ವಿವಿಧ ಕಾಮಗಾರಿಗಳ ಭೂಮಿ ಪೂಜೆ ಮಾಡಿದ ರಾಜುಗೌಡ ಪಾಟೀಲ.
ಹಿಟ್ನಳ್ಳಿ ಜನೇವರಿ.20

ದೇವರ ಹಿಪ್ಪರಗಿ ಪಟ್ಟಣದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ 2022,23 ನೇ ಸಾಲಿನ ಎಸ್ ಸಿ ಪಿ ಯೋಜನೆಯ ಅಡಿಯಲ್ಲಿ ಮ್ಯಾಟ್ರಿಕ್ ಪೂರ್ವ ಬಾಲಕಿಯರು ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ, ಹಾಗೂ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ಜೆಜೆಎಮ್ ಹಾಗೂ ಸೇವಾಲಾಲ ಸಭಾ ಭವನ,ಗರಡಿ ಮನೆ, ಸೇವಾಲಾಲ ಬಯಲು ರಂಗ ಮಂದಿರ, ಪ್ಲೆಡ್ ಲೈಟ್ ಆಟದ ಮೈದಾನ ಹಾಗೂ ಗಂಗನಳ್ಳಿ ಗ್ರಾಮದಲ್ಲಿ ಜೆಜೆಎಮ್ ಇಂದು ಈ ಎಲ್ಲಾ ಕಾಮಗಾರಿಯನ್ನು ಭೂಮಿ ಪೂಜೆ ನೆರವೇರಿಸಿದರು,

ಈ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ತಾಲ್ಲೂಕು ಅಧಿಕಾರಗಳಾದ ತಾರಾನಾಥ ರಾಠೋಡ ಪಟ್ಟಣ ಪಂಚಾಯತಿ ಅಧಿಕಾರಿಗಳಾದ ಮುಲ್ಲಾ,ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿಗಳು ಹಾಗೂಸಾರ್ವಜನಿಕರು,ಎಲ್ಲಾ ಗುತ್ತಿಗೆದಾರರು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ