ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಿ – ಶಿವಾನಂದ ಕಂಠಿ.
ಹುನಗುಂದ ಜನೇವರಿ.10

ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಜೊತೆಗೆ ಪೌಷ್ಠಿಕ ಆಹಾರ ಸೇವಿಸಬೇಕು ಎಂದು ಆರೋಗ್ಯ ಸಮಿತಿ ಉಪಾದ್ಯಕ್ಷ ಶಿವಾನಂದ ಕಂಠಿ ಹೇಳಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸೆನ್ ಬೆಂಗಳೂರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ ಬಾಗಲಕೋಟ, ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಹುನಗುಂದ ಹಾಗೂ ಐಸಿಟಿಸಿ ತಾಲೂಕ ಸಾರ್ವಜನಿಕ ಆಸ್ಪತ್ರೆ ಇವರ ಸಹಯೋಗದಲ್ಲಿ ತಾಯಿಯಿಂದ ಮಗುವಿಗೆ ಹೆಚ್ಐವಿ,ಸಿಫಿಲಿಸ್ ಮತ್ತು ಹೆಪಟೈಟಿಸ್ ಹರಡುವಿಕೆ ನಿರ್ಮೂಲನೆ ಆಂದೋಲನ ಮತ್ತು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಗರ್ಭಿಣಿ ಮಹಿಳೆಯರು ಆರೋಗ್ಯವಾಗಿದ್ದರೇ ನಿಮಗೆ ಹುಟ್ಟುವ ಮಗು ಕೂಡಾ ಆರೋಗ್ಯವಾಗಿರುತ್ತದೆ.ಗರ್ಭಿಣಿ ಸಮಯದಲ್ಲಿ ಆರೋಗ್ಯದ ವಿಷಯದಲ್ಲಿ ನಿಷ್ಕಾಳಜಿ ಮಾಡಬೇಡಿ.ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ತಕ್ಷಣವೇ ವೈದ್ಯರ ಭೇಟಿ ಮಾಡಿ ಸಲಹೆ ಸೂಚನೆಯನ್ನು ಪಡೆದು ಕೊಳ್ಳಬೇಕು.ಗರ್ಭಿಣಿ ಮತ್ತು ಮಗುವಿನ ಆರೋಗ್ಯದ ದೃಷ್ಠಿಯಿಂದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಸದುಪಯೋಗ ಪಡೆದು ಕೊಳ್ಳಬೇಕು ಎಂದರು.ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಂಜೀವ ಜೋಶಿ ಮಾತನಾಡಿ ಗರ್ಭಿಣಿ ಮಹಿಳೆಯರು ಮನಸ್ಸು ಸದಾ ಕಾಲ ಖುಷಿ ಮತ್ತು ಉಲ್ಲಾಸದಿಂದ ಕೂಡಿರಬೇಕು.ಅಂದಾಗ ಮಾತ್ರ ಮಗುವಿನ ಬೆಳವಣೆಗೆ ಕೂಡಾ ಚನ್ನಾಗಿರುತ್ತದೆ.ಗರ್ಭಿಣಿಯರು ಭಗದ್ಗೀತೆ,ಕುರಾನ,ಬೈಬಲ್ದಂತ ಅನೇಕ ವಿಷಯಗಳ ಪುಸ್ತಕಗಳನ್ನು ಓದಿ ಅವಾಗ ನಿಮ್ಮ ಮನಸ್ಸು ಸಂತೋಷವಾಗಿರುತ್ತದೆ ಎಂದರು. ಮುಖ್ಯ ವೈಧ್ಯಾಧಿಕಾರಿ ಡಾ. ಮಂಜುನಾಥ ಅಂಕೋಲ್ಕರ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿ ತೊಡಕಿನ ಗರ್ಭಿಣಿಯರನ್ನು ಅಂದರೇ ಬಿಪಿ,ಶುಗರ್,ಥರ್ಯಾಡ್ ಸೇರಿದಂತೆ ಅನೇಕ ಸೊಂಕುಗಳನ್ನು ಹೊಂದಿದ ಗರ್ಭಿಣಿಯರನ್ನು ಕಂಡು ಹಿಡಿದು ತಾಲೂಕಾ ಆಸ್ಪತ್ರೆಗೆ ಕರೆ ತಂದು ಪ್ರತಿ ತಿಂಗಳು 9 ರಂದು ಚಿಕಿತ್ಸೆ ನೀಡಲಾಗುತ್ತದೆ.ಗರ್ಭಿಣಿ ಅನ್ನುವುದು ತಿಳಿದ ತಕ್ಷಣವೇ ಸ್ಕ್ಯಾನ್ ಮಾಡಬೇಕು.ಕೆಲವೊಬ್ಬರು ಮೂರು ತಿಂಗಳ ಸ್ಕ್ಯಾನ್ ಮಾಡಿಸದೇ ನಾಲ್ಕೆದನೆಯ ತಿಂಗಳಲ್ಲಿ ಟೆಸ್ಟ್ ಮಾಡಿಸೋದರಿಂದ ಮಗುವಿನ ಬೆಳವಣೆ ಬಗ್ಗೆ ಸರಿಯಾಗಿ ತಿಳಿದು ಕೊಳ್ಳಲು ಆಗೋದಿಲ್ಲ.ಗರ್ಭಿಣಿಯರು ೫ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.ಏಡ್ಸ್ ಸೊಂಕು ಹೊಂದಿದ ಗರ್ಭಿಣಿಯರ ಮಗುವುಗೆ ಸೊಂಕು ತಗುಲದ ರೀತಿಯಲ್ಲಿ ಔಷದೋಪಚಾರಗಳನ್ನು ಮಾಡುವುದರಿಂದ ಮಗುವನ್ನು ಸೊಂಕಿನಿಂದ ತಡೆಯಲು ಸಾಧ್ಯ,ಇನ್ನು ರಕ್ತ ಹೀನತೆಯಿಂದ ಬಳಲು ಗರ್ಭಿಣಿಯರು ಸಕಾಲಕ್ಕೆ ವೈಧ್ಯರನ್ನು ಸಂಪರ್ಕಿಸಿ ತಮ್ಮ ಆರೋಗ್ಯ ರಕ್ಷಣೆಗೆ ಸಲಹೆ ಪಡೆಯಬೇಕು ಎಚಿದರು.ಈ ವೇಳೆ 5೦ ಜನ ಗರ್ಭಿಣಿ ಮಹಿಳೆಯರಿಗೆ ಉಡಿ ತುಂಬಿ ಸೀಮಂತ ಕಾರ್ಯಕ್ರಮ ನಡೆಯಿತು. ಚಿಕ್ಕ ಮಕ್ಕಳ ತಜ್ಞೆ ಡಾ. ಸುಜಾತಾ ಮಾತನಾಡಿದರು. ಶಕುಂತಲಾ ಗಂಜಿಹಾಳ, ರಫೀಕ್ ವಾಲಿಕಾರ ಮತ್ತು ಕಾನಿಪ ಅಧ್ಯಕ್ಷ ಮಹಾಂತೇಶ ಪಾಟೀಲ, ಹಿರಿಯ ಸಲಹೆಗಾರ ಪ್ರವೀಣ ಚೂರಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ .