ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ – ಜ. 23 ರಂದು ಸಂಸದರ ಕಚೇರಿ ಚಲೋ.
ಹುನಗುಂದ ಜನೇವರಿ.19

ಕೇಂದ್ರ ಸರ್ಕಾರ ಫೆಬ್ರುವರಿಯಲ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಆಯ್‌ಸಿಡಿಎಸ್‌ಗೆ ಹೆಚ್ಚಿನ ಅನುದಾನ ಕಲ್ಪಿಸುವುದು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನವನ್ನು ಜಾರಿ ಗೊಳಿಸುವಂತೆ ಒತ್ತಾಯಿಸಿ ಜ.23 ರಂದು ಸಂಸದರ ಕಚೇರಿ ಚಲೋ ಪ್ರತಿಭಟನೆಗೆ ಶುಕ್ರವಾರ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಹುನಗುಂದ ತಾಲೂಕ ಘಟಕದಿಂದ ಪಟ್ಟಣದ ಬಸವ ಮಂಟಪ ದಿಂದ ವಿ.ಮ ವೃತ್ತದವರಗೆ ಪ್ರತಿಭಟನೆಯ ಕರ ಪತ್ರ ಹಂಚಿಕೆ ಮಾಡಿದರು.ಈ ವೇಳೆ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಬಸಮ್ಮ ಪಟ್ಟಣಶೆಟ್ಟಿ ಮಾತನಾಡಿ ಕೇಂದ್ರ ಸರ್ಕಾರ ಉದಾರೀಕರಣ ನೀತಿ ಜಾರಿಯ ಭರಾಟೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಕೊಡುವ ಸವಲತ್ತುಗಳನ್ನು ಶೇ 6೦ % ರಷ್ಟು ಪಾಲನ್ನು ಕಡಿತವಾಗಿ ದೇಶದ 11 ರಿಂದ 13 ಕೋಟಿ ಫಲಾನುಭವಿಗಳು ಸವಲತ್ತುಗಳಿಂದ ವಂಚಿತರಾಗಿದ್ದಾರೆ. ದೇಶದ ಬಂಡವಾಳ ಶಾಹಿ ಮತ್ತು ಕಾರ್ಪೋರೇಟ್ ಕಂಪನಿಗಳ ಮಾಲಕರ 14.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ.1೦೦ ಕೋಟಿ ಒಡೆತನವಿರುವ ಶ್ರೀಮಂತರಿಗೆ ಶೇ2% ರಷ್ಟು ವಿಶೇಷ ತೆರಿಗೆ ಹಾಕಿದರೇ 134 ಲಕ್ಷ ಕೋಟಿ ಹಣ ಸರ್ಕಾರಕ್ಕೆ ಲಾಭವಾಗುತ್ತೇ ಅದರಲ್ಲಿಯೇ 13೦ ಕೋಟಿ ಜನರಿಗೆ ಗುಣಮಟ್ಟದ ಆಹಾರ,ಆರೋಗ್ಯ,ಶಿಕ್ಷಣವನ್ನು ಉಚಿತವಾಗಿ ಕಲ್ಪಿಸಬಹುದು. ಹಿಂದು ಮಹಿಳೆಯರ ಬಗ್ಗೆ ಮಾತನಾಡವ ಕೇಂದ್ರ ಸರ್ಕಾರ ಅಂಗವಾಡಿಯಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಪ್ರತಿ ತಿಂಗಳು 45೦೦ ರೂ,ಸಹಾಯಕಿಯರಿಗೆ 225೦ ರೂ,ಬಿಸಿಯೂಟ ಅಡುಗೆಯವರಿಗೆ 6೦೦ರೂ,ಆಶಾ ಕಾರ್ಯಕರ್ತೆಯರಿಗೆ 2೦೦೦ ರೂ ಕೊಟ್ಟು ದುಡಿಸಿ ಕೊಳ್ಳುವುದು ಸಾಮಾಜಿಕ ನ್ಯಾಯವೇ ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.2೦18 ರಿಂದ ಇಲ್ಲಿವರಗೂ ಒಂದು ರೂಪಾಯಿ ವೇತನವನ್ನು ಹೆಚ್ಚಳ ಮಾಡದೇ ಚುನಾವಣೆ,ಮಾತೃವಂದನಾ,ಪೋಷನ್ ಟ್ರ್ಯಾಕ್ಟರ್,ಸರ್ವೆ, ಗೃಹಲಕ್ಷ್ಮಿ ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ನಮ್ಮನ್ನು ಬಳಿಸಿಕೊಂಡು ಹಿಂಡಿ ಹಿಪ್ಪಿ ಮಾಡುತ್ತಿದ್ದಾರೆ ಎಂದು ಆರೋಪಿದರು.ಅಧ್ಯಕ್ಷೆ ಮಂಗಳಾ ಗಾಳಿಪೂಜಿಮಠ ಮಾತನಾಡಿ ಆಹಾರ,ಆರೋಗ್ಯ,ಶಿಕ್ಷಣಕ್ಕಾಗಿರುವ ಯೋಜನೆಗಳಾದ ಆಯ್‌ಸಿಡಿಎಸ್,ಎಂಡಿಎಂ,ಎನ್‌ಎಚ್‌ಎಂ,ಆಯ್‌ಸಿಪಿಎಸ್,ಎಸ್‌ಎಸ್‌ಎ,ಎಂಎನ್‌ಆರ್‌ಇಜಿ ಯೋಜನೆಗಳನ್ನು ಖಾಯಂ ಗೊಳಿಸುವ ಜೊತೆ ಸಾರ್ವತ್ರಿಕರಿಸಬೇಕು,ಭಾರತೀಯ ಕಾರ್ಮಿಕ ಸಮ್ಮೇಳನದ ಶಿಪ್ಪಾರಸ್ಸಿನಲ್ಲಿ ದುಡಿಯುವ 1 ಕೋಟಿ ನೌಕರರಿಗೆ ಕನಿಷ್ಠ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸಬೇಕು.3 ರಿಂದ 6 ವರ್ಷದೊಳಿಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು ಮತ್ತು ಪೂರ್ವ ಪ್ರಾಥಮಿಕ ಶಾಲೆಯನ್ನು ಅಂಗನವಾಡಿ ಕೇಂದ್ರಗಳಲ್ಲಿ ನಡೆಸಲು ಕಾನೂನು ರೂಪಿಸಬೇಕು,ಅಂಗನವಾಡಿ,ಬಿಸಿಯೂಟ,ಆಶಾ ಕಾರ್ಯಕರ್ತರಿಗೆ 31 ಸಾವಿರ ಕನಿಷ್ಠ ವೇತನ ನೀಡಬೇಕು,ಸಮಾನ ಕೆಲಸಕ್ಕೆ ಸಮಾನ ವೇತನ ಕಲ್ಪಿಸಬೇಕು,ನಮ್ಮ ಚುನಾವಣೆ ಮತ್ತು ಸರ್ವೇ ಇತರೆ ಕೆಲಸಕ್ಕೆ ಬಳಸಿ ಕೊಳ್ಳಬಾರದು,ಮಿನಿ ಅಂಗನವಾಡಿಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳನ್ನಾಗಿ ಕೆಸಲವನ್ನು ಪರಿವರ್ತಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರೇ ನಿವೃತ್ತಿ ಅಂಗನವಾಡಿ ನೌಕರರಿಗೆ ಗ್ರಾಜ್ಯುಟಿ ಹಣ ಪಾವತಿಸಬೇಕು,2 ರಿಂದ 3 ಲಕ್ಷ ನಿವೃತ್ತಿ ಸೌಲಭ್ಯಗಳನ್ನು ನೀಡಬೇಕು,ಸರ್ಕಾರಿ ಶಾಲೆಯಲ್ಲಿ ಪ್ರಾರಂಭಿಸಿರುವ ಎಲ್‌ಕೆಜಿ ಯುಕೆಜಿ ನಿಲ್ಲಿಸಿ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಣ ನೀಡವಂತಾಗ ಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಎಸ್.ಬಿ.ಮೇಟಿ,ಸವಿತಾ ಹಿರೇಮಠ,ಮಂಜುಳಾ ಕೆಂಗಾರ,ಪುಷ್ಪಾ ಗೌಡರ,ವೀಣಾ ಜಾಡರ,ಎ.ಜೆ.ಹೆಬ್ಬಳ್ಳಿ,ಗಂಗೂಬಾಯಿ ಗೊರಜನಾಳ,ರತ್ನಾ ಬಸನಗೌಡ್ರ,ಎಲ್.ಎಸ್.ಕರಡಿ,ಎಸ್.ಸಿ.ಹಿರೇಮಠ,ಎಸ್.ಆರ್.ಜನಿವಾರದ,ವಿ.ಎಸ್.ನಾಶಿ,ವಾಚಿ.ಎಸ್.ವಗ್ಗಾ,ಎಸ್.ಬಿ.ಕುಲಕರ್ಣಿ,ಪಾರ್ವತಿ ಮೈತ್ರಿ,ಭಾರತಿ ಚಿಮಲ ಸೇರಿದಂತೆ ಅನೇಕರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ

