ಮೊಳಕಾಲ್ಮೂರು ಪಟ್ಟಣದಲ್ಲಿ ಸಾರ್ವಜನಿಕರಿಗೆ ಚರಂಡಿ ಅವ್ಯವಸ್ಥೆ ಆಗಿರುವ ಚರಂಡಿಯನ್ನು ವ್ಯವಸ್ಥಿತ ಗೊಳಿಸಲು ಆಗ್ರಹ.
ಮೊಳಕಾಲ್ಮೂರು ಜೂನ್.14
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕು ಪಟ್ಟಣದಲ್ಲಿ ಕೆಇಬಿ ಸರ್ಕಲ್ ದಿಂದ ಬಿಎಸ್ಏನ್ಎಲ್ ಆಫೀಸ್ ವರೆಗೂ ಹಳೆ ಚರಂಡಿ ವ್ಯವಸ್ಥೆ ಇದ್ದು ಕೋಟಿ ಕೋಟಿ ವೆಚ್ಚದಲ್ಲಿ ಚರಂಡಿ ಕಾಮಗಾರಿ ಮಾಡಿಸಿದ್ದು ಆ ಚರಂಡಿ ಮಾಡಿಸಿರುವುದರಿಂದ ಐದಾರು ಕೆರೆಗಳ ಕೊಡಿ ಬಿದ್ದ ನೀರು ಆ ಹಳೆ ಚರಂಡಿಯಿಂದ ಬರಬೇಕಾಗಿತ್ತು ಆದರೆ ಈಗ ಆ ಚರಂಡಿಯನ್ನು ಮುಚ್ಚಿ ಲೇಔಟ್ ಗಳು ಬಿಲ್ಡಿಂಗ್ ಗಳು ಕಟ್ಟಿಸಿರುತ್ತಾರೆ.

ಈಗ ಹೊಸ ಎಚ್. ಆರ್. ರಸ್ತೆ ಚರಂಡಿ ಹೊಸದಾಗಿ ರೋಡ್ ಪಕ್ಕದಲ್ಲಿ ಮಾಡಿರೋದ್ರಿಂದ ನೀರು ಈ ಚರಂಡಿಯಲ್ಲಿ ಹೋಗುವುದಿಲ್ಲ ಆದಕಾರಣ ಟೌನ್ ಪಂಚಾಯತಿ ಅಧಿಕಾರಿ ಚೀಪ್ ಆಫೀಸರ್ ಈ ಹಳೆ ಚರಂಡಿ ಬಗ್ಗೆ ಗಮನಹರಿಸಿ ಕೆರೆಗಳಿಂದ ಬರ್ತಕ್ಕಂತಹ ನೀರನ್ನು ಸರಿಯಾಗಿ ಹಳೆ ಚರಂಡಿ ಮುಖಾಂತರ ಹೋಗಲು ಚರಂಡಿ ದುರಸ್ತಿ ಮಾಡಿಸಿ ಕೊಡಬೇಕೆಂದು ಮೊಳಕಾಲ್ಮೂರು ಪಟ್ಟಣದ ಸಾರ್ವಜನಿಕರ ಆಗ್ರಹ ಆಗಿರುತ್ತದೆ ಮೊಳಕಾಲ್ಮೂರು ಪಟ್ಟಣದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಬೇಜವಾಬ್ದಾರಿಯಿಂದ ಕಾಮಗಾರಿ ನಡೆಸುತ್ತಾರೆ ಮತ್ತು ಪ್ರಭಾವಿಗಳ ಹೇಳಿದ ಮಾತು ಕೇಳಿ ಅಧಿಕಾರಿಗಳು ಹಳೆ ಚರಂಡಿ ಬಗ್ಗೆ ಗಮನನೇ ಹರಿಸಿಲ್ಲ ಹಳೆ ಚರಂಡಿ ಮುಚ್ಚಿ ಹಾಕಿರುವುದು ಕಂಡುಬರುತ್ತದೆ. ಇದೆ ಪ್ರವೃತ್ತಿ ಮುಂದುವರಿದಲ್ಲಿ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡುವ ಸಮಯ ದೂರ ಉಳಿದಿಲ್ಲ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮೂರು