ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಎಸ್.ಸಿ/ಪಿ & ಟಿ.ಎಸ್./ಪಿ ಯೋಜನೆಯಲ್ಲಿ ಚರ್ಮ ಕುಶಲ ಕರ್ಮಿಗಳಿಗೆ 60. ದಿನಗಳ ತರಬೇತಿ ನೀಡಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕರು.
ಮೊಳಕಾಲ್ಮುರು ಜನೇವರಿ.21

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಎಸ್.ಸಿ/ಪಿ ಹಾಗೂ ಟಿ.ಎಸ್/ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಚರ್ಮ ಕುಶಲ ಕರ್ಮಿಗಳಿಗೆ ಕೌಶಲ್ಯಾಭಿವೃದ್ಧಿ ಆದಾಯ ಗಳಿಕೆಗಾಗಿ 60 ದಿನಗಳ ಚರ್ಮ ವಸ್ತುಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಹಿಳಾ ಫಲಾನುಭವಿಗೆ ಸವಲತ್ತು ವಿತರಿಸಿದರು.

ಸರ್ಕಾರದ ಯಾವ ಇಲಾಖೆ ಆಗಲಿ ಹುಡುಕಿ ಕೊಂಡು ಜನ ಸಾಮಾನ್ಯರಿಗೆ ತರುವ ಯೋಜನೆಗಳನ್ನು ರೂಪಿಸ್ಕೊಂಡು ಬರುವಂಥ ಶಾಸಕರು ಒಟ್ಟು ಜನ ಸಾಮಾನ್ಯರ ಕೆಲಸಗಳನ್ನು ಮಾಡಲು ಮುಂದಾಗಿರುತ್ತಾರೆ ಈ ಸಂದರ್ಭದಲ್ಲಿಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸ್ಥಳೀಯ ಗ್ರಾಮ ಪಂಚಾಯಿತಿಯ ಚುನಾಯಿತ ಜನ ಪ್ರತಿನಿಧಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯಾದ ಮಾಲತಿ ಮೇಡಂ ಮೊದಲಾದವರು ಉಪಸ್ಥಿತರಿದ್ದರು. ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು