ಕರಡಿ ಗ್ರಾಮದ ವಿಶ್ವಕರ್ಮ ಸಮಾಜಕ್ಕೆ ಸ್ಮಶಾನ ಜಾಗೆ ಒದಗಿಸುವಂತೆ – ತಹಶೀಲ್ದಾರರಿಗೆ ಮನವಿ.
ಹುನಗುಂದ ಜನೇವರಿ.20

ತಾಲೂಕಿನ ಸಮೀಪದ ಕರಡಿ ಗ್ರಾಮದ ವಿಶ್ವಕರ್ಮ ಸಮಾಜದ ಜನರಿಗೆ ಅಂತ್ಯ ಸಂಸ್ಕಾರಕ್ಕೆ ಸ್ಮಶಾನ ಜಾಗ ನೀಡುವಂತೆ ಒತ್ತಾಯಿಸಿ ಗುರುವಾರ ವಿಶ್ವಕರ್ಮ ಸಮಾಜದವರು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.ಇಳಕಲ್ಲ ತಾಲೂಕಿನ ಕರಡಿ ಗ್ರಾಮದ ವಿಶ್ವಕರ್ಮ ಸಮಾಜದ ಮುಖಂಡ ಕಾಶಿನಾಥ ಪತ್ತಾರ ಮಾತನಾಡಿ, ಗ್ರಾಮದಲ್ಲಿ ಪೂರ್ವ ಕಾಲದಿಂದ ಇಲ್ಲಿವರಗೆ ವಿಶ್ವಕರ್ಮ ಸಮಾಜದವರು ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡುತ್ತಾ ಬಂದಿದ್ದು, ಇತ್ತೀಚಿಗೆ ಗ್ರಾಮದ ಹಾಲುಮತ ಸಮಾಜದವರು ನಮ್ಮ ಸಮಾಜದ ಮೃತರ ಅಂತ್ಯ ಕ್ರಿಯೆ ಮಾಡಲು ತಂಟೆ ತಕರಾರು ತೆಗೆದು ಸಾಕಷ್ಟು ಬಾರಿ ಅಂತ್ಯ ಕ್ರಿಯೆ ಸಂದರ್ಭದಲ್ಲಿ ಅಡ್ಡಿ ಪಡಿಸುತ್ತಿದ್ದಾರೆ.ಆದ್ದರಿಂದ ಕೂಡಲೇ ಸರ್ಕಾರದಿಂದ ನಮ್ಮ ಸಮಾಜಕ್ಕೆ ಪ್ರತ್ಯೇಕ ಸ್ಮಶಾನ ಜಾಗ ನೀಡಬೇಕು.ಆ ಜಾಗೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಕಟ್ಟೆ ಕಟ್ಟಿಸಿ ನೀರಿನ ಸೌಲಭ್ಯ ಕಲ್ಪಿಸಬೇಕು. ಜಾಗೆ ತೋರಿಸಿ ಕೂಡಲೇ ಸ್ಮಶಾನ ಕಾಮಗಾರಿ ಆರಂಭಿಸಬೇಕು.ಇಲ್ಲವಾದರೆ ಹಾಲುಮತ ಸಮಾಜದವರು ಬಹು ಸಂಖ್ಯೆಯಲ್ಲಿ ಇರುವುದರಿಂದ ಅವರ ಜೊತೆಗೆ ವಾದ-ವಿವಾದ ಮಡುವುದು ವಿಶ್ವಕರ್ಮ ಸಮಾಜದವರಿಗೆ ಆಗುವುದಿಲ್ಲ.ಆದ್ದರಿಂದ ಸಮಾಜದವರ ಅಂತ್ಯ ಸಂಸ್ಕಾರಕ್ಕೆ ಸಶ್ಮಾನ ಜಾಗ ಒದಗಿಸಿ ಕೊಡಬೇಕು.ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಸಮಾಜದವರು ಮರಣ ಹೊಂದಿದ್ದರೆ ಕರಡಿ ಗ್ರಾಪಂ ಮುಂದೆಯೇ ಅಂತ್ಯ ಕ್ರಿಯೆ ಮಾಡುತ್ತೇವೆ ಎಂದು ಹೇಳಿದರು.ವಿಶ್ವಕರ್ಮ ಸಮಾಜದ ಮುಖಂಡರಾದ ರಾಜು ಬಡಿಗೇರ,ಕೆ.ಎ.ಪತ್ತಾರ, ಮೌನೇಶ ಬಡಿಗೇರ, ಬಸವರಾಜ ಬಡಿಗೇರ, ಬಸಪ್ಪ ಕೋಳೂರ, ಓರಪ್ಪ ಬಡಿಗೇರ, ರುದ್ರಪ್ಪ ಬಡಿಗೇರ, ಎಸ್.ಕೆ. ಕೋಲೂರ, ಮೌನೇಶ ಕಮ್ಮಾರ,ಮೌನೇಶ ಪತ್ತಾರ, ಈರಪ್ಪ ಕಿನ್ನಾಳ, ಆದಪ್ಪ ಕಚಗಾರ, ವಿಜಯಕುಮಾರ ಪಾಟೀಲ ಸೇರಿದಂತೆ ಇತರರು ಇದ್ದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ. ಹುನಗುಂದ