸಾರ್ವಜನಿಕರು ರವಿವಾರ ಪುರಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಮನವಿ ಸಲ್ಲಿಸಿದರು.ಹುನಗುಂದ ಪಟ್ಟಣ ಮಹಾಂತ ನಗರದ ಶಿವಮಾರುತಿ ದೇವಸ್ಥಾನದ ರಸ್ತೆಯಲ್ಲಿ ಬುಧವಾರ ಕಾಯಿಪಲ್ಲೆ ಮಾರುಕಟ್ಟೆ ಆರಂಭಿಸುವದರಿಂದ ಅದರ ಸುತ್ತ ಮುತ್ತಲಿನ ಶಿವಬಸವನಗರ,ವಿದ್ಯಾನಗರ,ಓಂ ಶಾಂತಿನಗರ,ನಿಂಗರಾಜ ನಗರ,ಗಣೇಶ ನಗರ,ನಾಗಲಿಂಗನಗರ,ನವನಗರ,ಓಲೇಕಾರ ನಗರ ಸೇರಿದ್ದಂತೆ ಎಲ್ಲ ಬಡಾವಣೆಗಳ ಜನರಿಗೆ ಕೇಂದ್ರ ಸ್ಥಳವಾಗಿದ್ದರಿಂದ ಇಲ್ಲೀನ ಎಲ್ಲಾ ಸಾರ್ವಜನಿಕರಿಗೂ ಅನುಕೂಲ ವಾಗಲಿದೆ.ಸಧ್ಯ ಈ ಸ್ಥಳದಲ್ಲಿ ಮುಳ್ಳು ಕಂಟಿ ಬೆಳದಿದ್ದು ಪುರಸಭೆ ಅಧಿಕಾರಿಗಳಿಗೆ ತಿಳಿಸಿ ಸ್ವಚ್ಚಗೊಳಿಸಿ ಶೀಘ್ರವೇ ಬುಧವಾರ ಸಂತೆ ಆರಂಭಿಸ ಬೇಕು.ಪ್ರತಿ ಶನಿವಾರ ಬಸ್ ನಿಲ್ದಾಣದ ಪಕ್ಕದಲ್ಲಿ ನಡೆಯುವ ವಾರದ ಒಂದೇ ದಿನ ನಡೆಯುವುದರಿಂದ ಪಟ್ಟಣದ ಬಸ್ ನಿಲ್ದಾಣ ಪಕ್ಕದ ಸಂತೆ ತುಂಬಿ ಹೋಗಿ ಬೆಳಗಾವಿ ರಾಯಚೂರ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಕುಳಿತು ವ್ಯಾಪಾರ ವಹಿವಾಟು ಮಾಡುತ್ತಿದ್ದು ಇದರಿಂದ ರಸ್ತೆ ಸಂಚಾರ ಮತ್ತು ಜನದಟ್ಟನೆ ಸಮಸ್ಯೆ ಉಲ್ಭಣವಾಗುತ್ತಿದ್ದು.ಬುಧವಾರ ಸಂತೆ ಆರಂಭಿಸುವುದರಿಂದ ಈ ಎಲ್ಲಾ ಸಮಸ್ಯಗಳಿಗೂ ಪುಲ್ ಸ್ಟಾಫ್ ನೀಡಿದ್ದಂತಾಗುತ್ತೇ ಮತ್ತು ಪಟ್ಟಣದ ಸಾರ್ವಜನಿಕರಿಗೆ ಅನುಕೂಲವಾಗಲಿದೆ.ಇನ್ನು ಬುಧವಾರ ಸಂತೆ ಆರಂಭಿಸಿದರೇ ಆ ದಿನ ವಿ.ಮ.ವೃತ್ತ, ಮೇನ್ ಬಜಾರ ಮತ್ತು ರಸ್ತೆ ಅಕ್ಕ ಪಕ್ಕದಲ್ಲಿ ಕಾಯಿಪಲ್ಲೆ ಹಚ್ಚದಂತೆ ಕಾಯಿಪಲ್ಲೆ ವ್ಯಾಪಾರಸ್ಥರಿಗೆ ತಿಳಿಸಬೇಕು ಎಂದು ಮುಖಂಡ ಸಂಗಣ್ಣ ಅವಾರಿ ಹಾಗೂ ಅನೇಕ ಬಡಾವಣೆ ಮಹಿಳೆಯರು ಶಾಸಕರಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಹಾಂತೇಶ ದಾದ್ಮಿ,ಮಹಾಂತೇಶ ಪಲ್ಲೇದ,ಹರೀಶ ಅವಾರಿ,ವಿದ್ಯಾ ಅವಾರಿ,ನೇತ್ರಾ ದಾದ್ಮಿ,ಶಿವಲೀಲಾ ಪಲ್ಲೇದ,ಸಾವಿತ್ರಿ ಗಂಗೂರ,ರತ್ನಾ ಲೆಕ್ಕಿಹಾಳ,ರೇಖಾ ಗೌಡರ,ಶ್ವೇತಾ ಬಡಿಗೇರ,ಮಹಾಂತಮ್ಮ ಅವಾರಿ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ