“ರಾಷ್ಟ್ರೀಯ ಪ್ರಶಸ್ತಿ ವಿಜೇತ ದಲಿತ ನಾಯಕರಿಗೆ ಅಭಿನಂದನಾ ಸಮಾರಂಭ” ಕಲಬುರ್ಗಿ.
ಕಲಬುರ್ಗಿ ಜನೇವರಿ.21

ವೀರ ವನಿತೆ ಒನಕೆ ಓಬವ್ವನ ‘ಕೋಟೆಯಲ್ಲಿ ಅರಳಿದ ಪ್ರತಿಭೆ’ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ರಾಷ್ಟ್ರ ಮಟ್ಟದ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಾಗೂ ದಲಿತ ಚಳುವಳಿಯ ಮುಂಚೂಣಿ ನಾಯಕ. ರಾಜ್ಯ ಸಂಚಾಲಕರಾದ ಡಿ.ಆರ್.ಪಾಂಡುರಂಗಸ್ವಾಮಿ ಹಾಗೂ ಇನ್ನೋರ್ವ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್.ವೆಂಕಟೇಶ್. ಅವರಿಗೂ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ ಇವರು ನೀಡಿದ ರಾಷ್ಟ್ರೀಯ ಪ್ರತಿಷ್ಟಿತ ಡಾ. ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಗೆ ಭಾಜನರಾದ ನಮ್ಮ ಅಚ್ಚು ಕಟ್ಟಿನ ಶಿಸ್ತಿನ ದಲಿತ ನಾಯಕರುಗಳಿಗೆ,

ದಿನಾಂಕ 24-1-2024ರ ಬುಧವಾರ ದಂದು ಕಲಬುರ್ಗಿ ಜಿಲ್ಲಾ ಸಮಿತಿ ವತಿಯಿಂದ ಸುವರ್ಣ ಸೌಧದ ಕನ್ನಡ ಭವನದಲ್ಲಿ ಅಭಿನಂದನಾ ಸಮಾರಂಭದ ಪ್ರಯುಕ್ತ ನಾಡಿನ ಬುದ್ಧಿ ಜೀವಿಗಳು, ಸಾಹಿತಿಗಳು, ಪ್ರಗತಿಪರ ವಿಚಾರಶೀಲರು ಭಾಗವಹಿಸಲು ಹೃದಯ ಪೂರ್ವಕ ಸ್ವಾಗತವೆಂದು ಜಿಲ್ಲಾ ಸಂಚಾಲಕರಾದ ಭೀಮಾಶಂಕರ ಕದಂ. ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ರಾಜ್ಯ ಸಂಘಟನಾ ಸಂಚಾಲಕರಾದ ಶಿವಾನಂದ.ಎಂ.ಸಾವಳಗಿ ಇವರು ಪತ್ರಿಕಾ ಗೋಷ್ಠಿಯಲ್ಲಿ ಕರೆ ನೀಡಿದ್ದಾರೆ.ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸ್ಥಾನಮಾನ ಹೊಂದಿದ ಸಂವಿಧಾನದ ಅಡಿಯಲ್ಲಿ ಪ್ರಬುದ್ಧ ನಾಯಕ ಮಾನವ ಕುಲಕ್ಕೆ ಹಕ್ಕಿನ ಅಡಿಪಾಯ ಹಾಕಿ ಕೊಟ್ಟ ಅಧಿನಾಯಕ ಸಂವಿಧಾನದ ಶಿಲ್ಪಿ ಅಂಬೇಡ್ಕರ್ ನೀಡಿದ. ಗತ ಇತಿಹಾಸದ ನಮ್ಮ ಹೋರಾಟಗಾರರನ್ನು ಗುರುತಿಸಿ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ ಕೊಡಮಾಡಿದ ದೆಹಲಿ ದಲಿತ ಸಾಹಿತ್ಯ ಅಕಾಡೆಮಿಗೆ ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪರವಾಗಿ ಅಭಿನಂದನೆಗಳು.