ಜನಸೇವೆ ಮಾಡಲು ಬಂದಿದ್ದೇವೆ, ಯಾರಿಗೂ ಲಂಚ ಕೊಡಬೇಡಿ – ಸಚಿವ ಕೆ.ಜೆ ಜಾರ್ಜ್.
ತರೀಕೆರೆ ಜನೇವರಿ.8
ಕೆಲವು ಅಧಿಕಾರಿಗಳಿಂದ ಕೆಟ್ಟ ಹೆಸರು ಬರುತ್ತಿದೆ, ಹಣಕ್ಕಾಗಿ ಕೆಲಸ ಮಾಡಬೇಡಿ ಒಳ್ಳೆಯ ನಿಷ್ಠಾವಂತ ಅಧಿಕಾರಿಗಳು ದೋಷಾರೋಪನೆಗೆ ಗುರಿ ಯಾಗುತ್ತಿದ್ದಾರೆ. ಜನಸೇವೆ ಮಾಡಲು ಬಂದಿದ್ದೇವೆ ಯಾರಿಗೂ ಲಂಚ ಕೊಡಬೇಡಿ, ಲಂಚ ಕೇಳಿದರೆ ಮೇಲಧಿಕಾರಿಗಳಿಗೆ ತಿಳಿಸಿರಿ ಎಂದು ಇಂಧನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆಜೆ ಜಾರ್ಜ್ ರವರು ಇಂದು ಪಟ್ಟಣದ ಸಪ್ತಗಿರಿ ಕನ್ವೆನ್ಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ಚಿಕ್ಕಮಗಳೂರು ಜಿಲ್ಲಾ ಜನತಾ ದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಹೇಳಿದರು. ಪೊಲೀಸು ಇಲಾಖೆಯವರು ಸಹ ನಿಷ್ಠೆ ಪ್ರಾಮಾಣಿಕವಾಗಿ ಕೆಲಸ ಮಾಡಿರಿ. ಕಡೂರು ತಾಲೂಕು ಸಿಂದಿಗೆರೆ ಗ್ರಾಮದ ಶಿವಕುಮಾರ್ ರವರು ವಿದ್ಯುತ್ ಸ್ಪರ್ಶದಿಂದ ಮೃತರಾಗಿದ್ದು ಅವರ ಕುಟುಂಬಕ್ಕೆ ರೂ 5 ಲಕ್ಷ ಪರಿಹಾರ ಕೊಡುತ್ತೇವೆ ಎಂದು ಹೇಳಿದರು. ತರೀಕೆರೆ ಶಾಸಕರಾದ ಜಿಎಚ್ ಶ್ರೀನಿವಾಸ್ ಮಾತನಾಡಿ ಎಂಜಿ ರಸ್ತೆ ಅಗಲೀಕರಣಕ್ಕೆ ಪರಿಹಾರ ನೀಡಿ ಅಗಲೀಕರಣ ಮಾಡಲು ಕೋರ್ಟ್ ಮಾರ್ಗದರ್ಶನ ನೀಡಿದೆ, ಸರ್ಕಾರ ಹಣ ಒದಗಿಸಿ ಕೊಟ್ಟರೆ ಸಾಧ್ಯವಾಗುತ್ತದೆ ಎಂದು ಹೇಳಿದರು. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಜನೇವರಿ 12.ನೇ ತಾರೀಖಿನಂದು ಶಿವಮೊಗ್ಗದಲ್ಲಿ ಐದನೇ ಗ್ಯಾರೆಂಟಿಯಾದ ಯುವ ನಿಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದು ಹೇಳಿದರು. ಮಾನ್ಯ ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್ ರವರು ಮಾತನಾಡಿ ಶೇಕಡ 60% ಸಮಸ್ಯೆಗಳು ರೆವಿನ್ಯೂ ಇಲಾಖೆಗೆ ಸಂಬಂಧಪಟ್ಟವು ಆಗಿರುತ್ತದೆ. ಜಂಟಿ ಸರ್ವೆ ಕಾರ್ಯ ಪ್ರಾರಂಭವಾಗಿದೆ ಸಾರ್ವಜನಿಕರ ಸಮಸ್ಯೆಗಳು ಆದಷ್ಟು ಬೇಗ ವಿಲೇವಾರಿ ಮಾಡುತ್ತೇವೆ. ಬೇರೆ ಬೇರೆ ತಾಲೂಕುಗಳು ನಿಂದ ಬಂದಂತ ಅರ್ಜಿಗಳನ್ನು ತಂತ್ರಾಂಶದ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಜಿಲ್ಲೆಯಲ್ಲಿ 35 ಕರ್ನಾಟಕ ಒನ್ ಫ್ರಾನ್ಚೆಸಿ ಮಂಜೂರಾಗಿರುತ್ತದೆ ಮಹಿಳೆಯರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಕೊಡುತ್ತೇವೆ, ಜಿಲ್ಲೆಯಲ್ಲಿ 32 ಸಾವಿರ ನಿವೇಶನ ರೈತರು ಇದ್ದಾರೆ ಆದ್ದರಿಂದ ನಿವೇಶನ ರೈತರಿಗೆ ನಿವೇಶನ ನೀಡಲು ಕನಿಷ್ಠ 300 ಎಕರೆ ಜಮೀನು ಕಾಯ್ದಿರಿಸ ಬೇಕಾಗಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಡಾ. ವಿಕ್ರಂ ಅಮಟೆ ಮಾತನಾಡಿ ಜಿಲ್ಲೆಯಲ್ಲಿ ಪೋಸ್ಕೋ ಪ್ರಕರಣಗಳನ್ನು ತಡೆಯಲು ಎಲ್ಲಾ ಶಾಲೆಗಳಿಂದಲೂ ಸಹ ಒಬ್ಬರಂತೆ ನೇಮಕ ಮಾಡಿಕೊಂಡು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಪುರಸಭಾ ಮುಖ್ಯ ಅಧಿಕಾರಿ ಹೆಚ್ ಪ್ರಶಾಂತ ರವರು ಮಾತನಾಡಿ ತರೀಕೆರೆಯಲ್ಲಿ 2400 ಜನ ನಿವೇಶನ ರಹಿತರಿದ್ದಾರೆ, ಕಂದಾಯ ಇಲಾಖೆಯಿಂದ ಜಮೀನು ಒದಗಿಸಿ ಕೊಟ್ಟರೆ ನಿವೇಶನಗಳನ್ನು ವಿತರಿಸಲು ಸಾಧ್ಯ ಎಂದು ಹೇಳಿದರು. ಶೃಂಗೇರಿ ಶಾಸಕರಾದ ರಾಜೇಗೌಡರವರು ಮಾತನಾಡಿ ಎನ್ ಆರ್ ಪುರ ತಾಲೂಕು ಮುತ್ತಿನಕೊಪ್ಪ ಗ್ರಾಮದಲ್ಲಿ ಎಂಐಎಸ್ಎಲ್ ಮಧ್ಯ ಮಾರಾಟದ ಅಂಗಡಿ ತೆರೆಯಲು ಅಪೇಕ್ಷಿತರು ಮುಂದೆ ಬಂದರೆ ಮಂಜೂರು ಮಾಡಿ ಕೊಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಡೂರು ಶಾಸಕರಾದ ಕೆ ಎನ್ ಆನಂದ್, ಚಿಕ್ಕಮಗಳೂರು ಶಾಸಕರಾದ ಎಚ್ ಡಿ ತಮ್ಮಯ್ಯ, ತರೀಕೆರೆ ಪುರಸಭಾ ಅಧ್ಯಕ್ಷರಾದ ಪರಮೇಶ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯದ ಡಾ. ಗೋಪಾಲಕೃಷ್ಣ, ಚಿಕ್ಕಮಂಗಳೂರು ಜಿಲ್ಲಾ ಮುಖ್ಯ ಕಾರ್ಯದರ್ಶಿಯಾದ ರಾಜೇಂದ್ರ ಕುಮಾರ್ ಕಠಾರಿಯಾ, ಡಿಎಫ್ಓ ಆಶಿಕ್ ರೆಡ್ಡಿ , ತರೀಕೆರೆ ತಹಸಿಲ್ದಾರ್ ರಾಜೀವ, ಎನ್ ಆರ್ ಪುರ ತಹಸಿಲ್ದಾರ್ ತನುಜ ಸೌದತ್ತಿ, ತರೀಕೆರೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಯದ ಗೀತಾ ಶಂಕರ್, ರಮೇಶ್ ಬಾಬು, ಜೈಕುಮಾರ್, ಉಪಸ್ಥಿತರಿದ್ದು ಉಪ ವಿಭಾಗ ಅಧಿಕಾರಿ ಡಾ. ಕೆ ಜೆ ಕಾಂತರಾಜ್ ಸ್ವಾಗತಿಸಿ ವಂದಿಸಿದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್. ತರೀಕೆರೆ