ದೇಶದ ಯುವ ಶಕ್ತಿಗೆ ಸ್ವಾಮಿ ವಿವೇಕಾನಂದರ ಪ್ರೇರಣೆ – ದೇವು ಡಂಬಳ.
ಹುನಗುಂದ ಜನೇವರಿ.13

ದೇಶದ ಯುವ ಶಕ್ತಿಗೆ ಪ್ರೇರಣೆಯೇ ಸ್ವಾಮಿ ವಿವೇಕಾನಂದರು ಅವರ ತತ್ವಾದರ್ಶ ಮತ್ತು ಆದರ್ಶಪ್ರಾಯ ಜೀವನ ಇಂದಿನ ಯುವ ಶಕ್ತಿಗೆ ಮಾದರಿಯಾಗಿದೆ ಎಂದು ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ದೇವು ಡಂಬಳ ಹೇಳಿದರು.ಶುಕ್ರವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಘಟಕಗಳು ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರು ಯಾವದೇ ಕೆಲಸವನ್ನು ಗುರಿ ಮುಟ್ಟುವರಿಗೂ ಬಿಡುತ್ತಿರಲಿಲ್ಲ ಅದರಂತೆ ಯುವ ಶಕ್ತಿಗೆ ಮುಂದೆ ಗುರಿ ಹಿಂದೆ ಗುರು ಇದ್ದರೇ ಮಾತ್ರ ಸಾಧನೆ ಸಫಲತೆಯನ್ನು ಹೊಂದಲು ಸಾಧ್ಯ ಎನ್ನುವುದ್ದನ್ನು ತಿಳಿಸಿಕೊಟ್ಟ ಮಹಾನ ಧರ್ಮ ಸಂತರು. ವಿದ್ಯಾರ್ಥಿ ಜೀವನದಲ್ಲಿ ಏನನ್ನು ಸಾಧಸಬೇಕೆಂದು ಅಂದು ಕೊಂಡಿದ್ದೀರಿ ಅದ್ದನ್ನು ಸಾಧಿಸುವರಗೂ ಬಿಡಬೇಡಿ, ಸ್ವಾಮಿ ವಿವೇಕಾನಂದರ ಜನ್ಮ ದಿನ ದಂದು ರಕ್ತ ದಾನ ಶಿಬಿರ ಆಯೋಜಿಸಿದ್ದು. ನಿಜಕ್ಕೂ ಒಳ್ಳೆಯ ಕಾರ್ಯ ರಕ್ತ ದಾನದಷ್ಟು ಶ್ರೇಷ್ಠವಾದ ದಾನ ಮತ್ತೊಂದಿಲ್ಲ.ರಕ್ತದಾನ ಮಾಡೋದರಿಂದ ಮತ್ತೊಂದು ಜೀವವನ್ನು ಕಾಪಾಡಿದ ಪುಣ್ಯ ನಿಮಗೆ ಬರುತ್ತೇದೆ ಎಂದರು.ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯೆ ರಾಣಿ ತೋಪಲಕಟ್ಟಿ ಮಾತನಾಡಿ ದೇಶದ ಅಭಿವೃದ್ದಿಯಲ್ಲಿ ಯುವ ಶಕ್ತಿ ಪಾತ್ರ ಅಗಾಧವಾದುದು. ಧೈರ್ಯ ಮತ್ತು ಆತ್ಮಸ್ಥೆರ್ಯದ ಸಕಾರ ಮೂರ್ತಿಯೇ ಸ್ವಾಮಿ ವಿವೇಕಾನಂದರು.ತತ್ವಜ್ಞಾನ, ಸಮಾಜಶಾಸ್ತ್ರ, ಇತಿಹಾಸ ಸೇರಿದಂತೆ ಅನೇಕ ವಿಷಯಗಳಲ್ಲಿ ಬಹುದೊಡ್ಡ ಕಣಜವೇ ಸ್ವಾಮಿ ವಿವೇಕಾನಂದ ರಾಗಿದ್ದರು. ಈ ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ವಿದೇಶಿದಲ್ಲಿ ಪ್ರತಿ ಬಿಂಬಿಸಿದ ಮಹಾನ ಜ್ಞಾನಿಯಾಗಿದ್ದಾರೆ. ಅಂತಹ ಮಹಾನ ವ್ಯಕ್ತಿಯ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿ ಕೊಳ್ಳಬೇಕು ಎಂದರು. ನಿವೃತ್ತ ಶಿಕ್ಷಕ ಎಸ್.ಜಿ.ಎಮ್ಮಿ, ಪ್ರಾಚಾರ್ಯ ಡಾ.ಸುರೇಶ ಎಚ್,ಎಸ್ ಮಾತನಾಡಿದರು.ಈ ಸಂದರ್ಭದಲ್ಲಿ ಕಾಲೇಜು ೫೧ ಜನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ಸಾವಿತ್ರಿ ತಪೇಲಿ,ಎ.ಜಿ.ಹುಚನೂರ, ಬಸವರಾಜ ಹೊಸಮನಿ,ಭೀಮಪ್ಪ ಕೊಡಗಾನೂರ, ಮಲ್ಲಿಕಾರ್ಜುನ ಸುಭೇದಾರ, ಪ್ರವೀಣಕುಮಾರ ಚೂರಿ, ರಾಘವೇಂದ್ರ ಕೋರ್ತಿ, ಬಿ.ವಾಯ್.ಆಲೂರ, ದಾನಮ್ಮ ಮಠದ, ಗುಲಾಮ್ ಸಮ್ದಾನಿ, ಶ್ರೀದೇವಿ ಕಡಿವಾಲ, ಭಾಗ್ಯವಂತಿ ಹೆಚ್,ಆರ್.ಹನಮಪ್ಪ ಕೋರಿ ಸೇರಿದ್ದಂತೆ ಅನೇಕರು ಇದ್ದರು.ಪ್ರಾಧ್ಯಾಪಕ ನಿಜೇಶಕುಮಾರ ಸ್ವಾಗತಿಸಿದರು, ಮುರ್ತುಜಾ ಒಂಟಿ ನಿರೂಪಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ