ಜನೇವರಿ – 26 ರಿಂದ ಫೆಬ್ರವರಿ 23 ರ ವರೆಗೆ ಸಂವಿಧಾನ ಜಾಗೃತಿ ಜಾಥಾ.
ಕೂಡ್ಲಿಗಿ ಜನೇವರಿ.20

ಗಣ ರಾಜ್ಯೋತ್ಸವದ ಅಂಗವಾಗಿ 26 ನೇ ಜನೇವರಿ 2024 ರಿಂದ 23 ನೇ ಫೆಬ್ರವರಿ 2024ರ ವರೆಗೆ ಜಿಲ್ಲಾಯಾಧ್ಯಂತ ಸಂವಿಧಾನ ಜಾಗೃತಿ ಜಾಥ ಹಮ್ಮಿ ಕೊಳ್ಳಲಾಗಿದ್ದು. ಜನೇವರಿ 26 ರಂದು ಜಿಲ್ಲಾ ಕೇಂದ್ರದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದು, ಆ ದಿನದಂದೇ ಬೆಳಿಗ್ಗೆ 11 ಗಂಟೆಗೆ ಕೂಡ್ಲಿಗಿ ಪಟ್ಟಣಕ್ಕೆ ಆಗಮಿಸಲಿದ್ದು ನಂತರ ಕೂಡ್ಲಿಗಿ ತಾಲೂಕಿನ ಎಲ್ಲಾ 25 ಗ್ರಾಮ ಪಂಚಾಯಿತಿಗಳಿಗೆ ಸಂಚರಿಸಲಿದೆ ಎಂದು ತಿಳಿಸಿದರು. ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಂವಿಧಾನ ಜಾಗೃತಿ ಜಾಥದ ಕಾರ್ಯಕ್ರಮದಲ್ಲಿ ತಾಲೂಕಾ ಮಟ್ಟದ ಸಮಿತಿ ಸದಸ್ಯರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು. ಸಂವಿಧಾನದ ಮಹತ್ವ ಹಾಗೂ ಮೌಲ್ಯದ ಕುರಿತು ಅರಿವು ಮೂಡಿಸುವುದು ರಾಷ್ಟ್ರೀಯ ಏಕತೆಯನ್ನು ಎತ್ತಿ ಹಿಡಿಯುವುದು ಜಾಗೃತಿ ಜಾಥದ ಮುಖ್ಯ ಉದ್ದೇಶವಾಗಿದೆ. ಕೂಡ್ಲಿಗಿ ಪಟ್ಟಣಕ್ಕೆ ಪ್ರವೇಶಿಸುವಾಗ ಸಂವಿಧಾನ ಜಾಗೃತಿ ಜಾಥವನ್ನು ಬರ ಮಾಡಿಕೊಳ್ಳಲು ಮಾನ್ಯ ಶಾಸಕರು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಇವರ ಸಮ್ಮುಖದಲ್ಲಿ ಸರ್ಕಾರದ ಶಿಷ್ಟಾಚಾರದ ಪ್ರಕಾರ ಪಟ್ಟಣ ಹಾಗೂ ತಾಲೂಕಾ ಮಟ್ಟದ ಜನ ಪ್ರತಿನಿಧಿಗಳನ್ನು ಹಾಗೂ ಎಲ್ಲಾ ದಲಿತಪರ, ಕನ್ನಡಪರ, ವಿವಿಧ ಸಂಘಟನೆಗಳ ಪದಾಧಿಕಾರಿ ಗಳೊಂದಿಗೆ ಜಾಗೃತಿ ಜಾಥವನ್ನು ಬರ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು. ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ಇವರು ಮಾತನಾಡಿ ಜನೇವರಿ 26 ರಿಂದ 5 ದಿನಗಳ ಕಾಲ ಸಂವಿಧಾನ ಜಾಗೃತಿ ಜಾಥ ಸ್ತಬ್ಧ ಚಿತ್ರ ತಾಲೂಕಿನ ಎಲ್ಲಾ 25 ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದ್ದು ಪ್ರಯುಕ್ತ ತಮ್ಮ ತಮ್ಮ ಗ್ರಾಮ ಪಂಚಾಯತಿಗಳಿಗೆ ಜಾಗೃತಿ ಜಾಥ ಪ್ರವೇಶಿಸುವಾಗ ಸರ್ಕಾರದ ಶಿಷ್ಟಾಚಾರ ದಂತೆ ಗ್ರಾಮ ಮಟ್ಟದ ಜನ ಪ್ರತಿನಿಧಿಗಳನ್ನು ಆಹ್ವಾನಿಸಬೇಕು. ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿವಿಧ ಸಂಘಟನೆಗಳ ಮುಖಂಡರುಗಳು ಹಾಗೂ ಊರಿನ ಗಣ್ಯ ವ್ಯಕ್ತಿಗಳು ಆಹ್ವಾನಿಸಿ, ಜಾಗೃತಿ ಜಾಥವನ್ನು ಬರ ಮಾಡಿಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕು, ಮತ್ತು ದಿನ ಎಲ್ಲಾ ಪಿಡಿಓ ಗಳು ಕೇಂದ್ರ ಸ್ಥಾನದಲ್ಲಿ ಹಾಜರಿದ್ದು ಸಂವಿಧಾನಕ್ಕೆ ಗೌರವಿಸುವ ಮೂಲಕ ಜಾಗೃತಿ ಜಾಥ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಎಲ್ಲಾ ಪಿಡಿಓ ಗಳಿಗೆ ಸೂಚಿಸಿದರು. ಸಂವಿಧಾನ ಜಾಗೃತಿ ಜಾಥಾ ಸಂಬಂಧ ಎಲ್ಲಾ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಮಹತ್ವ ಹಾಗೂ ಸಂವಿಧಾನ ನೀಡಿರುವ ಹಕ್ಕುಗಳ ಕುರಿತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಜಾಥಾ ಆಯಾ ಗ್ರಾಮಕ್ಕೆ ಬಂದಾಗ ಊರಿನ ಗಣ್ಯರ ಸಮ್ಮುಖದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಬೇಕೆಂದು ಸಭೆಯಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಜಗದೀಶ್ ಈ ದಿಡಗೂರು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೂಡ್ಲಿಗಿ ಇವರು ಮಾತನಾಡಿ ಸಂವಿಧಾನ ರೂಪಿಸಿ 75 ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರ ಗಣ ರಾಜ್ಯೋತ್ಸವ ಅಂಗವಾಗಿ ಜನವರಿ 26 ರಿಂದ 5 ದಿನಗಳ ಕಾಲ ಕೂಡ್ಲಿಗಿ ತಾಲೂಕಿನ ಪಟ್ಟಣ ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದು, ಎಲ್ಲರಿಗೂ ಸೇರಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ತಾಲೂಕಾ ಆಡಳಿತ ಅಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮುಖ್ಯ ಅಧಿಕಾರಿಗಳು ಪಟ್ಟಣ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮತ್ತು ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಓ ಗಳು ಸಭೆಯಲ್ಲಿ ಹಾಜರಿದ್ದರು. ಈ ಜಾಗೃತಿ ಜಾಥದ ಕುರಿತು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಯ ಅಧಿಕಾರಿ ವರ್ಗದವರು ಗ್ರಾಮಗಳ ಪ್ರಮುಖ ಗಣ್ಯರುಗಳ ಜೊತೆಗೆ ಸರ್ಕಾರದ ಶಿಷ್ಟಾಚಾರದ ಪ್ರಕಾರ ಈ ಕಾರ್ಯಕ್ರಮವನ್ನು ಸರ್ವರೂ ಯಶಸ್ವಿ ಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳು ತಿಳಿಸಿರುತ್ತಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ