ಗರ್ಭಿಣಿ ತಾಯಂದಿರು ಆರೋಗ್ಯ ತಪಾಸಣೆ ಮಾಡಿಸಿ ಕೊಳ್ಳಲು ಜಾಗೃತಿವಹಿಸಿ – ಡಾ. ಎನ್.ಟಿ. ಶ್ರೀ ನಿವಾಸ್.
ಕೂಡ್ಲಿಗಿ ಜನೇವರಿ.10

ಕೂಡ್ಲಿಗಿ ಪಟ್ಟಣದ ಮಂಗಳವಾರ 9.ರಂದು ತಾಲೂಕಾ ಆಸ್ಪತ್ರೆ ಕೂಡ್ಲಿಗಿಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಮಾತೃತ್ವ ಅಭಿಯಾನ ದಿನದ ಪ್ರಯುಕ್ತ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯನಗರ ಜಿಲ್ಲಾ ಎಚ್ ಐ ವಿ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕ ವಿಜಯನಗರ ತಾಲೂಕಾ ಆರೋಗ್ಯ ಇಲಾಖೆ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ ಸಹಯೋಗದೊಂದಿಗೆ ತಾಯಿಯಿಂದ ಮಗುವಿಗೆ ಎಚ್ಐವಿ ಸಿಪಿಲಿಸ್ ಹೆಪಟೈಟಿಸ್ ನಿರ್ಮೂಲನೆಗಾಗಿ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಮಾನ್ಯ ಜನಪ್ರಿಯ ಶಾಸಕರು ಆದ ಡಾಕ್ಟರ್ ಎನ್. ಟಿ ಶ್ರೀನಿವಾಸ್ ರವರು ಮಾತನಾಡುತ್ತಾ ತಾಯಿಯಿಂದ ಮಗುವಿಗೆ ಹೆಚ್ಐವಿ ಸೋಂಕು ಮತ್ತು ಸಿಫಲಿಸ್ ಹೆಪಟೈಟಿಸ್ ಹರಡದಂತೆ ಪರೀಕ್ಷೆಗಳನ್ನು ಮಾಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದು ಕೊಂಡರೆ ಮುಂದೆ ಜನಿಸಿದವ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ನೋಡಿ ಕೊಳ್ಳಬಹುದು ಹಾಗೆಯೇ ಮುಂಚಿತವಾಗಿ ಗರ್ಭಿಣಿ ಎಂದು ಗೊತ್ತಾದ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿರುವ ಎಲ್ಲ ರೀತಿಯ ರಕ್ತ ತಪಾಸಣೆಯನ್ನು ಮಾಡಿಸಿ ಕೊಂಡು ಜಾಗೃತರಾದರೆ ಆರೋಗ್ಯವಂತ ಮಕ್ಕಳು ಹುಟ್ಟಲು ಸಹಕಾರಿಯಾಗುತ್ತದೆ, ಎಂದು ತಿಳಿಸಿದರು. ನಂತರ ತಾಲೂಕು ಸಾರ್ವಜನಿಕಾ ಆಸ್ಪತ್ರೆಯ ಸ್ತ್ರೀರೋಗ ತಜ್ಞರಾದ ಡಾಕ್ಟರ್ ನಾಗರಾಜ್ ರವರು ಮಾತನಾಡುತ್ತಾ ಹೆಚ್ಐವಿ ಸಿಪಿಲಿಸ್ ಯಾವ ರೀತಿ ಹರಡುತ್ತದೆ, ಹೇಗೆಲ್ಲಾ ಹರಡುವುದು ಎನ್ನುವ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು.

ನೀವುಗಳು ಯಾವ ರೀತಿ ಆರೋಗ್ಯದ ಬಗ್ಗೆ ಹಾಗೂ ಚಿಕಿತ್ಸೆ ಬಗ್ಗೆ ತಮ್ಮನ್ನು ತಾವುಗಳು ಆರೋಗ್ಯದ ಕುರಿತು ಹೆಚ್ಚು ಗಮನ ಹರಿಸುತ್ತಿರೋ ಆಗ ಮಾತ್ರ ನೀವುಗಳು ಸುರಕ್ಷಿತವಾಗಿರಲು ಸಾಧ್ಯ ಎಂದು ಮಾತನಾಡುತ್ತ ನೆರೆದಂತವರಿಗೆ ತಿಳಿಸಿದರು.ನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾಕ್ಟರ್ ಮಧುರವರು ಮಾತನಾಡುತ್ತಾ ಹೆಪಟೈಟಿಸ್ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು.ನಂತರ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾಕ್ಟರ್ ಎಸ್ ಪಿ ಪ್ರದೀಪ್ ಕುಮಾರ್ ರವರು ಮಾತನಾಡುತ್ತಾ ಈ ರೀತಿಯಾದ ಕಾರ್ಯಕ್ರಮಗಳಲ್ಲಿ ತಾವು ಭಾಗಿಯಾಗುವುದು ಒಳ್ಳೆಯದು ತಮಗೆಲ್ಲರಿಗೂ ಆರೋಗ್ಯದ ಚಿಕಿತ್ಸೆ ಬಗ್ಗೆ ಜೊತೆಗೆ ಗರ್ಭಿಣಿ ಎಂಬ ನಿಶ್ಚಿತ ದಿನದಿಂದ ಹೆರಿಗೆ ಆಗುವತನಕ ಸೂಕ್ತ ತಪಾಸಣೆಯೊಂದಿಗೆ ಇದ್ದರೆ ಯಾವುದೇ ಭಯ ನಮ್ಮಲ್ಲಿ ಇರುವುದಿಲ್ಲ ಹಾಗೆ ಸಣ್ಣ ಪುಟ್ಟ ಕಾಯಿಲೆಯ ಬಗ್ಗೆ ಜಾಗೃತಿ ವಹಿಸಿದರೆ ತಾವುಗಳು ಹುಟ್ಟುವಂತ ತಮ್ಮ ಮಕ್ಕಳು ಸುರಕ್ಷಿತವಾಗಿ ಇರುತ್ತಾರೆ,ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಆದ ಶ್ರೀ ಜಗದೀಶ್ ನಾಯ್ಕ್ ಆಪ್ತ ಸಮಾಲೋಚಕರುಗಳಾದ ಕೆ. ಪ್ರಶಾಂತ್ ಕುಮಾರ್ ಶ್ರೀಮತಿ ನಾಗರತ್ನ,ಗಂಗಮ್ಮ ಜೆ.ಜಿ ಸೋಮಶೇಖರ್, ಗಂಗಮ್ಮ,ವಿನಯ್, ವೇದಾವತಿ,ಹೆಚ್ ಗುರುಬಸವರಾಜ.ಎಚ್, ಪತ್ರಿಗೌಡ,ದೇವಮ್ಮ, ಉಮಾ, ರೇಣುಕಾ, ತಿಪ್ಪೇಸ್ವಾಮಿ, ನಾಗರಾಜ 40.ಕ್ಕೂ ಅಧಿಕ ಗರ್ಭಿಣಿ ಸ್ತ್ರೀಯರು ಭಾಗವಹಿಸಿದ್ದು ಹಾಗೂ ಆಶಾ ಕಾರ್ಯಕರ್ತೆಯರು ಇದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ. ಕೂಡ್ಲಿಗಿ