ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ವಿರುದ್ಧ ಪ್ರತಿಭಟನೆ.
ಅಥಣಿ ಜನೇವರಿ.9

ಕರ್ನಾಟಕ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ 6 ತಿಂಗಳಿನಿಂದ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಿರುಕುಳ.ಸುಳ್ಳು ಮೊಕದ್ದಮೆ.ಜೈಲ್ ವಾಸ ನಿರಂತರ ನಡೆಯುತ್ತಿದೆ. ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡುತ್ತಿದೆ. ಕೆಲವು ಘಟನೆಗಳು ತಮ್ಮ ಗಮನಕ್ಕೆ ತರ ಬಯಸುತ್ತೇವೆ. ದೊಡ್ಡ ಬಳ್ಳಾಪುರದಲ್ಲಿ ಅಕ್ರಮವಾಗಿ 35 ಟನ್ ಗೋಮಾಂಸ ವಾಹನ ಹಿಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶ್ರೀ ರಮೇಶಗೌಡ, ಬೆಂಗಳೂರು ಮಹಾ ನಗರ ಪ್ರಧಾನ ಕಾರ್ಯದರ್ಶಿ ಸೇರಿದಂತೆ 16 ಗೋ ರಕ್ಷಕರಿಗೆ 48 ದಿವಸ ಜೈಲ್! ಹಿಂಸೆ. ಧಮ್ಮಿಕಿ.ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಶ್ರೀ ಪ್ರಮೋದ ಮುತಾಲಿಕರಿಗೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಪ್ರವೇಶ ನಿರ್ಬಂಧ.ಹುಬ್ಬಳ್ಳಿಯಲ್ಲಿ ಕೇಸ್ ದಾಖಲು.ಶ್ರೀರಾಮ ಸೇನಾ ರಾಜ್ಯ ಅಧ್ಯಕ್ಷ ಶ್ರೀ ಗಂಗಾಧರ ಕುಲಕರ್ಣಿಯವರಿಗೆ ಚಿಕ್ಕಮಗಳೂರು ಜಿಲ್ಲೆ ಪ್ರವೇಶ ನಿರ್ಬಂಧ.ರಾಮನಗರ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಣಿಕೆ ತಡೆದದ್ದಕ್ಕೆ 4 ಜನರ ಮೇಲೆ ಕೇಸ್ ದಾಖಲು.ವಿಜಯಪುರ ಜಿಲ್ಲೆಯಲ್ಲಿ ದೇವಿ ವಿಗ್ರಹದ ಮೇಲೆ ಮುಸ್ಲಿಮ್ ನಿಂದ ಮಲ- ಮೂತ್ರ ವಿಸರ್ಜನೆ.ಗಂಗಾವತಿಯಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಮಸೀದೆಗೆ ಆರತಿ ಮಾಡಿದ್ರು ಅಂತ ಕೇಸ್ ದಾಖಲು.ಚಿಕ್ಕಮಗಳೂರಿನಲ್ಲಿ 14 ಹಿಂದೂ ಕಾರ್ಯಕರ್ತರ 7 ವರ್ಷ ಹಳೆಯ ಕೇಸ್ ಮತ್ತೆ ಪ್ರಾರಂಭ. ಇವು ಉದಾಹರಣೆಗೆ ಮಾತ್ರ. ಇನ್ನೂ ನಿರಂತರವಾಗಿ ನಡೆದಿವೆ, ನಡೆಯುತ್ತಿವೆ.ಇನ್ನೂ ಹಲವಾರು ಅಹಿತಕರ ಹಿಂದೂ ವಿರೋಧಿ ದುರ್ಘಟನೆಗಳು ನಡೆಯುತ್ತಲೇ ಇದ್ದಾವೆ. ಇಡೀ ರಾಜ್ಯದಲ್ಲಿ ಹಿಂದೂಗಳು ಇಂತಹ ಸ್ಥಿತಿಯಲ್ಲಿ ಬದಕುತ್ತಿದ್ದು ರೊಚ್ಚಿಗೆದ್ದು ರಸ್ತೆ ಗಿಳಿಯುವ ಮೊದಲು ತಾವು ರಾಜ್ಯ ಸರ್ಕಾರಕ್ಕೆ ಹಿಂದೂ ವಿರೋಧಿ ನಡೆಯನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಬೇಕು ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸುತ್ತೇವೆ.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ