ವೃತ್ತಿಯಲ್ಲಿ ದೇವಿಯ ಆರಾಧಕರು, ಪ್ರವೃತ್ತಿಯಲ್ಲಿ ಸಮಾಜ ಸೇವಕರು.

ತುಪ್ಪದಹಳ್ಳಿ ಜನೇವರಿ.11

ಇತೀಚಿನ ದಿನಗಳಲ್ಲಿ ಕೆಲವು ಪೂಜಾರಿಗಳು ಮಾನವೀಯ ಮೌಲ್ಯಗಳನ್ನು ಬೆಳೆಸಿ ಕೊಂಡು, ಕೆಲವು ಸಮಾಜ ಸೇವೆಗಳನ್ನು ಮಾಡುತ್ತಿದ್ದಾರೆ‌.ಪೂಜಾರಿಗಳು ‌ವೃತಿಯಲ್ಲಿ ದೇವರ ಆರಾಧಕರಾಗಿದ್ದು, ಪ್ರವೃತಿಯಲ್ಲಿ ಸಮಾಜ ಸೇವಕರಾಗಿರುತ್ತಾರೆ. ಸಮಾಜವನ್ನು ಎಚೆತ್ತು ಕೊಳ್ಳುವಲ್ಲಿ ಅವರ ಸೇವೆಯು ಪಾತ್ರ ಬಹಳ ಹಿರಿದಾದದ್ದು. ಅದರಲ್ಲಿ ಕೆಲವರು ಸಮಾಜ ಸೇವೆ ಮಾಡುವವರನ್ನೂ, ಗುರುತಿಸಿ, ಅವರ ಸೇವೆಯನ್ನು ಮೆಚ್ಚಿ, ಅವರಿಗೆ ಸಲ್ಲುವ ಗೌರವ ಸನ್ಮಾನ ಮಾಡುವವರ ಸಂಖ್ಯೆ ಅತಿ ವಿರಳ ಎಂದರೆ ತಪ್ಪಾಗಲಾರದು.‍ಇಂತಹ ಸನ್ಮಾನ ಮಾಡುವ ಕೆಲವು ಪೂಜಾರಿಗಳಿಗೆ ನಮ್ಮ “ಸಿಹಿ-ಕಹಿ” ಕನ್ನಡ ದಿನ ಪತ್ರಿಕೆ ಮತ್ತು ಎಸ್.ಕೆ ನ್ಯೂಸ್ ಚಾನೆಲ್ ನಿಂದ ಒಂದು ‘ಸಲಾಂ’ ಹೇಳಿ ಬಿಡೋಣ. ದಾವಣಗೆರೆ ಜಿಲ್ಲೆ ಜಗಳೂರು ತಾಲುಕಾ ಮರಿಕುಂಟೆ ಗ್ರಾಮದ ಹತ್ತಿರ ‘ತುಪ್ಪದಹಳ್ಳಿ’ ಎಂಬ ಪುಟ್ಟ ಊರು ಇದೆ. ಈ ಊರಿನಲ್ಲಿ ಪೂಜಾರ್ ಸಿದ್ದಪ್ಪ ಎಂಬ ಹೆಸರಿನಿಂದ ಕರೆಯಲ್ಪಡುವ ಅವಳಿ ದುರುಗಮ್ಮನ ಪೂಜಾರಿ ಇದ್ದಾರೆ‌. ಇವರು ಅತಿ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಯಾಗಿದ್ದಾರೆ. ‌ವೃತ್ತಿಯಲ್ಲಿ ಪೂಜಾರಿ ಎಂದು ಗುರುತಿಸಿ ಕೊಂಡಿದ್ದರೂ, ಆ ವೃತ್ತಿಗೆ ಯಾವುದೇ ಚ್ಯುತಿ ಬರದಂತೆ ನೋಡಿ ಕೊಂಡಿದ್ದಾರೆ.ಇವರು ಆ ಊರಿನಲ್ಲಿರುವ ಅವಳಿ ದುರುಗಮ್ಮ ದೇವಿಯ ದೇವಸ್ಥಾನವನ್ನು ಕಟ್ಟಿಸಲು ಸೇವಾ ಕಮಿಟಿಯ ಭಕ್ತರು, ದೇವಿಯ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು , ಕೇರಿಯ ಮುಖಂಡರು, ರಾಜಕೀಯ ಮುಖಂಡರು ಮತ್ತು ಯುವಕರ ಸಹಕಾರ ಹಾಗೂ ಸಹಾಯದಿಂದ ಹಣವನ್ನು ದೇವಸ್ಥಾನದ ಕಟ್ಟಡಕ್ಕೆ ಹಾಕಿ, ಬೃಹತ್ ಪ್ರಮಾಣದ ಕಟ್ಟಡ ಕಟ್ಟಲು ಮುಂದಾಗಿದ್ದಾರೆ ಎಂದರೆ ಇವರ ನಿಸ್ವಾರ್ಥ ಸೇವೆವನ್ನು ಎಲ್ಲರೂ ಮೆಚ್ಚಿ ಕೊಳ್ಳಬೇಕಾಗುತ್ತದೆ.

ಇವರು ದೇವಿಯ ಆರಾಧನೆಯನ್ನು ವೃತ್ತಿಯಾಗಿ ಮಾಡಿ ಕೊಂಡಿದ್ದರೂ, ಪ್ರವೃತ್ತಿಯಲ್ಲಿ ಸಮಾಜ ಸೇವೆ ಮಾಡುವವರನ್ನು ಗುರುತಿಸಿ, ರಾಜ್ಯ ಪ್ರಶಸ್ತಿ ಕೊಡಿಸುವಲ್ಲಿ , ಇವರ ಪಾತ್ರ ಹಿರಿದಾದದ್ದು.ಇವರಿಗೆ ರಾಜ್ಯ ಪ್ರಶಸ್ತಿ , ಜಿಲ್ಲಾ ಪ್ರಶಸ್ತಿ ತಾಲೂಕು ಪ್ರಶಸ್ತಿ ಅನೇಕ ಬಾರಿ ದೊರೆತಿದ್ದರೂ, ಅದರ ಬಗ್ಗೆ ಕಿಂಚಿತ್ತು ತಲೆ ಕೆಡಿಸಿಕೊಳ್ಳದೆ ಸಮಾಜದಲ್ಲಿ ಸಣ್ಣ ಸೇವೆ ಮಾಡುವವರನ್ನು ಗುರುತಿಸಿ, ಸನ್ಮಾನ ಮಾಡುವುದು ಅವರಿಗೆ ಗೌರವ ಸೂಚಿಸುವುದು, ಇವರ ಪ್ರವೃತ್ತಿಯಾಗಿದೆ ಎಂದರೆ ತಪ್ಪಾಗಲಾರದು. ಇವರು ಸಮಾಜದಲ್ಲಿ ಮಧ್ಯಪಾನಕ್ಕೆ ದಾಸರಾಗಿರುವ ಜನರನ್ನು ತಿಳುವಳಿಕೆ ಮತ್ತು ಪ್ರಜ್ಞೆ ಹೇಳುವ ಮೂಲಕ ಹಾಗೂ ತಮ್ಮ ಗಿಡ ಮೂಲಿಕೆಗಳಿಂದ, ಮದ್ಯಪಾನ ಮಾಡುವವರನ್ನು ಮಧ್ಯದಿಂದ ಸಾವಿರಾರು ಜನರನ್ನು ದೂರವಿರಿಸಿದ್ದಾರೆ‌. ಇವರು ಮಾಡುವ ಕೆಲವು ಸಮಾಜ ಸೇವೆಯನ್ನು ಕೇಳಿ,ನಾವು ಮತ್ತು ನಮ್ಮ ಮಾಧ್ಯಮದವರು ನೋಡೋಣ, ಎಂದು ಆಕಸ್ಮಿಕವಾಗಿ ತುಪ್ಪದಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟಾಗ, ಸಾರ್ವಜನಿಕರಂತೆ ನಾವು ನಿಂತು ನೋಡುತ್ತಿದ್ದಾಗ, “ಜೀವ ಸ್ಪಂದನ ಸೇವಾ ಟ್ರಸ್ಟ್” ಎಂಬ ಬೆಂಗಳೂರು ಕಮಿಟಿಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಅಸಗೋಡು ಗ್ರಾಮದ ವಿಜಯಲಕ್ಷ್ಮಿ ತಮ್ಮ ಟ್ರಸ್ಟ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ, ಬೆಂಗಳೂರಿನ ಸ್ಲಂ ಏರಿಯಾದಲ್ಲಿ ನಿರ್ಗತಿಕರಿಗೆ ಬೆಡ್ ಶೀಟ್ ಗಳನ್ನು ನೀಡಿದ್ದಾರಂತೆ, ಮುಂದೆ ಇವರು ಸ್ಲಂ ಏರಿಯಾದಲ್ಲಿರುವ ನಿರ್ಗತಿಕ ಕುಟುಂಬಗಳನ್ನು ಗುರುತಿಸಿ, ಅವರಿಗೆ ಆಹಾರ ಕಿಟ್ ವಿತರಣೆ ಮಾಡಬೇಕೆಂಬ ಮಹಾದಾಶೆಯ ಮನೋಭಾವವನ್ನು ಹೊಂದಿದ್ದಾರೆ.ಇವರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಂತೆ,ತಮ್ಮ ಕೆಲಸದಿಂದ ನಿವೃತ್ತಿಯಾದ ಮೇಲು ತಮಗೆ ಬರುವ ಸಂಬಳದಲ್ಲಿ 10 ಸಾವಿರ ಪ್ರತಿ ತಿಂಗಳು ಸಮಾಜ ಸೇವೆಗಾಗಿ ಮುಡಿಪಾಗಿಟ್ಟಿರುವರಂತೆ, ಇದನ್ನು ಮನಗಂಡ ಸಿದ್ದಪ್ಪ ಪೂಜಾರಿ ಅವರು ತಮಗೆ ದೊರೆತಿರುವ ಎಲ್ಲಾ ಪ್ರಶಸ್ತಿಗಳನ್ನು ಮರೆತು,ತಾವು ಮಾಡುವ ಸಮಾಜ ಸೇವೆ ಮರೆತು, ಎಲ್ಲಿಯೂ ತಮ್ಮ ಸೇವೆ ಬಗ್ಗೆ ಹೇಳಿ ಕೊಳ್ಳದೆ ತಮ್ಮ ಸ್ವಂತ ಹಣದಲ್ಲಿ, ಶಾಲು ಮತ್ತು ಹೂವಿನ ಹಾರವನ್ನು ತಂದು, ಅಲ್ಲಿಯೇ ನಿಂತಿದ್ದ ದೇವಿಯ ಭಕ್ತರನ್ನು ಕರೆದು, ಅವರ ಕೂಡ, ಸನ್ಮಾನ ಮಾಡಿಸಿ ಖುಷಿ ಪಟ್ಟಿದನ್ನು , ನಾವು ಕಣ್ಣಾರೆ ವೀಕ್ಷಕರಾಗಿ ನೋಡುತ್ತ ನಿಂತಿದ್ದೇವು. ನಾವುಗಳು ಇವರಿಗೆ ತಿಳಿಯದ ಹಾಗೆ ಈ ವರದಿಯನ್ನು ಸಮಾಜದ ಮುಂದೆ ಇಡುತ್ತಿದ್ದೇವೆ ಇದಕ್ಕೆ ಅವರ ಕ್ಷೇಮೆ ಇರಲಿ. ಈ ಸೇವೆ ಹೀಗೆ ಮುಂದುವರೆಯಲಿ ಎಂದು ಇವರು ಆರಾಧಿಸುವ “ಅವಳಿ ದುರುಗಮ್ಮ” ಕರುಣಿಸಲಿ ಎಂಬುದೆ ನಮ್ಮ ಆಶಯವಾಗಿದೆ.

ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button