ಸಿಂದಗಿ ಜಿಲ್ಲೆಯನ್ನಾಗಿ ಮಾಡುವಂತೆ ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಸಿಂದಗಿ ಜನೇವರಿ.9
ವಿಜಯಪುರ ಜಿಲ್ಲೆಯನ್ನು ವಿಭಜನೆ ಮಾಡಿ ಹೊಸ ಜಿಲ್ಲೆ ಸೃಷ್ಟಿ ಮಾಡುವುದಾದರೆ ಸಿಂದಗಿ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾರ್ಪಡಿಸಲು ವಿವಿಧ ಮಹಿಳಾ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ ಪ್ರದೀಪ ಕುಮಾರ ಹಿರೇಮಠ ಅವರ ಮೂಲಕ ಇಂಡಿ ಉಪ ವಿಭಾಗಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಯುವ ಕುರುಬ ಸಂಘದ ರಾಜ್ಯಾಧ್ಯಕ್ಷೆ ಶಿಲ್ಪಾ ಕುದರಗೊಂಡ, ಸಾಧನಾ ಸಂಘಟನೆಯ ಅನಸುಭಾಯಿ ಪರಗೊಂಡ, ಜನಜಾಗೃತಿ ಸಂಘಟನೆಯ ನೀಲಮ್ಮ ಯಡ್ರಾಮಿ, ಶ್ಯಾಮಲಾ ಮಂದೇವಾಲ್, ಅನುಸುಬಾಯಿ ಮೇಲಿನಮನಿ, ಗೌಸಿಯಾ ಶೇಖ, ಜಯಶ್ರೀ ನಾಟೀಕಾರ, ಲಕ್ಷ್ಮಿ ಕಲಾಲ, ಯಮನಾಬಾಯಿ ಮಾದರ, ಅನ್ನಪೂರ್ಣ ದೇವಕರ ಸೇರಿದಂತೆ ಅನೇಕರು ಮಾತನಾಡಿ, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಭೌಗೋಳಿಕವಾಗಿ ಜನಸಂಖ್ಯೆಯನ್ನು ಹೊಂದಿದ್ದು ವಿಸ್ತೀರ್ಣದಲ್ಲಿಯೂ ದೊಡ್ಡದಾಗಿದೆ. ಸಿಂದಗಿಯು ಕೇಂದ್ರಸ್ಥಾನದಲ್ಲಿದ್ದು, ತಾಲೂಕಿನ ಸುತ್ತ ಮುತ್ತಲಿನಲ್ಲಿ ಕಲಬುರ್ಗಿ, ಯಾದಗಿರಿ, ರಾಯಚೂರ ಮತ್ತು ವಿಜಯಪುರ ಜಿಲ್ಲೆಗಳ ಹೆಚ್ಚಿನ ಸಂಪರ್ಕವನ್ನು ಹೊಂದಿದೆ. ಮತ್ತು ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚಿನ ಆದಾಯವನ್ನು ಸಿಂದಗಿ ತಾಲೂಕಿನಿಂದ ಸಂಗ್ರಹವಾಗುತ್ತಿದ್ದು ವ್ಯವಸ್ಥಿತ ನಗರ ವ್ಯವಸ್ಥೆಯನ್ನು ಹೊಂದಿದೆ. ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಭೋದನೆ ಮಾಡುವದರೊಂದಿಗೆ ರಾಜ್ಯದಲ್ಲಿ ಹೆಸರು ವಾಸಿಯಾಗಿ ಶೈಕ್ಷಣಿಕ ಕಾಶಿ ಎಂದನೆಸಿ ಕೊಂಡಿದೆ. ಹಾಗೂ ದಿನದ 24.ಗಂಟೆಯು ಉತ್ತಮ ಸಾರಿಗೆ ಸಂಪರ್ಕ ವ್ಯವಸ್ಥೆ ಇದ್ದು, ಮುಂಬೈ, ಚೆನೈ ವಾಣಿಜ್ಯ ಕಾರಿಡಾರ ಛತುಸ್ಕೋನ ರಸ್ತೆ ಸಿಂದಗಿ ನಗರಕ್ಕೆ ಹೊಂದಿ ಕೊಂಡಿರುವುದು ಮತ್ತೊಂದು ಹೆಮ್ಮೆಯ ವಿಷಯವಾಗಿದೆ. ಅದರಂತೆ ರಾಷ್ಟ್ರೀಯ ಹೆದ್ದಾರಿ 5೦. ಸಿಂದಗಿ ನಗರ ದೊಂದಿಗೆ ಸಂಪರ್ಕ ಬೆಸೆದಿದ್ದು ಸಾರಿಗೆ ಸಂಪರ್ಕಕ್ಕೆ ಉತ್ತಮ ನಿದರ್ಶನವಾಗಿದೆ. ಶೇಡಬಾಳ ದಿಂದ ಶಾಹಾಬಾದ ರೇಲ್ವೆ ಮಾರ್ಗವು ಮುಂಬರುವ ದಿನ ಮಾನಗಳಲ್ಲಿ ನೂತನ ರೇಲ್ವೇ ಮಾರ್ಗ ಸೃಷ್ಠಿಯಾಗುವ ಲಕ್ಷಣಗಳಿದ್ದು, ಸುತ್ತ-ಮುತ್ತಲಿನ ಎಲ್ಲಾ ತಾಲೂಕಾಗಳಿಗೆ 2೦-4೦ಕಿಮೀ ವ್ಯಾಪ್ತಿಯನ್ನು ಹೊಂದಿದೆ. ಇದರಿಂದ ಇಂಡಿ ಜಿಲ್ಲೆಯನ್ನು ಮಾಡದೇ ಸಿಂದಗಿ ಜಿಲ್ಲಾ ಕೇಂದ್ರವೆಂದು ಪರಿಗಣಿಸಿ ಈ ಭಾಗದ ಜನರ ಬಹುದಿನದ ಬೇಡಿಕೆಯಾದ ಸಿಂದಗಿ, ಆಲಮೇಲ, ದೇವರಹಿಪ್ಪರಗಿ, ತಾಳಿಕೋಟಿ ಈ ತಾಲೂಕುಗಳನ್ನು ಗಮನದಲ್ಲಿಟ್ಟು ಕೊಂಡು ಮತ್ತು ಸಾಧ್ಯವಾದರೇ ಇಂಡಿ ಮತ್ತು ಚಡಚಣ ತಾಲೂಕುಗಳನ್ನು ಸಿಂದಗಿ ಜಿಲ್ಲಾ ಕೇಂದ್ರಕ್ಕೆ ಸೇರಿಸಿ ಹೊಸ ಜಿಲ್ಲೆ ಸೃಷ್ಟಿ ಮಾಡಬೇಕು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಕೊಂಡು ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ