ಕರ್ನಾಟಕ ಪತ್ರಕರ್ತರ ಸಂಘದಿಂದ ಚಿಕಿತ್ಸೆಗೆ ಧನ ಸಹಾಯ.
ಹೊಸಪೇಟೆ ಜನೇವರಿ.18

ನಗರದಲ್ಲಿರುವ ಕರ್ನಾಟಕ ಪತ್ರಕರ್ತರ ಸಂಘ ಕಚೇರಿಯಲ್ಲಿ ಸಂಘದಿಂದ ವೈದ್ಯಕೀಯ ಚಿಕಿತ್ಸೆ ವೆಚ್ಚಕ್ಕಾಗಿ ಹಾಯ್ ಸಂಡೂರು ದಿನ ಪತ್ರಿಕೆಯ ಹೊಸಪೇಟೆ ವರದಿಗಾರರಾದ ದಲ್ಲಾಳಿ ಕುಬೇರ ಇವರಿಗೆ 10 ಸಾವಿರ ರೂ.ಗಳ ಚೆಕ್ಕನ್ನು ನೀಡಲಾಯಿತು.ಚಿಕಿತ್ಸೆಯ ವೆಚ್ಚ ಭರಿಸಲು ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯ ಘಟಕದಿಂದ, ವಿಜಯನಗರ ಜಿಲ್ಲಾ ಸಮಿತಿಗೆ 10,000ರೂ. ಗಳ ಚೆಕ್ ನೀಡಿದ್ದರಿಂದ. ಜಿಲ್ಲಾಧ್ಯಕ್ಷರಾದ ಬಿ ಹೆಚ್ ಎಸ್ ರಾಜು, ಪ್ರಧಾನ ಕಾರ್ಯದರ್ಶಿ ಕಾಕುಬಾಳ್ ಪ್ರಕಾಶ್, ಉಪಾಧ್ಯಕ್ಷರಾದ ಗಾಳೆಪ್ಪ, ಕಾರ್ಯದರ್ಶಿ ರಾಮ್ ಜೀನಾಯ್ಕ್, ಖಜಾಂಚಿ ಎಲ್. ಮಂಜುನಾಥ, ಚಿದಾನಂದ ಇವರ ಮುಖಾಂತರ ಹಸ್ತಾಂತರಿಸಲಾಯಿತು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್. ಹೊಸಪೇಟೆ