ಕೊಟ್ಟೂರಿನಲ್ಲಿ ತಾಲೂಕ ಮಟ್ಟದ ಜನತಾ ದರ್ಶನ ಕಾರ್ಯಕ್ರಮ.
ಕೊಟ್ಟೂರು ಜನೇವರಿ.16

ತಾಲೂಕು ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಂದ ಕುಂದು ಕೊರತೆಗಳ 98 ಅರ್ಜಿ ಸ್ವಿಕರೀಸಲೆಂದು ಮಂಗಳವಾರ ಬೆಳಿಗ್ಗೆ ೯-೦೦ ಗಂಟೆಗೆ ವಿಜಯನಗರ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಪಟ್ಟಣಕ್ಕೆ ಆಗಮಿಸಿ ಇಲ್ಲಿನ ಗಾಂಧಿ ವೃತ್ತದಿಂದ ಸೈಕಲ್ ಸಂಚಾರ ಕೈಗೊಂಡು ಪಟ್ಟಣ ದೆಲ್ಲಡೆ ವೀಕ್ಷಣೆ ನಡೆಸಿದ್ದು ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.ಬೆಳಿಗ್ಗೆ ೯-೦೦ ಯಿಂದ ಗಾಂದಿ ವೃತ್ತದಿಂದ ತಾಲೂಕು ಆಡಳಿತದ ಅಧಿಕಾರಿಗಳೊಂದಿಗೆ ಸೈಕಲ್ ಸಂಚಾರ ಕೈಗೊಂಡ ಜಿಲ್ಲಾಧಿಕಾರಿಗಳ ಯಾತ್ರೆ ಕೊಟ್ಟೂರೇಶ್ವರ ದೇವಸ್ಥಾನದ ರಸ್ತೆ ಗಚ್ಚಿನ ಮಠ, ಊರಮ್ಮ ಗುಡಿ ಪ್ರದೇಶ, ತೇರು ಬಯಲು, ಬಳ್ಳಾರಿ ಕ್ಯಾಂಪ್, ಬಸ್‌ನಿಲ್ದಾಣ, ಬಾಲಾಜಿ ಕಲ್ಯಾಣ ಮಂಟಪ ರಸ್ತೆಸಾಗಿ ಸಮುದಾಯ ಆರೋಗ್ಯ ಕೇಂದ್ರ , ಎಪಿಎಂಸಿ ಪ್ರದೇಶಗಳನ್ನು ಸಂಚರಿಸಿದರು.ಜಿಲ್ಲಾಧಿಕಾರಿಗಳು ತಮ್ಮ ಮನೆ ಬಾಗಿಲ ಬಳಿ ಸೈಕಲ್ ಮೂಲಕ ಬರುತ್ತಿದ್ದಂತೆ ಮನೆಯ ಹೆಣ್ಣುಮಕ್ಕಳು ಮತ್ತು ಇತರರು ಕುಡಿಯುವ ನೀರು ಸರಿಯಾಗಿ ಪೂರೈಕೆ ಯಾಗುತ್ತಿಲ್ಲ ಎಂದು ದೂರಿದರಲ್ಲದೆ ಮನೆಗಳ ಮುಂದೆ ಇರುವ ಚರಂಡಿ ನೀರು ಹರಿಯದಂತೆ ಕಸ ಕಡ್ಡಿಗಳಿಂದ ತುಂಬಿ ಹೋಗಿವೆ, ಇದರ ಪರಿಣಾಮ ಸೊಳ್ಳೆಗಳ ಅರ್ಭಟದಿಂದ ನಿದ್ದೆಯಿಲ್ಲದೆ ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ ಎಂದು ಅವಲತ್ತು ಕೊಂಡರು.

ಸ್ಥಳದಲ್ಲಿಯೇ ಇದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ ಅವರಿಗೆ ಕೂಡಲೇ ಚರಂಡಿಗಳನ್ನು ಸ್ವಚ್ಛ ಗೊಳಿಸುವಂತೆ ಕ್ರಮ ಕೈಗೊಳ್ಳಬೇಕು.ನೀರನ್ನು ಸಮರ್ಪಕವಾಗಿ ಪೂರೈಸಲು ಮುಂದಾಗಿ ಎಂದು ತಾಖೀತು ಮಾಡಿದರು.ಬಸ್ ನಿಲ್ದಾಣದ ಶೌಚಾಲಯವನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಬಸ್ ನಿಲ್ದಾಣದಲ್ಲಿಯೇ ಇದ್ದ ಕಸದ ರಾಶಿಯನ್ನು ತೆಗೆಯದೆ ಅಸ್ವಚ್ಛತೆ ವಾತಾವರಣ ನಿರ್ಮಾಣವಾಗಿರುವುದಕ್ಕೆ ಸಂಬಂದಪಟ್ಟವರನ್ನು ತರಾಟೆಗೆ ತೆಗೆದು ಕೊಂಡರು .ಬೀದಿ ಬದಿಯ ಹೋಟೆಲ್‌ಗಳತ್ತ ಜಿಲ್ಲಾಧಿಕಾರಿಗಳು ಸಾಗಿ ಕರ್ನಾಟಕದಲ್ಲಿ ಹೆಸರಾದಂತಹ ಮಿರ್ಚಿಯನ್ನು ಸವೆದು ರುಚಿ ಅನುಭವಿಸಿದರಲ್ಲದೆ ಸರಿಯಾಗಿ ಸ್ವಚ್ಛತೆ ಕಪಾಡಿ ಕೊಳ್ಳಬೇಕು ಇಲ್ಲದಿದ್ದರೆ ಕ್ರಮ ಕೈಗೊಳ್ಳ ಬೇಕಾಗುತ್ತದೆ. ಎಂದು ಎಚ್ಚರಿಸದರು. ಬಸ್ ನಿಲ್ದಾಣ ಸಮುದಾಯ ಆರೋಗ್ಯ ಕೇಂದ್ರ ಎಪಿಎಂಸಿ ಗಳಲ್ಲಿ ಉತ್ತಮ ಸಾರ್ವಜನಿಕ ಕಾರ್ಯ ನಿರ್ವಹಣೆಯಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಪಟ್ಟಣ ಪಂಚಾಯಿತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮವನ್ನು ಮಂಗಳವಾರ ದಂದು ಆಯೋಜಸಲಾಗಿತ್ತು.

ಮಾನ್ಯ ಹಗರಿಬೊಮ್ಮನಹಳ್ಳಿ ಶಾಸಕರು ಕೆ ನೇಮರಾಜ ನಾಯ್ಕ್ ಮತ್ತು ಅಧಿಕಾರಿಗಳೊಂದಿಗೆ ತಾಲೂಕಿನ ಸಾರ್ವಜನಿಕರ ಸಂಬಂಧಪಟ್ಟಂತೆ ಅವಾಲುಗಳನ್ನು ಆಯಾ ಕಚೇರಿ ಅಧಿಕಾರಿಗಳಿಗೆ ತಾಕಿತ್ತು ಮಾಡಿ ಸಮಸ್ಯೆಗಳನ್ನು ಬಗೆಹರಿಸಿ ಕೊಡುವಂತೆ ತಿಳಿಸಿದರು.ಕೊಟ್ಟೂರಿನ 18.ನೇ ವಾರ್ಡಿನ ನಿವಾಸಿಯಾದ ಜಯಪ್ರಕಾಶ್ ಕೆ ಎಸ್ ರವರು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಮನವಿ ಸಲ್ಲಿಸಿದರು ಇದರಿಂದ ಕೆ ನೇಮರಾಜ್ ನಾಯ್ಕ ಇನ್ನು 15 ದಿನಗಳಲ್ಲಿ ಕೆಲಸ ನಡೆಯಲಿದೆ 90 ಲಕ್ಷ ಹಣ ಬಿಡುಗಡೆಯಾಗಿದೆ ಎಂದು ತಿಳಿಸಿದರು.ನಂತರ ಬಹು ದಿನಗಳಿಂದ ಹ್ಯಾಳ್ಯಾ ಗ್ರಾಮದಲ್ಲಿ ಹರಿಜನ ಕಾಲೋನಿಯಲ್ಲಿ ಜಾಗದ ಸಮಸ್ಯೆ ಇದೆ ಇದನ್ನು ಆದಷ್ಟು ಬೇಗನೆ ಬಗೆಹರಿಸಿ ಕೊಡಬೇಕೆಂದು ಅಲ್ಲಿನ ಮುಖಂಡರು ಮನವಿ ಸಲ್ಲಿಸಿದರು.ಪಿಎಂ ಕೊಟ್ರಯ್ಯ ಕರಿಬಸಪ್ಪ ಮಂಜಪ್ಪ ಮಲ್ಲನಾಯಕನಹಳ್ಳಿ ರೈತ ಮುಖಂಡರು ತೋಟಗಾರಿಕೆ ಇಲಾಖೆ ಪ್ರಾರಂಭ ಮಾಡಿ ಎಂದು ಮನವಿ ಮಾಡಿಕೊಂಡರು.ಜಿಲ್ಲಾಧಿಕಾರಿಗಳ ಸೈಕಲ್ ಸವಾರಿಯಲ್ಲಿ ತಹಶೀಲ್ದಾರ್ ಅಮರೇಶ್ ಜಿ.ಕೆ.,ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ವೈ ರವಿಕುಮಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸರುಲ್ಲಾ, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಸ್ವಾಮಿ , ಸಬ್ ಇನ್‌ಸ್ಪೆಕ್ಟರ್ ಗೀತಾಂಜಲಿ ಶಿಂಧೆ,ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು