ಕೂಡ್ಲಿಗಿ:ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ – ಡಾ. ಬಿ.ಆರ್ ಅಂಬೇಡ್ಕರ್ ಸಂಘದಿಂದ ಚಿಂತನೆ ಕಾರ್ಯಕ್ರಮ.

ಕೂಡ್ಲಿಗಿ ಡಿಸೆಂಬರ್.30

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ, ಡಿ.29ರಂದು, ಡಾ”ಬಿ.ಆರ್.ಅಂಬೇಡ್ಕರ್ ಸಂಘದಿಂದ ಶಾಲೆಯಲ್ಲಿ ಅಂಬೇಡ್ಕರ್ ರವರ ಚಿಂತನೆ 2023 ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು . ಡಾ” ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗುಣಸಾಗರ ಹೆಚ್.ಕೃಷ್ಣಪ್ಪ ಮಾತನಾಡಿ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಚಿಂತನೆ ಆಲೋಚನೆಗಳು ಸಾಮಾಜಿಕ ಕಾಳಜಿ ಯುಳ್ಳವಾಗಿದ್ದವು. ಅವರು ಸಂವಿಧಾನ ಬರೆಯುವಾಗ, ಸುಮಾರು 300 ಹೆಚ್ಚು ಜನ ರಾಷ್ಟ್ರಕಂಡ ಮೇಧಾವಿಗಳ ಸಲಹೆಯನ್ನು ಪಡೆಯುತ್ತಾರೆ. ಅವರ ಸಲಹೆ ಸೂಚನೆಗಳನ್ನು ಆಲೋಚಿಸಿ ನಂತರ ಪರಾಮರ್ಶಿಸಿ, ಸಂವಿಧಾನವನ್ನು ಯೋಚಿಸಿ ಚಿಂತನೆ ಮಾಡಿ ನಿರ್ಣಯಿಸಿ ಸಂವಿಧಾನ ರಚನೆ ಮಾಡುತ್ತಾರೆ. ಡಾ”ಬಿ.ಆರ್.ಅಂಬೇಡ್ಕರ್ ರವರು ದೇಶದಲ್ಲಿ ಹಿಂದುಳಿದ ಹಾಗೂ ದಲಿತರ ಬಗ್ಗೆ ಮುಂದಾಲೋಚನೆ ಬಗ್ಗೆ ನೂರಿತು ಶಿಕ್ಷಣಕ್ಕೆ ಹೆಚ್ಚಿನ ಹೊತ್ತನ್ನು ಕೊಟ್ಟುರು ಎಂದು ಮಾತನಾಡಿದರು, ಅಂತ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿರುತ್ತಾರೆ. ಬ್ರಿಟಿಷರ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಿರಲಿಲ್ಲ, ಅಂಬೇಡ್ಕರ್ ರವರು ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡಬೇಕೆಂದು ಶಿಕ್ಷಣಕ್ಕೆ ಆದ್ಯತೆ ನೀಡಿದರು. ವಿದ್ಯಾರ್ಥಿಗಳು ಪಠ್ಯ ಕ್ರಮವನ್ನು ಆಲಿಸುವುದು ಮಾತ್ರವಲ್ಲ, ಎಲ್ಲಿ ಏಕೆ ಏನು ಎಂಬ ಪ್ರಶ್ನೆ ಮಾಡಬೇಕು.

ಅಂದರೆ ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ವಿಷಯದ ಬಗ್ಗೆ ಕುರಿತು ಕುತೂಹಲವು ಮುಖ್ಯ, ವಿಷಯಕ್ಕೆ ಸಂಬಂಧಿಸಿದಂತೆ ವೈಚಾರಿಕತೆ ಜ್ಞಾನದ ಹಸಿವು ಹೊಂದಿರ ಬೇಕಿದೆ. ಯಾವುದನ್ನೇ ಆಗಲಿ ಪ್ರಶ್ನಿಸದೇ ಒಪ್ಪಬಾರದು, ವಿಷಯದ ಕುರಿತು ಪರಿಪೂರ್ಣ ಮಾಹಿತಿ ಹೊಂದುವ ಕಾತುರತೆ ವಿದ್ಯಾರ್ಥಿಗಳು ಬೆಳಸಿ ಕೊಳ್ಳಬೇಕಿದೆ. ವಿದ್ಯಾಭ್ಯಾಸ ಮಾಡುವಾಗ ಚಿಂತನೆ ಮುಖಾಂತರ ಮಕ್ಕಳು ಪ್ರಶ್ನೆ ಆಲೋಚನೆ ಮಾಡುತ್ತಾ ವಿದ್ಯಾಭ್ಯಾಸ ಮಾಡಿದರೆ, ಮುಂದೆ ಒಂದು ದೊಡ್ಡ ಹುದ್ದೆಯನ್ನು ಪಡೆಯಬಹುದು ಅನ್ನೋದು ಡಾ”ಬಿ.ಆರ್.ಆಂಬೇಡ್ಕರ್ ರವರ ವಿಚಾರ ಧಾರೆಯಾಗಿತ್ತು ಎಂದರು. ವಸತಿ ಶಾಲೆಯ ಪ್ರಾಧ್ಯಾಪಕರಾದ ಜಯ ಪ್ರಕಾಶ್ ಮಾತನಾಡಿ, ಡಾ” ಬಿ.ಆರ್.ಅಂಬೇಡ್ಕರ್ ರವರ ತತ್ವ ಆದರ್ಶಗಳು, ಬುದ್ಧ, ಬಸವ, ಗಾಂಧೀಯವರ ತತ್ವಾಧಾರಿತ ಗಳಾಗಿವೆ. ಅವರು ಸಮಾಜದಲ್ಲಿ ಸಮಾನತೆ ಮೂಡಿಸುವ ಹರಿಕಾರ ರಾಗಿದ್ದರು ಎಂದರು. ವಸತಿ ಶಾಲೆಯ ಪ್ರಾಂಶುಪಾಲರಾದ ಶೋಭಾ ರವರು ಮಾತನಾಡಿ, ಮಕ್ಕಳು ನಿಷ್ಠೆಯಿಂದ ವಿದ್ಯಾಭ್ಯಾಸ ಮಾಡಿ ಉತ್ತಮ ಸಾಧನೆ ಮಾಡಬೇಕಿದೆ, ಈ ಮೂಲಕ ವಸತಿ ಶಾಲೆಗೆ ಕೀರ್ತಿ ತರಬೇಕಿದೆ. ಜೊತೆಗೆ ಸನ್ನಡತೆ ಹೊಂದಿ ಉತ್ತಮ ಸಾಧನೆ ಮಾಡಿ ಹಾಗೂ ಉತ್ತಮ ಹುದ್ದೆಯನ್ನು ಹೊಂದಿ, ನಾಡಿಗೆ ಮತ್ತು ಸಮಾಜಕ್ಕೆ ಉತ್ತಮ ಪ್ರಜೆಯಾಗ ಬೇಕಿದೆ.

ಈ ಮೂಲಕ ವಸತಿ ಶಾಲೆಯ ಹೆಸರನ್ನು ಹೆತ್ತವರ ಹೆಸರನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೋಯ್ಯ ಬೇಕಿದೆ. ಊರಿಗೆ ತಮ್ಮ ತಂದೆ ತಾಯಿಗಳಿಗೆ ಒಳ್ಳೆಯ ಮಕ್ಕಳಾಗಿದ್ದು ಕೊಂಡು, ವಿದ್ಯಾರ್ಥಿಗಳು ತಮ್ಮ ಸಾಧನೆಯನ್ನು ಮಾಡ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ ದಿಂಡೂರು, ದಲಿತ ಯುವ ಮುಖಂಡ ಸುರೇಶ್, ಪತ್ರಕರ್ತರು ಹಾಗೂ ಕಸಾಪ ಅಧ್ಯಕ್ಷರಾದ ಅಂಗಡಿ ವೀರೇಶ್, ಪತ್ರಕರ್ತ ಹಾಗೂ ವಂದೇ ಮಾತರಂ ಜಾಗೃತಿ ವೇದಿಕೆ ಕಾರ್ಯದರ್ಶಿ ಜೂಗುಲರ ಸೊಲ್ಲೇಶ, ಡಾ” ಬಿ.ಆರ್.ಅಂಬೇಡ್ಕರ್ ಸಂಘದ ಉಪಾಧ್ಯಕ್ಷರಾದ ಬಂಡೆ ರಾಘವೇಂದ್ರ, ದಲಿತ ಯುವ ಮುಖಂಡ ಎಸ್.ಸುರೇಶ್ ಭಾಗವಹಿಸಿದ್ದರು. ಸಿ.ಎಂ.ಶಾಲಿನಿ ನಿರೂಪಿಸಿದರು, ವೀರೇಶ್ ಸ್ವಾಗತಿಸಿದರು. ಸುಂದರ್ ಗೌಡ ವಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿದ್ದ ಗಣ್ಯ ಮಾನ್ಯರನ್ನು, ವಸತಿ ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button