ಕಲಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಿದರು.
ಕಲಕೇರಿ ಜನೇವರಿ.21

ಇಂದು ಸರ್ಕಾರಿ ಹಿರಿಯ ಮಾದರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆ ಕಲಕೇರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಶಾಲೆಯ ಮುಖ್ಯ ಗುರುಗಳಾದ ಶ್ರೀ ಜೆ ಬಿ ಕುಲಕರ್ಣಿ, ಹಿರಿಯ ಶಿಕ್ಷಕರಾದ ಶ್ರೀ ಸಿ ಡಿ ಮಾದರ ಗುರು ಮಾತೆಯರಾದ ಶ್ರೀಮತಿ ಜ್ಯೋತಿ ಕೆ ಬೋವಿ, ಶ್ರೀಮತಿ ನಂದಿನಿ, ಸಜ್ಜನ್ ಗಂಗಮ್ಮ ದೊಡ್ಡಮನಿ,ನಾಜಾ ಪರ್ವೀನ್ ಸುರಪುರ, ಮತ್ತು ಪತ್ರಕರ್ತರಾದ ಶ್ರೀ ಭಾಷಾ ಸಾಹೇಬ್ ಮನಗೂಳಿ ಹಾಜರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮತಿ ಜ್ಯೋತಿ ಕೆ ಬೋವಿ ಅಂಬಿಗರ ಚೌಡಯ್ಯನವರ ಜೀವನ ಚರಿತ್ರೆಯನ್ನು ಕುರಿತು ಸವಿವರವಾಗಿ ತಿಳಿಸಿದರು, ಅದೇ ರೀತಿಯಾಗಿ ಶಾಲೆಯ ಮುಖ್ಯ ಗುರುಗಳು ಕೂಡ ಅಂಬಿಗರ ಚೌಡಯ್ಯನವರ ಮಾತನಾಡುತ್ತಾ ಅವರ ಜೀವನದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ನಮ್ಮ ಜೀವನ ಪಾವನವಾಗುತ್ತದೆ ಎಂದು ತಿಳಿಸಿದರು ಅದೇ ರೀತಿಯಾಗಿ ಇಂತ ಮಹಾತ್ಮರ ಜೀವನ ಚರಿತ್ರೆಯನ್ನು ತಿಳಿದು ಕೊಳ್ಳುವುದರ ಮೂಲಕ ಮಕ್ಕಳಲ್ಲಿ ನೈತಿಕತೆಯ ಬೆಳವಣಿಗೆ ಬೆಳೆಸಬಹುದು ಎಂದು ತಿಳಿಸಿದರು. ಅದೇ ರೀತಿಯಾಗಿ ಶ್ರೀಮತಿ ಗಂಗಮ್ಮ ದೊಡಮನಿಯವರು ಜಯಂತಿ ಆಚರಿಸಿದರು. ಶ್ರೀಮತಿ ನಂದಿನಿ ಸಜ್ಜನ್ ಅವರು ಕಾರ್ಯಕ್ರಮವನ್ನು ಕುರಿತು ನಿರೂಪಿಸಿ. ವಂದನಾರ್ಪಣೆ ಮಾಡಿದರು.
ತಾಲೂಕ ವರದಿಗಾರರು:ಮಹಿಬೂಬಬಾಷ.ಮನಗೂಳಿತಾಳಿಕೋಟಿ

