ಹಾನಗಲ್ ಗ್ರಾಮ ಪಂಚಾಯಿತಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತೆಗೆ ಹಿಡಿದ ಕೈಗನ್ನಡಿ ಯಂತಾಗಿದೆ. ಕ್ರಮ ಯಾವಾಗ…..?
ಹಾನಗಲ್ ಜನೇವರಿ.20

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ಹಾನಗಲ್ ಗ್ರಾಮ ಪಂಚಾಯತಿ ಹಾನಗಲ್ ಗ್ರಾಮದಲ್ಲಿ ಎನ್ಎಚ್ ಹೈವೇ ಸರ್ವಿಸ್ ರೋಡ್ ಪಕ್ಕದಲ್ಲಿ ಫಿಲ್ಟರ್ ಕುಡಿಯುವ ನೀರಿನ ಪಂಪ್ ಶೆಡ್ ಇದ್ದು ಇಲ್ಲಿ ಸಾರ್ವಜನಿಕರು ನೀರನ್ನು ಬಳಸಲು ಹಿಡಿದುಕೊಂಡು ಕ್ಯಾನುಗಳು ತಂದು ಐದು ರೂಪಾಯಿ ಕ್ವಾಯಿನ್ ಹಾಕಿ ಪಂಪಿನ ನಲ್ಲಿ ಮುಖಾಂತರ ನೀರನ್ನು ಹಿಡಿಯುತ್ತಿದ್ದಾರೆ ಇಲ್ಲಿ ಸುತ್ತ ಮುತ್ತಲಿನ ಮನೆಗಳು ಇದ್ದು ದುರ್ವಾಸನೆಯಿಂದ ಕಡ್ಡಿ ಕಸ ಮತ್ತು ವೆಸ್ಟ್ ನೀರು ಇಲ್ಲೇ ಬಂದು ನಿಲ್ಲುತ್ತದೆ ಗ್ರಾಮದ ಚರಂಡಿಗಳು ನೀರು ಸಹ ಇಲ್ಲೇ ಹರಿದು ಬರುತ್ತದೆ ನೀರಿನ ಗಲೀಜು ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗಬ್ಬು ನಾರುತ್ತಿದೆ ಸುಮಾರು ನಾಲ್ಕೈದು ವರ್ಷಗಳಿಂದ ಇದೇ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಒದ್ದಾಡುತ್ತಿದ್ದಾರೆ ಇಲ್ಲೇ ನೀರು ಹಿಡಿದುಕೊಂಡು ಹೋಗುತ್ತಿದ್ದಾರೆ ಆದರೆ ಇಲ್ಲಿನ ಗ್ರಾಮ ಪಂಚಾಯತಿ ಪಿಡಿಓ ಅಧಿಕಾರಿಗಳು ತಾಲೂಕಾ ಪಂಚಾಯಿತಿ ಮೇಲಧಿಕಾರಿಯಾಗಲಿ ಈ ಗಲೀಜನ ಬಗ್ಗೆ ಗಮನ ನಡಿಸಿಲ್ಲಾ ಅಧಿಕಾರಿಗಳು ಮತ್ತು ಇಲ್ಲಿ ಹಂದಿಗಳು ಹಾವು ಚೋಳು ಸುಮಾರು ನಾಲ್ಕೈದು ಅಡಿ ಎತ್ತರ ದಿಂಡ್ ಆಫ್ ಸಹ ಬೆಳೆದಿರುತ್ತದೆ ಚರಂಡಿ ವ್ಯವಸ್ಥೆ ಸಹ ಇರುವುದಿಲ್ಲ ಇಲ್ಲಿ ಇಲ್ಲಿನ ವ್ಯವಸ್ಥೆ ನೋಡಿದರು ಅಧೋಗತಿ ಯಾಗಿರುತ್ತದೆ ಇಲ್ಲಿ ಕೇಳುವರಿಲ್ಲದಂತಾಗಿದೆ ಹಾನಗಲ್ ಗ್ರಾಮ ಪಂಚಾಯಿತಿ ಗ್ರಾಮದಲ್ಲಿ ಇಲ್ಲಿನ ಸಾರ್ವಜನಿಕರು ಬಹಳಷ್ಟು ಹೇಳಿ ಕೊಂಡಿದ್ದಾರೆ ನಾವು ಎಷ್ಟು ಸಲ ಅವರಿಗೆ ಹೇಳಿದರೆ ಇತ್ತ ಕಡೆ ಗಮನ ಹರಿಸದೆ ಪಂಚಾಯತಿ ಅಧಿಕಾರಿಗಳು ಗ್ರಾಮ ಪಂಚಾಯತಿ ಬಂದಂತಹ ಹಣವನ್ನು ಎಲ್ಲೋ ಕೆಲಸಕ್ಕೆ ಬರದ ಜಾಗದಲ್ಲಿ ಕೆಲಸ ಮಾಡಿಸಿ ಬಿಲ್ಲನ್ನು ಬಿಡಿಸುತ್ತಿದ್ದಾರೆ ಇಂತಹ ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸಗಳನ್ನು ಮಾಡಿಸುವುದಿಲ್ಲ ಇದು ಎಂಥಾ ದುರ್ದೈವ ಅನ್ನುವುದು ಇಲ್ಲಿನ ಸಾರ್ವಜನಿಕರೇ ಹೇಳುತ್ತಾರೆ ಗ್ರಾಮ ಪಂಚಾಯತಿ ಅಧಿಕಾರಿಗಳು ಈ ಗ್ರಾಮ ಪಂಚಾಯಿತಿಗೆ ಬರುವ ಹಣ ನಮ್ಮ ಜನಗಳ ದುಡ್ಡಿನಿಂದಲೇ ಸರ್ಕಾರದಿಂದ ಬರುತ್ತದೆ ಪೆಟ್ರೋಲ್ ಡೀಸೆಲ್ ನಾವು ದಿನಸಿ ಸಾಮಾನುಗಳನ್ನು ಕೊಳ್ಳುವಾಗ ಟ್ಯಾಕ್ಸ್ ಜಿಎಸ್‌ಟಿ ನೀರಿನ ಕರ ಕಂದಾಯ ಇನ್ನು ಮುಂತಾದ ನಾನ ಕಡೆಯಿಂದ ಹಣ ಸಂದಾಯವಾಗುತ್ತದೆ ಸರ್ಕಾರಕ್ಕೆ ನಾವು ಹಾಕಿಕೊಳ್ಳುವ ಬಟ್ಟೆ ಸಹ ನಮ್ಮ ಟ್ಯಾಕ್ಸ್ ಹೋಗುತ್ತದೆ ಸರ್ಕಾರಕ್ಕೆ ಹನಿ ಹನಿ ಕೂಡಿದರೂ ಹಳ್ಳ ಹಳ್ಳ ಸೇರಿದರೆ ಸಾಗರ ಸಾಗರ ಸೇರಿದರೆ ಸಮುದ್ರ ಎಂಬುವಂತೆ ನಿಲ್ಲುತ್ತದೆ ನಮ್ಮ ಸಾರ್ವಜನಿಕರ ಹಣ ಹೋಗಿ ಸೇರುತ್ತದೆ ಮತ್ತೆ ಮಧ್ಯದ ಅಂಗಡಿಯಲ್ಲಿ ಸಹ ನಾವು ಕುಡಿಯುವಂತಹ ಒಂದು ಬಾಟಲಿಗೆ 50 ರೂಪಾಯಿ ಹೆಚ್ಚಿಗೆ ದರವನ್ನು ನಿಗದಿ ಮಾಡಿರುತ್ತಾರೆ ಸರ್ಕಾರದವರು ಇಂತಹ ಪರಿಸ್ಥಿತಿ ಸಾರ್ವಜನಿಕರಿಗೆ ಬರೆ ಹೇಳ್ದಂತಾಗಿದೆ ಎಂದು ಕಂಡು ಬರುತ್ತದೆ ಇಲ್ಲಿ ಕೇಳುವರೆಲ್ಲ ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಇಲ್ಲಿ ಜೀವನ ಮಾಡಲು ಬಹಳ ತೊಂದರೆ ಯಾಗಿರುತ್ತದೆ ಆ ಗೊಬ್ಬು ನಾರುತ್ತಿರುವ ವಾಸನೆಯನ್ನು ಕುಡಿದು ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ಬರುತ್ತದೆ ಎಂದು ಸಾರ್ವಜನಿಕರು ತಮ್ಮ ವಿಷಯವನ್ನು ಹೇಳಿ ಕೊಳ್ಳುತ್ತಾರೆ ಈಗ ಎರಡು ಸಲ ನಾವು ಪತ್ರಿಕೆಯಲ್ಲಿ ಹಾಕಿದರೂ ಕೂಡ ಇದು ಯಾವ ಲೆಕ್ಕ ಅಂಬುವ ಅಧಿಕಾರಿಗಳು ಇಲ್ಲಿ ನೆಲೆಸಿದ್ದಾರೆ ಎಂದು ಕಂಡುಬರುತ್ತದೆ ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದು ಕೊಂಡು ಅಲ್ಲಿನ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಸಾರ್ವಜನಿಕರಿಗೆ ದಾರಿ ತೋರಿಸ ಬೇಕೆಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು