ಶ್ರೀ ವಿವೇಕಾನಂದ ವಿದ್ಯಾಲಯದಲ್ಲಿ 46.ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ.
ಹಾಸನ ಜನೇವರಿ.13

ಶ್ರೀ ವಿವೇಕಾನಂದ ವಿದ್ಯಾಲಯದಲ್ಲಿ ಶ್ರೀ ವಿವೇಕಾನಂದರವರ 161.ನೇ ಜನ್ಮದಿನೋತ್ಸವ ಹಾಗೂ 46.ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು 12:01.2024.ನೆಯ ಶುಕ್ರವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದಂತಹ ಶ್ರೀ ಶ್ರೀ ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು. ಅಖಿಲ ಭಾರತ ವೀರಶೈವ ಮಹಾಸಭಾ ಘಟಕ, ದೊಡ್ಡಮಠ, ಅರಕಲಗೂಡು. ಇವರ ವಹಿಸಿಕೊಂಡಿದ್ದು. ವಿವೇಕಾನಂದನವರ ಜೀವನಶೈಲಿ ಮತ್ತು ಒಳ್ಳೆಯ ಕಾರ್ಯಗಳನ್ನು ಸ್ಮರಿಸುತ್ತಾ. ಹಲೋ ವಿಚಾರಗಳನ್ನು ತಿಳಿಸಿದರು. ನಾವು ಎಷ್ಟು ದಿನ ಬದುಕಿದೆವು ಎನ್ನುವುದಕ್ಕಿಂತ ಎಂತಹ ಒಳ್ಳೆಯ ಕಾರ್ಯ ಮಾಡಿ ಹೋದೆವು ಎಂಬುದು ಮುಖ್ಯ ಎಂದು ತಿಳಿಸಿದರು. ಈ ಶಾಲೆಯಲ್ಲಿ ವಿಶೇಷವೆಂದರೆ ವಿವೇಕಾನಂದರವರ ಜನ್ಮದಿನದಂತೆ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ವಿಶೇಷವಾದದ್ದು ಎಂದರು.ಮಕ್ಕಳಿಗೆ ಒಳ್ಳೆಯ ಸಂಸ್ಕಾರಗಳನ್ನು, ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಒಳ್ಳೆಯ ಉತ್ತಮ ಆಹಾರವನ್ನು ಮನೆಯಲ್ಲಿ ತಯಾರಿಸಿದಂತಹ ಆಹಾರವನ್ನು ನೀಡಬೇಕು, ಸಂಸ್ಕಾರಗಳನ್ನು ಅರಿಯುವಂತೆ ಮಾಡಬೇಕು. ಆಹಾರವನ್ನು ಮುಖ್ಯವಾಗಿ ಒಳ್ಳೆಯ ರೀತಿಯಲ್ಲಿ ಮಕ್ಕಳಿಗೆ ನೀಡ ಬೇಕೆಂಬುದನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ ಶ್ರೀ ಎಂ. ಎಸ್. ಶ್ರೀಕಂಠಯ್ಯನವರು ತಮ್ಮದೇ ಆದಂತಹ ಗುಣಗಳನ್ನು ಒಳಗೊಂಡಂತಹ ಮಕ್ಕಳು ಒಳ್ಳೆಯ ಸಂಸ್ಕಾರಗಳನ್ನು ಕಲಿಯುವುದರ ಮುಖಾಂತರ ಉತ್ತಮ ಪ್ರಜೆ ಯಾಗಬಹುದೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀ ದಿನೇಶ್ ಬೈರೇಗೌಡ ಮಕ್ಕಳ ತಜ್ಞರು, ಸಮಾಜ ಸೇವಕರು, ಮಣಿ ಆಸ್ಪತ್ರೆ. ಇವರು ಮಕ್ಕಳಿಗೆ ಆಹಾರ ಪದ್ಧತಿಗಳಲ್ಲಿ ಬದಲಾವಣೆ ಯಾಗಬೇಕು. ಮನೆಯಲ್ಲೇ ತಯಾರಿಸಿದಂತ ಆಹಾರವನ್ನು ನೀಡಿ. ಉತ್ತಮ್ಮ ಪೋಷಕಾಂಶದ ಆಹಾರ ನೀಡಿ ಮಕ್ಕಳ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದರು. ನಂತರ ಶ್ರೀ ಬಿ ಎ ಮಂಜುನಾಥ್ (ಇ.ಸಿ. ಒ) ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿಕ್ಷಣ ಇಲಾಖೆ ಹಾಸನ. ಇವರು ಮಕ್ಕಳಿಗೆ ಅತಿಯಾದ ಮುದ್ದುಸಲ್ಲದು ಶಿಸ್ತು ಬದ್ಧವಾದ ಜೀವನ ಮೈಗೂಡಿಸಿ ಕೊಳ್ಳಬೇಕು. ಆಗ ಮಾತ್ರ ಅವರಿಗೆ ಮುಂದಿನ ಪೀಳಿಗೆಯ ಉತ್ತಮ ಪ್ರಜೆಗಳಾಗಲು ದಾರಿ ದೀಪವಾಗುತ್ತದೆ. ಒಳ್ಳೆಯ ಸಂಸ್ಕಾರ ಬೇಕು. ಉತ್ತಮ ವಿದ್ಯಾಭ್ಯಾಸದ ಕಡೆ ಗಮನ ವಿರಬೇಕು. ಮುಂದಿನ ಭವಿಷ್ಯಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮ ಬೇಕು ಮಕ್ಕಳು ಎಂದರು. ಕಾರ್ಯಕ್ರಮದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಆಹಾರ ಮೇಳದ ಕಾರ್ಯಕ್ರಮದಲ್ಲಿ ವ್ಯಾಪಾರದ ನೀತಿಯನ್ನು ಅರಿತ ಮಕ್ಕಳು. ಮನೆಯಲ್ಲೇ ಮಾಡಿಕೊಂಡು ಬಂದಂತಹ ಉತ್ತಮ ಇದು ವಿದ್ಯಾರ್ಥಿಗಳಿಗೆ ” ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ”ದ ವತಿಯಿಂದ ಸಾಹಿತಿ ಮತ್ತು ಸಮಾಜದ ಸೇವಕರಾದ ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್ ಸಂಸ್ಥಾಪಕರು ಮಕ್ಕಳಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಉಪಾಧ್ಯಾಯರು ಶ್ರೀ ಪಾರ್ಥಸಾರಥಿ ರವರು 2023 -24ರ. ಸಾಲಿನ ಶಾಲಾ ವರದಿಯನ್ನು ತಿಳಿಸಿದರು. ಕಾರ್ಯಕ್ರಮವನ್ನು ವೆಂಕಟೇಶ್ ಹೆಚ್ ಪಿ ರವರು ನಿರ್ವಹಣೆಯನ್ನು ಮಾಡಿದರು. ಮಕ್ಕಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದು. ಕಾರ್ಯಕ್ರಮದಲ್ಲಿ ಶ್ರೀಮತಿ ಶುಭ ಮಂಗಳ, ಶೇಖರ್ ರವರು,ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಪೋಷಕರು,ಸಾರ್ವಜನಿಕರು, ಉಪಸ್ಥಿತರಿದ್ದರು.