ಹಾಸ್ಟೇಲ್ ಹೊರಗುತ್ತಿಗೆ ಸಿಬ್ಬಂದಿಗಳ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ಸಿ.ಇ.ಓ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಹೊಸಪೇಟೆ ಸಪ್ಟೆಂಬರ್.20

ಕರ್ನಾಟಕ ಸರ್ಕಾರದ ಅಡಿಯಲ್ಲಿ ನಡೆಸುತ್ತಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗ ಮತ್ತು ಪಂಗಡಗಳ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ(ರಿ) ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಕಳೆದ ಹತ್ತು ಹದಿನೈದು ವರ್ಷಗಳಿಂದ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರು, ಸ್ವಚ್ಛತಾಗಾರರು, ಜವಾನರು, ನರ್ಸಗಳು, ಡಿ.ಗ್ರೂಪ್ ನೌಕರರು ಕೆಲಸ ಮಾಡುತ್ತಿದ್ದಾರ. ಆದರೆ ಇವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹಾಗಾಗಿ ಈ ಕೆಳಗಿನ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ 2023 ಸೆಪ್ಟೆಂಬರ್ 20 ರಂದು ತಮ್ಮ ಕಛೇರಿಯ ಮುಂದೆ ಹಾಸ್ಟೇಲ್ ಹೊರಗುತ್ತಿಗೆ ನೌಕರರು ಹೋರಾಟ ಮಾಡಿ ಮನವಿ ಸಲ್ಲಿಸುತ್ತಿದ್ದೇವೆ.ಈ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ಮನವಿ ಮಾಡಿಕೊಂಡರು ನೇರ ನೇಮಕಾತಿ ಮಾಡಬಾರದು, ಹೊರಗುತ್ತಿಗೆ ಪದ್ಧತಿ ಕೈಬಿಡಬೇಕು, ಸಿ ಮತ್ತು ಡಿ ವರ್ಗದ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿ ವರೆಗೆ ಸೇವಾ ಭದ್ರತೆ ಕೊಡಬೇಕು.ನೇರವಾಗಿ ಇಲಾಖೆಯಿಂದ ಮಾಸಿಕ ವೇತನವನ್ನು ಬ್ಯಾಂಕ್ ಖಾತೆಗೆ ಹಾಕಬೇಕು. 01-04-2023ರ ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠ ವೇತನವನ್ನು ಕೊಡಬೇಕು. ಕಾನೂನು ಪ್ರಕಾರ ವಾರದ ರಜೆ, ಹಬ್ಬಗಳ ರಜೆ, ಸಂಬಳದ ಚೀಟಿ, ESI ಕಾರ್ಡ್, PF ಗೆ ಹಣ ತುಂಬಿದ ರಶೀದಿ ಕೊಡಬೇಕು.ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಬೇಕು.ಕೆಲಸದ ಸಮಯ ಹಾಸ್ಟೇಲ್ ನೌಕರರಿಗೆ ನಿಗದಿ ಮಾಡಬೇಕು.ಸಮಾಜ ಕಲ್ಯಾಣ ಇಲಾಖೆಯಲ್ಲಿ ನೌಕರರ ಸಂಖ್ಯೆ ಕಡಿಮೆ ಮಾಡಿರುವ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ದಿನಾಂಕ: 17-04-2023ರ ಆದೇಶವನ್ನು ವಾಪಸು ಪಡೆಯಬೇಕು.ಬಿಸಿಎಂ ಇಲಾಖೆಯ ಸರ್ಕಾರದ ಆದೇಶ ಸಂಖ್ಯೆ: ಹಿಂವಕ 388 ಬಿಇಟಿ 2013, ಬೆಂಗಳೂರು, ದಿನಾಂಕ 27- 12-2013 ರ ಸುತ್ತೋಲೆ ಪುಕಾರ ಸಿಬ್ಬಂದಿಗಳನ್ನು ನೇಮಕ ಮಾಡಬೇಕು.

ಬಿ.ಸಿ.ಎಂ. ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಮಾಡಿದ್ದು,ಹಾಗೆಯೇ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು.ಬಾಕಿ ಇರುವ ಸಂಬಳವನ್ನು ತಕ್ಷಣ ಪಾವತಿ ಮಾಡಬೇಕು.ಕೆಲಸಕ್ಕೆ ತೆಗೆದು ಕೊಳ್ಳಬೇಕು.ನೇರ ನೇಮಕಾತಿ ಸಮಯದಲ್ಲಿ ಕೆಲಸ ಕಳೆದುಕೊಂಡ ಹೊರಗುತ್ತಿಗೆ ನೌಕರರನ್ನು ಮತ್ತೆ ಬಿ.ಸಿ.ಎಂ. ಇಲಾಖೆಯ ಬಾಲಕರ ಹಾಸ್ಟೆಲ್‌ಗಳಿಗೆ ವಿದ್ಯಾರ್ಥಿಗಳ ರಕ್ಷಣೆಗಾಗಿ ಹಿಂದಿನಂತೆಕಾವಲುಗಾರರನ್ನು ನೇಮಿಸಬೇಕು. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಜೋಳದ ರೊಟ್ಟಿ ಬಳಕೆ ಮಾಡುತ್ತಿದ್ದು, ಈ ಭಾಗದ ಹಾಸ್ಟೇಲ್ ಗಳಿಗೆ ಹೆಚ್ಚುವರಿ ಸಿಬ್ಬಂದಿ ನೇಮಿಸಬೇಕು.ಜನಪ್ರತಿನಿಧಿಗಳು ಹೊರಗುತ್ತಿಗೆ ನೌಕರರಾಗಿ ಕೆಲಸಕ್ಕೆ ತೆಗೆದುಕೊಳ್ಳಲು ಕೊಡುವ ಶಿಫಾರಸು ಪತ್ರಗಳನ್ನು ಪರಿಗಣಿಸಬಾರದು. ಇದರಿಂದ ಹಾಲಿ ಹೊರಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆವಾರ್ಡನ್ ಮತ್ತು ಅಧಿಕಾರಿಗಳ ಕಿರುಕುಳ ನಿಲ್ಲಬೇಕು. ಅಕ್ರಮವಾಗಿ ನೇಮಕ ಮಾಡಿಕೊಳ್ಳುವ ವಾರ್ಡನ್ ಮತ್ತು ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು.ನಿವೃತಿ ನಂತರ ಜೀವನ ನಿರ್ವಹಣೆಗೆ 5 ಲಕ್ಷ ರೂಪಾಯಿಗಳ ಪರಿಹಾರ ಕೊಡಬೇಕು.ಎಲ್ಲಾ ಇಲಾಖೆಯ ಹಾಸ್ಟೇಲ್ ಮಕ್ಕಳ ಆಹಾರದ ಭತ್ಯೆಯನ್ನು ಬೆಲೆ ಏರಿಕ ಕಾರಣಕ್ಕಾಗಿ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ 1650/- ರಿಂದ 1750/- ಇರುವುದರ ಬದಲಿಗೆ ದಿನಕ್ಕೆ 100/- ರೂಪಾಯಿಗಳಂತೆ 3000/- ರೂಪಾಯಿಗಳಿಗೆ ಹೆಚ್ಚಿಸಬೇಕು.ಕೋರೋಣ ಲಾಕಡೌನ್ ಅವಧಿಯಲ್ಲಿ ಎಲ್ಲಾ ಸರಕಾರಿ ನೌಕರರಿಗೆ ಮತ್ತು ಸೀಮ್ ನೌಕರರಿಗೆವೇತನ ಪಾವತಿ ಮಾಡಲಾಗಿದೆ. ಆದರೆ ಹಾಸ್ಟೇಲ್ ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಮಾಡಿರುವುದಿಲ್ಲ. ಈಗಲಾದರೂ ಪಾವತಿಸಲು ಮನವಿನವೆಂಬರ್ 2016 ರಿಂದ ಮೇ 2022ರವರೆಗೆ ಹೊರ ಸಂಪನ್ಮೂಲ ಏಜೆನ್ಸಿಯಾದ ಬಳ್ಳಾರಿ ರಂಗನಾಥ ಏಜೆನ್ಸಿ ಇವರು ಸರಕಾರ ನಿಗಧಿಮಾಡಿದ ಕನಿಷ್ಟ ವೇತನವನ್ನು ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯ ಬಿ.ಸಿ.ಎಂ. ಇಲಾಖೆ ನೌಕರರಿಗೆ ಪಾವತಿಸಿರುವುದಿಲ್ಲ. ಇದರ ಬಗ್ಗೆ ಪರಿಶೀಲಿಸಿ ವ್ಯತ್ಯಾಸದ ಬಾಕಿ ಹಣವನ್ನು ಪಾವತಿಸಬೇಕು.ಬಳ್ಳಾರಿಯ ರಂಗನಾಥ ಎಜೆನ್ಸಿಯವರು ನೌಕರರಿಗೆ ಪಿ.ಎಫ್. ಹಣ ವಾಪಾಸ್ಸು ಪಡೆಯಲು ಮಾಹಿತಿ ನೀಡುತ್ತಿಲ್ಲ, ಸಹಕಾರ ನೀಡುತ್ತಿಲ್ಲ, ನೌಕರರ ಪಿ.ಎಫ್. ಹಣ ಇಲಾಖೆಗೆ ಸರಿಯಾಗಿಪಾವತಿ ಮಾಡಿರುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.ಮೇಲಿನ ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಅಧ್ಯಕ್ಷತೆಯಲ್ಲಿ ಸಂಬಂಧಿಸಿದ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆಯನ್ನು ಕರೆಯಬೇಕು. ಈ ಎಲ್ಲಾ ಬೇಡಿಕೆಗಳನ್ನು ಆಲಿಸಿದ ಜಿಲ್ಲಾ ಪಂಚಾಯತ್ ಸಿ ಇ ಓ ಸದಾಶಿವ ಪ್ರಭು ಅವರು ಈ ಬಗ್ಗೆ ಕುರಿತು ಮಾತನಾಡಿದರು ಸೆಪ್ಟೆಂಬರ್ 29ರಂದು ಸಭೆ ಕರೆಯುತ್ತೇನೆ. ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರು ಸಂಘಟನೆಯ ಮುಖಂಡರು ಜಂಟಿ ಸಭೆ ಕರೆಯಲಾಗುವುದೆಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಮುಖಂಡರುಗಳಾದ ಜಂಬಯ್ಯ ನಾಯಕ್, ತಾಯಪ್ಪ ನಾಯಕ್, ಯಲ್ಲಲಿಂಗ, ಎಂ . ಧನ್ರಾಜ್, ಬಿ ರಮೇಶ್ ಇನ್ನು ಹಲವಾರು ಮುಖಂಡರು ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್.ಹೋಸಪೇಟ