ಆಹಾರ ಇಲಾಖೆ ಅಧಿಕಾರಿ 60.ಸಾವಿರ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಜರುಗಿದೆ.
ಬಾಗಲಕೋಟ ಜನೇವರಿ.17

ಪುಡ್ ಇನ್ಸಪೆಕ್ಟರ್ ವೀರಯ್ಯ ಕೋಟಿ ಹಾಗೂ ಮಲ್ಲಿಕಾರ್ಜುನ ಹಾವರಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದು, ಬಾಗಲಕೋಟೆ ತಹಶಿಲ್ದಾರ ಕಛೇರಿಯಲ್ಲಿ ಆಹಾರ ಇಲಾಖೆ ವಿಭಾಗದಲ್ಲಿ ಕಾರ್ಯ ನಿರ್ವಸುತ್ತಿದ್ದರು.ವಿದ್ಯಾಗಿರಿಯ 7.ನೇ ಕ್ರಾಸ್ ನಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿ. ರದ್ದಾದ ರೇಷನ್ ಅಂಗಡಿ ಪುನ: ಆರಂಭಿಸಲು ಅನುಮತಿಗಾಗಿ ಸುರೇಶ ಗಡಗಡೆ ಎಂಬುವವರಿಂದ 60 ಸಾವಿರ ರೂ. ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಪಿ.ಪುಷ್ಪಲತಾ, ಸಿಪಿಐ ಬಿದರಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.