ಮಕ್ಕಳು ದೇಶದ ಸಂಪತ್ತು.
ಯಲಗೋಡ ಜನೇವರಿ.12

ಯಲಗೋಡ ,ಉಜ್ವಲ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಇಂಡಿಯಾ ಲಿಟ್ಟಸಿ ಪ್ರೊಜೆಕ್ಟ್ ಶಿಕ್ಷಣ ಯಾತ್ರೆ ಯೋಜನೆ ಹಾಗೂ ಜಿಲ್ಲಾ ಆಡಳಿತ, ಗ್ರಾಮ ಪಂಚಾಯತಿ ಮಟ್ಟದಲ್ಲಿ, ಸಹಯೋಗದೊಂದಿಗೆ, ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಹಕ್ಕು ವಿಶೇಷ ಗ್ರಾಮಸಭೆಯನ್ನು ಉದ್ಘಾಟನೆ ದೊಂದಿಗೆ ಪ್ರಾರಂಭವಾಯಿತು, ಮಕ್ಕಳು ದೇಶದ ಸುಂದರ ಪಾಪುಗಳು ಅರಳುವ ಮುನ್ನವೇ ಚಿವುಟದಿರಿ ಮಕ್ಕಳು ದೇವರ ಹಾಗೇ ಇರುತ್ತಾರೆ ಅವರಿಗೆ ಒಳ್ಳೆಯ ಬುದ್ಧಿ ಒಳ್ಳೆಯ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಎಂದು ಗ್ರಾಮ ಪಂಚಾಯತಿ ಸದಸ್ಯರಾದ ರಾಜಪಟೇಲ್ ಕಣಮೇಶ್ವರ ತಿಳಿಸಿದರು, ಕೆಲವು ಸರ್ಕಾರಿ ಶಾಲೆಯಲ್ಲಿ ಸಮರ್ಪಕವಾಗಿ ಕುಡಿಯಲು ನೀರಿನ ವ್ಯವಸ್ಥೆ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳನ್ನು ವ್ಯವಸ್ಥೆ , ರಸ್ತೆಯ ಬದಿ ಮೂತ್ರ ವಿಸರ್ಜನೆ ಮಾಡುವುದು ಮುಜುಗರ ವಾಗುತ್ತದೆ ಹೀಗಾಗಿ ಗ್ರಾಮ ಪಂಚಾಯತಿ ಹಾಗೂ ಶಾಲಾಭಿವೃದ್ಧಿ ಇರುವ ಅನುದಾನವನ್ನು ಸದ್ಬಳಕೆ ಮಾಡಿ ಮಕ್ಕಳಿಗೆ ಅನುಕೂಲ ಮಾಡಬೇಕು ಎಂದು ಮಕ್ಕಳ ಸಹಾಯವಾಣಿ ಮೇಲ್ವಿಚಾರಕರು ಹಾಗೂ ಸೋಮಶೇಖರ ಹೊಸಮನಿ ಯವರು ಹೇಳಿದರು,

ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಮ್ಮದ್ ರಪೀಕ ಕಣಮೇಶ್ವರ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮುಖ್ಯಾಥಿತಿಗಳಾದ ಶಿವಶಂಕರ ಬೂದಿಹಾಳ ಹುಸೇನ್ ತಳ್ಳೋಳ್ಳಿ ಮಾಂತೇಶ ಕೂಟನೂರ ಪ್ರಕಾಶ ರಾಠೋಡ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿಅಧಿಕಾರಿಗಳಾದ, ಎಸ್ ಕೆ ಹಡಪದ ಹಾಗೂ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಹೆಬ್ಬಾಳ ಡಿ ಎಸ್ ಕಣಮೇಶ್ವರ, ಮುಖ್ಯಗುರುಗಳಾದ ಎ,ಎಚ್ ಮುಲ್ಲಾ,ಹಾಗೂ ಸಹಶಿಕ್ಷಕರು ಹಾಗೂ ಅಂಗನವಾಡಿ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ