ಸಕ್ಷಮ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು, ಪ್ಲೆಕ್ಸ್, ಕಟೌಟ್, ಬ್ಯಾನರ್, ಮತ್ತು ಬಂಟಿಂಗ್ಸ್ ಗಳನ್ನು ಅಳವಡಿಸಲು ಸಾರ್ವಜನಿಕರಿಗೆ ಕೋರಿದೆ.
ಕೊಟ್ಟೂರು ಜನೇವರಿ.19

ಪಟ್ಟಣ ಪಂಚಾಯಿತಿಯಿಂದ ಸ್ಥಳಗಳನ್ನು ನಿಗದಿ ಪಡಿಸಲಾಗಿರುತ್ತದೆ. ಸದರಿ ಸ್ಥಳಗಳಲ್ಲಿ ಮಾತ್ರ ಪ್ಲೆಕ್ಸ್, ಕಟೌಟ್, ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಅಳವಡಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಈ ಸಂಬಂಧ ಸಕ್ಷಮ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ನಂತರ ಪಟ್ಟಣ ಪಂಚಾಯಿತಿಗೆ ಆಧಾರ್ ಕಾರ್ಡ್ ಪ್ರತಿಯೊಂದಿಗೆ ಅರ್ಜಿಯನ್ನು ಸಲ್ಲಿಸಿ, ನಿಗದಿತ ಶುಲ್ಕ ಪಾವತಿಸಿ ಪರವಾನಿಗೆ ಪಡೆದು ಸಾರ್ವಜನಿಕರಿಗೆ ಹಾಗೂ ರಸ್ತೆ ಸಂಚಾರಕ್ಕೆ ತೊಂದರೆ ಯಾಗದಂತೆ ಬಟ್ಟೆಯಿಂದ ತಯಾರಿಸಿದ ಪ್ಲೆಕ್ಸ್, ಕಟೌಟ್, ಬ್ಯಾನರ್ ಮತ್ತು ಬಂಟಿಂಗ್ಸ್‌ಗಳನ್ನು ಮಾತ್ರ ಅಳವಡಿಸುವುದು ಪರವಾನಿಗೆ ಪಡೆಯದೇ ಅನಧಿಕೃತವಾಗಿ ಅಳವಡಿಸಿದಲ್ಲಿ ಅಂತವರ ವಿರುದ್ಧ ಕಾನೂನು ರೀತ್ಯ ಮುಂದಿನ ಕ್ರಮ ಜರುಗಿಸಲಾಗುವುದು ಮತ್ತು ಅವಧಿ ಮುಕ್ತಾಯದ ನಂತರ ತಕ್ಷಣವೇ ಅರ್ಜಿದಾರರೇ ತೆರವು ಗೊಳಿಸಲು ಕೋರಿದೆ. ಪತ್ರಿಕೆಗೆ ಶುಕ್ರವಾರ ರಂದು ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕೊಟ್ಟೂರು ಇವರು ತಿಳಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು