ಸಂಕ್ರಾಂತಿಯ ಸಡಗರ…..

ದಕ್ಷಣ ಭಾರತದ ಹೆಮ್ಮೆಯ ಹಬ್ಬ
ಕರ್ನಾಟಕದ ಸಕ್ಕರೆಯ ಸಂಕ್ರಾಂತಿ ಹಬ್ಬ
ಪೈರು ತೆಗೆಯುವ ಸಂದರ್ಭದ ಈ ಹಬ್ಬ
ಸನಾತನ ಹಿಂದೂ ಧರ್ಮದ ಬುನಾದಿಯ ಹಬ್ಬ
ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ
ದಿನ ಸೂರ್ಯನ ಉತ್ತರ ದಿಕ್ಕಿನ ಪಯಣದ
ಆರಂಭದ ದಿನ ಎಳ್ಳು ಬೆಲ್ಲವನ್ನು ಹಂಚುವ
ಖುಷಿಯ ದಿನ
ಹಣ್ಣು,ಸಕ್ಕರೆ, ಕಬ್ಬಿನ ರಸವ ಸವಿಯುವ ದಿನ
ಸುಗ್ಗಿಯ ಹಬ್ಬ ಕರುನಾಡ ರೈತರಿಗೆ
ಗಾಳಿಪಟವ ಹಾರಿಸುವ ಎತ್ತರದ ಬಾನಿಗೆ
ಗುಂಪು ಗುಂಪಾಗಿ ರಂಗೋಲಿ ಬಿಡಿಸಿ ದಾರಿಗೆ
ಸಕ್ಕರೆಯ ತಿಂದು ಅಕ್ಕರೆಯ ಬೀರುವ ನಾಡಿಗೆ
ಸೂರ್ಯ ಮಕರ ರಾಶಿಯಿಂದ ಬೆಳಕು ಚೆಲ್ಲುವ
ಸುದಿನ
ಸಂಕ್ರಾಂತಿಯ ಸುಖ ದುಃಖಗಳ ಮಕರ
ಸಂಕ್ರಮಣದ ದಿನ
ಎಳ್ಳು ಬೆಲ್ಲ ಸಕ್ಕರೆ ಹೋಳಿಗೆ ತಿನ್ನೋಣ
ಸೂರ್ಯ ದೇವನನ್ನು ಭಕ್ತಿ ಭಾವದಿಂದ
ಪೂಜಿಸೋಣ
ಸಂಕ್ರಾಂತಿಯ ದಿನ ಸಹ ಬಾಳ್ವೆ ಪ್ರೀತಿ
ಸ್ನೇಹದಲಿ
ಸಮರಸವ ಬಿಟ್ಟು ಒಂದಾಗಿ ಬಾಳೋಣ
ಬದುಕಿನಲಿ
ರಾಶಿ ಮಾಡಿ ಸಂಭ್ರಮಿಸುತಿರುವರು ರೈತರು
ಹೊಲದಲಿ
ಪರಸ್ಪರ ಶುಭಾಶಯ ಕೋರೋಣ ನಗು
ನಗುತಲಿ
ಶ್ರೀ ಮುತ್ತು.ಯ ವಡ್ಡರ ( ಶಿಕ್ಷಕರು)
ಬಾಗಲಕೋಟ ಮೊ-9845568484