ರೈತರನ್ನು ಗುರುತಿಸಿ ಸನ್ಮಾನಿಸಿದ ಸ್ಟೇಟ್ ಬ್ಯಾಂಕ್ ಮ್ಯಾನೇಜರ್ ಆರ್.ಜಿ.ರಾಮಸ್ವಾಮಿ.
ತಡವಲಗಾ ಡಿಸೆಂಬರ್.24

ಅನ್ನದಾತ ದಿವಸದ ನಿಮಿತ್ತವಾಗಿ ಭಾರತಿಯ ಸ್ಟೇಟ್ ಬ್ಯಾಂಕ್ ಇಂಡಿ ಶಾಖೆಯ ವತಿಯಿಂದ ಎಸ್.ಬಿ.ಐ ಅನ್ನದಾತ ದಿವಸ ರೈತ ಕಾರ್ಯಾಗಾರ ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಇಂಡಿ ಎಸ್.ಬಿ.ಐ ಬ್ಯಾಂಕ್ ವ್ಯವಸ್ಥಾಪಕರಾದ ಆರ್.ಜಿ ರಾಮಸ್ವಾಮಿ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನವಾದ ರಾಷ್ಟ, ಅನ್ನದಾತರು ದೇವರ ಸಮಾನ, ಕೃಷಿ ಇದ್ದಲ್ಲಿ ದುರ್ಭಿಕ್ಷ ಇರಲಾರದು ಎಂದು ಸಂಸ್ಕೃತಿ ಮಾತೊಂದು ಹೇಳುತ್ತದೆ.

ಬ್ಯಾಂಕ್ ಖಾತೆಯಲ್ಲಿ ಅದೆಷ್ಟು ಹಣವಿದ್ದರೇನು ಫಲ ಹೊಟ್ಟೆಗೆ ಅನ್ನವನ್ನುಲ್ಲದೆ ನೋಟನ್ನು ನಾಣ್ಯವನ್ನು ತಿನ್ನಲು ಸಾಧ್ಯವೇ ಯಾರೇ ಇರಲಿ ಹಸಿದಾಗ ತಿನ್ನುವುದು ಅನ್ನ, ಆ ಅನ್ನವನ್ನು ನೀಡುವ ಶಕ್ತಿ ಆ ರೈತರಿಗೆ ಇದೆ, ಹೊರತು ಇನ್ನಾರಿಗೂ ಇಲ್ಲ ಎಂದರೂ ತಪ್ಪಾಗಲಾರದು ಎಂದು ಹೇಳಿದರು, ಅದೇ ರೀತಿ ನಮ್ಮ ಬ್ಯಾಂಕ್ ನಿಂದ ಅನೇಕ ರೀತಿಯ ಸಾಲ ಸೌಲಭ್ಯ ಪಡೆದು ರೈತರು ಇದರ ಸದುಪಯೋಗ ಪಡೆದು ಕೊಳ್ಳಬೇಕು ಎಂದು ಹೇಳಿದರು.ಬ್ಯಾಂಕ್ ವಲಯ ಅಧಿಕಾರಿ ರವಿ ಕನಮುಡಿ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಆನಂದ ಹೂಗಾರ,ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಬಾಬುಸಾವುಕಾರ ಮೇತ್ರಿ, ತಮ್ಮಣ್ಣಾ ಪೂಜಾರಿ, ಮಳಸಿದ್ದಪ್ಪ ಖಸ್ಕಿ, ಯಶವಂತ ರೂಗಿ,ತಮ್ಮರಾಯ ಹೊಸಮನಿ, ಸಿದ್ದು ಬ್ಯಾಳಿ,ಮಾದೇವ ಖಸ್ಕಿ, ಕಾಂತು ಕ್ಷತ್ರಿ, ಗುರು ತೇಲಿ, ಸೈಯ್ಯದ್ ನಧಾಪ್,ಶಿವಕಾಂತ ಖಸ್ಕಿ,ಮಿತುನ ರಾಠೋಡ ಸೇರಿದಂತೆ ರೈತರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ