ವಿಶ್ವ ರಕ್ತದಾನಿಗಳ ದಿನ ವ್ಯಕ್ತಿಯ ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿಗೆ ರಕ್ತದಾನ ಬಹು ಮುಖ್ಯ – ಅನಿಲ ಪತಂಗಿ

ಇಂಡಿ ಜೂನ್.14

ಇಂಡಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿ ಆಗಿ,ಉತ್ತಮ ಆರೋಗ್ಯದ ಜೊತೆಗೆ ದಾನಿಯ
ಕಾರ್ಯತತ್ಪರತೆ ಹಾಗೂ ಜ್ಞಾಪಕಶಕ್ತಿ ಹೆಚ್ಚುತ್ತದೆ ಹಾಗೂ ಹೃದಯಾಘಾತ ಆಗುವುದನ್ನು ಶೇ.80ರಷ್ಟು ಕಡಿಮೆ ಮಾಡುತ್ತದೆ ಎಂದು ಕೆಬಿಎಸ್ ಶಾಲಾ ಮುಖ್ಯ ಶಿಕ್ಷಕ ಅನಿಲ. ಪತಂಗಿ. ಹೇಳಿದರು.

ಅವರು ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್,ಯುಬಿಎಸ್ ಶಾಲೆಯ ವತಿಯಿಂದ ಹಮ್ಮಿಕೊಂಡ ವಿಶ್ವ ರಕ್ತದಾನಿಗಳ ದಿನಕ್ಕೆ ಚಾಲನೆ ನೀಡಿ ಮಾತನಾಡಿದರು.

ಯುಬಿಎಸ್ ಶಾಲಾ ಇಂಗ್ಲೀಷ ಶಿಕ್ಷಕ ಸಂತೋಷ. ಬಂಡೆ. ಮಾತನಾಡಿ ರಕ್ತದಾನವು ಒಗ್ಗಟ್ಟಿನ ಕ್ರಿಯೆಯಾಗಿದೆ. 
ಜೀವಗಳನ್ನು ಉಳಿಸುವಲ್ಲಿ ಮತ್ತು ಸಮುದಾಯಗಳಲ್ಲಿ ಒಗ್ಗಟ್ಟನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜತೆಗೆ ಸಾಮಾಜಿಕ ಕಳಕಳಿಯ ಕಡೆಗೂ ಗಮನ ನೀಡಬೇಕು ಎಂದು ಹೇಳಿದರು.

ಶಿಕ್ಷಕ ಎಸ್. ಆರ್. ಚಾಳೇಕಾರ ಮಾತನಾಡಿ,18 ರಿಂದ 60 ವರ್ಷದವರೆಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತ್ಯಗತ್ಯ ಮತ್ತು ಇದು ದಾನಿಗಳಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಜಿಎಸ್ ಶಾಲಾ ಮುಖ್ಯ ಶಿಕ್ಷಕ ಸುರೇಶ. ಅಂಕಲಗಿ, ರಕ್ತದಾನದಿಂದ ಸಮಾಜದೊಂದಿಗೆ ಆತ್ಮೀಯತೆ ಬೆಳೆಯುತ್ತದೆ. ಇದರಿಂದ ಪ್ರಾಣ ಉಳಿಸಿದ ಧನ್ಯತಾಭಾವವು ಸಿಗುತ್ತದೆ. ಎಲ್ಲರೂ ರಕ್ತದಾನದಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಹೇಳಿದರು.

ಯುಬಿಎಸ್ ಶಾಲಾ ಮುಖ್ಯ ಶಿಕ್ಷಕ ಎ. ಎಂ. ಬೆದ್ರೇಕರ, ಶಿಕ್ಷಕರಾದ ಎಸ್. ಎಂ. ಪಂಚಮುಖಿ, ವಿ. ವೈ. ಪತ್ತಾರ,
ಜೆ. ಎಂ. ಪತಂಗಿ,ಸಾವಿತ್ರಿ ಸಂಗಮದ,ಎಸ್ ಬಿ ಕುಲಕರ್ಣಿ,ಜೆ ಸಿ ಗುಣಕಿ,ಎಸ್ ಎನ್ ಡಂಗಿ,ಎಂ ಎಂ ಪತ್ತಾರ, ಸುರೇಶ ದೊಡ್ಯಾಳಕರ,ಎಸ್ ಎಚ್ ಮೈದರಗಿ,ಎನ್ ಬಿ ಚೌಧರಿ,ಎಸ್ ಪಿ ಪೂಜಾರಿ,ಯಲ್ಲಮ್ಮ ಸಾಲೂಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button