ಹುನಗುಂದ ಪಿ.ಕೆ.ಪಿ.ಎಸ್.ನೂತನ ಅಧ್ಯಕ್ಷರಾಗಿ ದೇವು ಡಂಬಳ ಉಪಾಧ್ಯಕ್ಷೆರಾಗಿ ಅನ್ನಪೂರ್ಣ ಹೊಸೂರು ಅವಿರೋಧ ಆಯ್ಕೆ.
ಹುನಗುಂದ ಆಗಷ್ಟ.11
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ದೊಡ್ಡ ಪ್ರಮಾಣ ಸೊಸೈಟಿ)ದ ನೂತನವಾಗಿ ಅಧ್ಯಕ್ಷರಾಗಿ ದೇವು ಡಂಬಳ ಉಪಾಧ್ಯಕ್ಷೆಯಾಗಿ ಅನ್ನಪೂರ್ಣ ಹೊಸೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಸಂಗಮೇಶ. ಜಿ.ಕಡಿವಾಲ ಹೇಳಿದರು.ಶುಕ್ರವಾರ ಪಟ್ಟಣದ ಪಿ.ಕೆಪಿ.ಎಸ್ ಕಾರ್ಯಾಲಯದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯ ಘೋಷಣೆ ಮಾಡಲಾಯಿತು.

ಈ ವೇಳೆ ನೂತನ ಅಧ್ಯಕ್ಷ ದೇವು ಡಂಬಳ ಮಾತನಾಡಿ ಸಹಕಾರಿ ರಂಗದಲ್ಲಿ ರೈತರ ಪರವಾಗಿ ಮತ್ತು ನಮ್ಮ ಆಡಳಿತ ಮಂಡಳಿಯ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಪ್ರಾಮಾಣಿಕ ಕಾರ್ಯಗಳನ್ನು ಮಾಡಲಾಗುವುದು ಮತ್ತು ರೈತರಿಗೆ ಸೊಸೈಟಿಯಲ್ಲಿ ಸಿಗುವ ಸೌಲಭ್ಯಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತೆನೆ ಎಂದರು. ಸಭೆಯಲ್ಲಿ ನೂತನ ನಿರ್ದೇಶಕರಾದ ರವಿ ಹುಚನೂರ,ರವಿ ಹೂಲಗೇರಿ,ದೊಡ್ಡಬಸಪ್ಪ ಬೆಳ್ಳಿಹಾಳ ಕುಮಾರ ಘಟ್ಟಗನೂರ,ಚೇತನ ಮುಕ್ಕಣ್ಣವರ,ಬಸಪ್ಪ ಹಾದಿಮನಿ,ಹನಮಂತ ಸುಣಕಲ್ಲ,ಸಂಗಮೇಶ ಬಧ್ರಶೆಟ್ಟಿ,ದೀಪಾ ಸುಂಕದ,ಮಹಾಂತೇಶ ಹೊಸೂರ,ಮುಖಂಡರಾದ ಮುತ್ತಣ್ಣ ಕಲಗೋಡಿ,ನೀಲಪ್ಪ ತಪೇಲಿ,ವಿಜಯಮಹಾಂತೇಶ ಗದ್ದನಕೇರಿ,ವಿನಯ ಗಂಜಿಹಾಳ,ವಿಶ್ವನಾಥ ಬ್ಯಾಳಿ, ಅಪ್ಪು ಡಂಬಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ. ಬಂಡರಗಲ್ಲ