ಪಾರಂಪರಿಕವಾದ ಮಕರ ಸಂಕ್ರಾಂತಿ ಹಬ್ಬ…..

ಹಬ್ಬವನು ಮಾಡುವರು ಸಂತಸದಿ ಜೀವನದಿಕಬ್ಬಿನದು ಸಿಹಿಯದುವೆ ಸವಿಯುತಲಿಯೆಕೊಬ್ಬು ನೀ ತೋರದೆಯೆ ಸಾಗುತಿರು ಬಾಳಿನಲಿತಬ್ಬುತಲಿ ಸಂಬಂಧ ಲಕ್ಷ್ಮಿ ದೇವಿ……. ಹಬ್ಬವನ್ನು ಪ್ರತಿಯೊಬ್ಬರು ಸಂತಸದಿಂದ ಆಚರಿಸುತ್ತಾರೆ. ಜೀವನ ಎಂದ ಮೇಲೆ ಬಹಳಷ್ಟು ಕಷ್ಟಪಡಲೇಬೇಕು. ಅಂತಹ ಜೀವನದಲ್ಲಿ ಕಬ್ಬಿನಲ್ಲಿರುವ ಸಿಹಿಯನ್ನು ಸವಿಯುವಂತೆ ಕೆಲವೊಮ್ಮೆ ಆದರೆ ಕೆಲವೊಮ್ಮೆ ಕಹಿಯಂತೆ ಕಷ್ಟಗಳು ಬರಬಹುದು . ಎಂದಿಗೂ ಜೀವನದಲ್ಲಿ ಕೊಬ್ಬು ತೋರದಲ್ಲೇ ನಡೆಯಬೇಕು. ಎಲ್ಲರೊಂದಿಗೆ ಹೊಂದಿಕೊಳ್ಳುತ್ತಾ ಬಾಳಬೇಕು. ಏಕೆಂದರೆ ಬಾಳು ಎಂದು ಕೊನೆಯಾಗುವುದು ಯಾರಿಗೂ ತಿಳಿದಿಲ್ಲ .ಜೀವನ ನೀರಿನ ಮೇಲಿನ ಗುಳ್ಳೆ ಇದ್ದಂತೆ. ಯಾವಾಗ ಏನು ಆಗುತ್ತದೆ ಎಂದು ತಿಳಿಯದು. ಹೀಗೆ ನಡೆಯುತ್ತಾ ಹೋದ ಜೀವನದಲ್ಲಿ ಕೊರೊನದ ಹಾವಳಿಯ ವರ್ಷದಂದು ದುಃಖಿಯಾಗಿದ್ದ ಜನರು ಕೊರೋನಾ ನಂತರದಲ್ಲಿ ಬಂದಂತಹ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಸಂತಸದಿಂದ ಪ್ರತಿಯೊಬ್ಬರು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಬಹಳಷ್ಟು ನೋವು ಕಂಡ ಜನತೆ ಈಗ ಸ್ವಲ್ಪ ನಿಟ್ಟುಸಿರು ಬಿಡುತ್ತಿದ್ದಾರೆ. ಎಲ್ಲವೂ ದುಬಾರಿಯಾದರು. ಆದರೂ ಸಹ ಯುಗಯುಗದಿಂದ ಆಚರಿಸಿಕೊಂಡು ಬಂದಂತಹ ಸಾಂಪ್ರದಾಯಿಕ ಹಬ್ಬ ವನ್ನು ಆಚರಿಸಲು ಮನೆಯಲ್ಲಿ ಎಲ್ಲಾ ಮಹಿಳೆಯರು ಮನೆ ಶುದ್ಧ ಮಾಡಿಕೊಂಡು ಹಬ್ಬಕ್ಕೆ ಬೇಕಾದ ವಸ್ತುಗಳ ಸಿದ್ಧತೆಯಲ್ಲಿ ತೊಡಗಿದ್ದಾರೆ.ಮಕರ ಸಂಕ್ರಾಂತಿ ಎಂದರೆ ಉತ್ತರಾಯಣ ಪುಣ್ಯಕಾಲದ ಮಹಾಪರ್ವ ದಿನ. ಎಲ್ಲರಿಗೂ ಸಂತಸವನ್ನು ತರುವ ಹೊಸ ಕಳೆ, ಹೊಸ ಬೆಳೆ, ಹೊಸತನವನ್ನು ಪ್ರಾರಂಭಿಸುವ ಮಕರ ಸಂಕ್ರಾಂತಿ ಹಬ್ಬವನ್ನು ರೈತಾಪಿಗಳಂತೂ ಸಂಭ್ರಮದಿಂದ ಆಚರಿಸುತ್ತಾರೆ. ರೈತರಿಗೊಂದು ಇದು ಸುಗ್ಗಿಯ ಹಬ್ಬವಾಗಿದೆ. ಎಲ್ಲೆಡೆಯೂ ರೈತರು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬಕ್ಕೆ ರೈತರು,ಮಹಿಳೆಯರು, ಮಕ್ಕಳೆಲ್ಲ, ಹಿರಿಯರೊಂದಿಗೆ ಹೊಲದಲ್ಲಿ ಬೆಳೆದ ಬೆಳೆಯ ಜೊತೆಗೆ ಕಬ್ಬು,, ಅವರೆ ಕಾಯಿ, ಕುಂಬಳೇ, ಕಡಲೆಕಾಯಿ, ಹೀಗೆ ಹಲವಾರು ವಸ್ತುಗಳು ಸಿದ್ಧಪಡಿಸಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮಹಿಳೆಯರಂತೂ ಮನೆಯನ್ನು ಶುದ್ಧಪಡಿಸಿಕೊಂಡು ಕೊಬ್ಬರಿ, ಎಳ್ಳು, ಬೆಲ್ಲ, ಎಲ್ಲವನ್ನು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿಕೊಂಡು ಸ್ವಚ್ಛತೆಯಿಂದ ಮಡಿ ಮೈಲಿಗೆಯಿಂದ ಹಬ್ಬಕ್ಕೆ ಸಿದ್ಧಪಡಿಸುತ್ತಾರೆ. ಅಂತೆಯೇ ನಮ್ಮ ಪುಟ್ಟ ಹೆಣ್ಣು ಮಕ್ಕಳು, ಗಂಡು ಮಕ್ಕಳು, ಹಾಗೂ ಯುವತಿಯರು ಲಂಗ ದವಣಿಗಳನ್ನು ಹಾಕಿಕೊಂಡು, ಆಭರಣಗಳನ್ನು ಹಾಕಿಕೊಂಡು,ಒಟ್ಟಾರೆ ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದ ಸಂಜೆ ಎಲ್ಲರ ನೆಂಟರಿಷ್ಟರ, ಸ್ನೇಹಿತರ, ಹೀಗೆ ಬಂಧು ಬಾಂಧವರಿಗೆಲ್ಲರಿಗೂ ಎಳ್ಳು ಬೆಲ್ಲವನ್ನು ಹಂಚುತ್ತಾ ಖುಷಿ ಖುಷಿಯಾಗಿ ಆಟವಾಡುತ್ತಾ ಹಬ್ಬವನ್ನು ಆಚರಿಸುತ್ತಾರೆ. “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು” ಎಂಬ ಮಾತಿನಂತೆ ಈಗ ಚಳಿಗಾಲದ ಸಮಯ ನಮ್ಮ ಹಿರಿಯರು ಪಾರಂಪರಿಕವಾಗಿ ಆಚರಿಸುತ್ತಾ ಬರುತ್ತಿರುವ ಈ ಹಬ್ಬ ಆರೋಗ್ಯಕ್ಕೆ ಹಾನಿಯಾಗದಂತಹ ಈ ಚಳಿಗಾಲಕ್ಕೆ ಹೊಂದಿಕೊಳ್ಳುವಂತಹ ಎಳ್ಳು ಬೆಲ್ಲ ಮತ್ತು ಕೊಬ್ಬರಿಯನ್ನು ತಿನ್ನುವುದರಿಂದ ಈ ಸಮಯಕ್ಕೆ ದೇಹಕ್ಕೆ ಆರೋಗ್ಯಕರವಾಗಿರುವುದೆಂದು ಹಿರಿಕರು ಈ ವಸ್ತುಗಳನ್ನು ಪೂಜ್ಯ ಭಾವನೆಯಿಂದ ಸ್ನೇಹದಿಂದ ಒಬ್ಬರಿಗೊಬ್ಬರು ಹಂಚಿಸುವ ಕೆಲಸವನ್ನು ಮಾಡುತ್ತಿದ್ದರು. ಇದು ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಮತ್ತು ಎಲ್ಲರಿಗೂ ಆರೋಗ್ಯವಾಗಿರಲು ಸಹಕಾರವಾಗಿತ್ತದೆ .ಪ್ರೀತಿ ವಿಶ್ವಾಸವನ್ನು ಹೆಚ್ಚಿಸುತ್ತದೆ. ಪಾರಂಪರಿಕವಾಗಿ ಬಂದಂತಹ ಈ ಹಬ್ಬದ ಆಚರಣೆಯು ಕೆಲವು ವರ್ಷದಿಂದ ಈ ಕೊರೊನ ಎಂಬ ಮಹಾಮಾರಿಗೆ ಸಿಲುಕಿದ ಜನರೆಲ್ಲರೂ ತತ್ತರಿಸಿ ಹೋಗಿದ್ದರು. ಆ ಮಹಾಮಾರಿಯನ್ನು ತೊಲಗಿಸಿ ಕೆಲ ವರ್ಷದಿಂದ ಈಗ ಸಂಕ್ರಾಂತಿ ಹಬ್ಬವನ್ನು ಎಲ್ಲರೂ ಸಂಭ್ರಮದಿಂದ ಆಚರಣೆ ಮಾಡುವಲ್ಲಿ ತೊಡಗಿದ್ದಾರೆ. ಬಡವನಾಗಲಿ,ಶ್ರೀಮಂತನಾಗಲಿ ಈ ಹಬ್ಬವನ್ನು ತನ್ನ ಕೈಯಲ್ಲಿ ಆಗುವಷ್ಟು ಆಚರಣೆಯನ್ನು ಮಾಡುತ್ತಾನೆ. ಎಷ್ಟೋ ಜನರು ಮಾತನಾಡದಿದ್ದರೂ ಸಹ , ಮಾತು ಬಿಟ್ಟರೂ ಸಹ ಈ ಹಬ್ಬದಿಂದ ಎಳ್ಳು ಬೆಲ್ಲವನ್ನು ಹಂಚುವುದರ ಮುಖಾಂತರ ಒಂದಾಗಿರುವ ಉದಾಹರಣೆಗಳಿವೆ. ಅದರಲ್ಲಂತೂ ನಮ್ಮ ಯುವತಿಯರು, ಮಕ್ಕಳು, ಸೀರೆ, ಬಣ್ಣ ಬಣ್ಣದ ಲಂಗ ಹಾಕಿಕೊಂಡು ಮನೆಯ ಮುಂದೆ ದೊಡ್ಡದಾದ ಬಣ್ಣದ ರಂಗೋಲಿಯನ್ನು ಹಾಕುತ್ತಾ. ರೈತರೆಲ್ಲರೂ ಬೆಳೆದ ಬೆಳೆಯನ್ನು ಚಿಗುರಿನ ಸಂಭ್ರಮದಲ್ಲಿ ಸಂತೋಷದಿಂದ ಆಚರಿಸುತ್ತಾರೆ.” ಹಬ್ಬವನು ಸಂಭ್ರಮದಲ್ಲಿ ಆಚರಿಸುತಲಿ ರೈತರೆಲ್ಲ ಬೆಳೆಗಳನ್ನು ಬೆಳೆಯುತಲಿ ಪೂಜೆಯನು ಮಾಡುತಲಿ ಸಂಭ್ರಮಿಸುತ ಬಾಳುತಿರು ಎಲ್ಲರೊಂದಿಗೂ ಜೊತೆಯಾಗಿರುತ ಅಂದು,ಇಂದು ಎಂದು ಕಾಣುತಿರಿ ಸಂತಸದಿ ನೀಡದಿರು ದ್ವೇಷ ಎಂಬ ಅಸೂಯನು ಸಂಕ್ರಾಂತಿ ಹಬ್ಬವನು ಎಲ್ಲರೂ ಕೂಡಿ ಬೆಲ್ಲವ ಹಂಚಿ ಸಂತಸವ ಪಡುತಲಿ ” ಸಂಭ್ರಮದಿಂದ ಸಂಕ್ರಾಂತಿಯನ್ನು ಆಚರಿಸುವುದು. ಎಲ್ಲರಲ್ಲಿಯೂ ಸಂತಸವನ್ನು ತರುವುದು. ಮನೆಯಲ್ಲಿ ತಾಯಿಯು ಹಬ್ಬದ ವಿಶೇಷ ಖಾದ್ಯವಾದ ಸಿಹಿ ಹುಗ್ಗಿ, ಖಾರದ ಹುಗ್ಗಿ, ಬೇಯಿಸಿದಂತ ಅವರೆಕಾಯಿ, ಕಡಲೆಕಾಯಿ, ಗೆಣಸು, ಹೀಗೆ ಹಲವಾರು ಅಡುಗೆಗಳನ್ನು ಮಾಡುವುದರ ಮುಖಾಂತರ ಮನೆಯಲ್ಲಿ ದೇವರಿಗೆ ಪೂಜೆ ಮಾಡಿದ ನಂತರ ಹಬ್ಬದ ಅಡುಗೆಯನ್ನು ಸವಿಯಲು ನೀಡುತ್ತಾಳೆ.ನಮ್ಮ ಪಾರಂಪರಿಕವಾಗಿ ಆಚರಣೆ ಮಾಡಿಕೊಂಡು ಬರುತ್ತಿರುವ ಈ ಮಕರ ಸಂಕ್ರಾಂತಿ ಹಬ್ಬವನ್ನು ದಯಮಾಡಿ ಮೊಬೈಲನ್ನು ಬಳಸಿಕೊಂಡು ಮೆಸೇಜ್ ಮೂಲಕ ಶುಭಾಶಯಗಳು ತಿಳಿಸುವುದು . ಪ್ರೀತಿಯಿಂದ ಮೊಬೈಲ್ ನಲ್ಲೆ ಮೆಸೇಜ್ ಕಳಿಸುವುದರ ಮುಖಾಂತರ ಹಬ್ಬದ ಆಚರಣೆಯನ್ನು ಮಾಡುವುದು ಬೇಡ. ವಿಡಿಯೋ ಕಾಲ್ ಗಳ ಮುಖಾಂತರ ಮಾತನಾಡಿ ತಮ್ಮ ಹುಡುಗಿಗಳನ್ನು ತೋರುತ್ತ ಹಬ್ಬದ ಶುಭಾಶಯಗಳು ಹೇಳುವುದು ಬೇಡ. ಎಲ್ಲರ ಮನೆಗೂ ಪರಸ್ಪರ ಭೇಟಿಯನ್ನು ನೀಡುತ್ತಾ ಒಬ್ಬರಿಗೊಬ್ಬರು ಮಾತನಾಡಿಸುತ್ತ “ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡು “ಎಂಬ ನುಡಿಯಂತೆ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಕೊರೊನ ಎಂಬ ಮಹಾಮಾರಿ ಹೋಗಿದೆ ಎಂದು ತಿಳಿದರು . ಮತ್ತೆ ಕೊರೋನದ ಹಾವಳಿ ಇದೆ ಎಂಬುದು ಸುದ್ದಿಯಲ್ಲಿದೆ. ಎಚ್ಚರದಿಂದ ಆರೋಗ್ಯವಾಗಿ ಸಂಬಂಧಗಳಲ್ಲಿ ಬಿರುಕು ಬಾರದಂತೆ ಹಬ್ಬವನ್ನು ಆಚರಿಸೋಣ.ನಮ್ಮ ಆರೋಗ್ಯವೂ ನಮ್ಮ ಕೈಯಲ್ಲಿದೆ ಎಂಬುದು ಅರಿತು ಎಲ್ಲರೂ ಎಚ್ಚರಿಕೆಯಿಂದ ಮಕರ ಸಂಕ್ರಾಂತಿಯನ್ನು ಆಚರಿಸುತ್ತಾ ಸಹಬಾಳ್ವೆಯಿಂದ ಬಾಳ ಬೇಕು ಮಕರ ಸಂಕ್ರಾಂತಿ ಹಬ್ಬವನ್ನು ಹೊಸ ಚಿಗುರಿನೊಂದಿಗೆ , ಹೊಸತನದೊಂದಿಗೆ, ಹೊಸ ಆಸೆಗಳೊಂದಿಗೆ, ಒಟ್ಟಾರೆ ಪ್ರೀತಿಯಿಂದ ಬಂಧು ಬಾಂಧವರೆಲ್ಲರೂ ಎಳ್ಳು,ಬೆಲ್ಲವನ್ನು ಹಂಚುತ್ತಾ ಸಹ ಬಾಳ್ವೆ, ಶಾಂತಿ, ಸಂತೋಷದಿಂದ, ಒಳ್ಳೆಯ ಮಾತನಾಡುತ್ತಾ ಹೊಂದಿಕೊಂಡು ಹೊಂದಾಣಿಕೆ ಮಾಡಿಕೊಳ್ಳುತ್ತಾ, ಕೆಟ್ಟ ವಿಚಾರಗಳನ್ನು ಮಾಡದ ರೀತಿಯಲ್ಲಿ, ಎಲ್ಲರೂ ಸಂತೋಷದಿಂದ ಒಟ್ಟಾಗಿ ಬಾಳೋಣ. ನೀರಿನ ಮೇಲಿನ ಗುಳ್ಳೆಯ ಜೀವನ ನಮ್ಮದಾಗಿರುವಾಗ ಇಂತಹ ಜೀವನದಲ್ಲಿ ಒಳ್ಳೆಯ ಕೆಲಸವನ್ನು ಮಾಡೋಣ. ಪ್ರೀತಿ ವಿಶ್ವಾಸದಿಂದ ಬಾಳೋಣ. ನಮ್ಮ ಹಿಂದೂ ಸಂಪ್ರದಾಯದ ಹಬ್ಬಗಳನ್ನು ಸಂಭ್ರಮದಿಂದ, ಸಡಗರದಿಂದ, ಆಚರಿಸುತ ಎಲ್ಲರೂ ಬಾಳೋಣ. ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಮೆಗೆ ಪ್ರಾಣ ಪ್ರತಿಷ್ಠಾನ ಆಗುತ್ತಿರುವುದು ಎಲ್ಲರಿಗೂ ತಿಳಿದಿರುವಂತಹ ವಿಷಯವೇ. ಇಂತಹ ಖುಷಿಯೊಂದಿಗೆ ಇಂದಿನ 2024ನೇ ಸಾಲಿನ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿರುವುದು ಸಂತಸದ ವಿಷಯ. ಕೆಟ್ಟ ವಿಚಾರಗಳನ್ನು ಬಿಟ್ಟು. ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ. ಎಲ್ಲರಿಗೂ ಖುಷಿಯನ್ನು ಹಂಚೋಣ. ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಜೈ ಹಿಂದ್ ಜೈ ಭಾರತ್ ಮಾತೆ.

ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.

ಸಾಮಾಜಿಕ ಚಿಂತಕಿ.ಶಿಕ್ಷಕಿ.ಹಾಸನ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button