ಜ.9 ರಂದು ಚಿತ್ತವಾಡಗಿ ವೀರಭದ್ರೇಶ್ವರ ಕಾರ್ತಿಕೋತ್ಸವ.
ಹುನಗುಂದ ಜನೇವರಿ.7

ಹುನಗುಂದ ತಾಲೂಕಿನ ಸಮೀಪದ ಚಿತ್ತವಾಡಗಿ ಗ್ರಾಮದ ಆರಾಧ್ಯದೈವ ವೀರಭದ್ರೇಶ್ವರ ಕಾರ್ತಿಕೋತ್ಸವ ಜ.9ರ ಮಂಗಳವಾರ ರಂದು ಜರುಗುವುದು.ಅಂದು ನಡೆಯುವ 397.ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿದ್ಯವನ್ನು ಅಮೀನಗಡ- ಯರಿಗೋನಾಳದ ಪ್ರಭು ಶಂಕರೇಶ್ವರ ಮಠದ ಶಂಕರ ರಾಜೇಂದ್ರ ಸ್ವಾಮೀಜಿ, ಅತಿಥಿಯಾಗಿ ಶಿಕ್ಷಕ ಲಿಂಗರಾಜ ಗದ್ದನಕೇರಿ ಭಾಗವಹಿಸುವರು ಎಂದು ದೇವಸ್ಥಾನದ ಅರ್ಚಕ ಬಸಯ್ಯ ನವಲಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ