ಮಕ್ಕಳ ಹಬ್ಬ ಉದ್ಘಾಟಿಸಿದ ಮಾಜಿ ಡಿಸಿಎಂ, ಶಾಸಕ ಶ್ರೀ ಲಕ್ಷ್ಮಣ ಸವದಿ.
ಅಥಣಿ ಜನೇವರಿ.21

ಅಥಣಿ ತಾಲೂಕಾ ಪತ್ರಕರ್ತರ ಸಂಘ (ರಿ), ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಕೆಎಎಮ್‌ಎಸ್) ಅಥಣಿ ಘಟಕ ಹಾಗೂ ಹುದ್ದಾರ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಬೆಳಗ್ಗೆ ಪ್ರತಿಭಾವಂತ ಮಕ್ಕಳಿಗಾಗಿ ಆಯೋಜಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರಾದ ಲಕ್ಷ್ಮಣ ಸವದಿಯವರು , ಎಲ್ಲ ಮಕ್ಕಳಲ್ಲಿಯೂ ತಮ್ಮದೇ ಆದ ಪ್ರತಿಭೆ, ಕಲೆ ಅಡಗಿರುತ್ತದೆ. ಅವರಲ್ಲಿನ ಕಲಾ ಪ್ರತಿಭೆಗೆ ಪ್ರೋತ್ಸಾಹಿಸಿದಾಗ ಮಾತ್ರ ಅವರಲ್ಲಿನ ಪ್ರತಿಭೆ ಅನಾವರಣ ಗೊಳ್ಳಲು ಸಾಧ್ಯ. ಆದ್ದರಿಂದ ಮಕ್ಕಳ ಪಾಲಕರು, ಶಿಕ್ಷಕರು ಅವರಿಗೆ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳು ಸಾಧನೆ ಮಾಡಲು ಅನುಕೂಲವಾಗುತ್ತದೆ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ಆಯೋಜಿಸಿರುವ ಅಥಣಿ ತಾಲೂಕಾ ಪತ್ರಕರ್ತರ ಸಂಘ ಹಾಗೂ ಇತರ ಸಂಘಟಕರ ಕಾರ್ಯವನ್ನು ಶ್ಲಾಘಿಸಿದರು.

ಮಕ್ಕಳ ಹಬ್ಬದಲ್ಲಿ ಭಾಗಿಯಾಗಿರುವ ಎಲ್ಲ ಮಕ್ಕಳು ಉತ್ತಮ ಪ್ರದರ್ಶನ ನೀಡಬೇಕು ಎಂದು ಮಕ್ಕಳನ್ನು ಅಭಿನಂದಿಸಿದರು. ಅಥಣಿ ಶೆಟ್ಟರಮಠದ ಶ್ರೀ ಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಥಣಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಂತೋಷ ರಾ. ಬಡಕಂಬಿ ಅಧ್ಯಕ್ಷತೆ ವಹಿಸಿದ್ದರು. ಅಥಿತಿಗಳಾಗಿ ಡಾ. ಅವಿನಾಶ ನಾಯಿಕ, ಆನಂದ ಗುಂಜಿಗಾಂವಿ, ಸುರೇಶ ಮಾಯಣ್ಣವರ, ಶಾಂತಿನಾಥ ನಂದೇಶ್ವರ, ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ರಾಜು ಅಲಬಾಳ, ವಿಜಯ ಹುದ್ದಾರ, ಗೌಡಪ್ಪ ಖೋತ ಸೇರಿದಂತೆ ಮತ್ತಿತರ ಗಣ್ಯ ಮಾನ್ಯರು, ಪತ್ರಕರ್ತರ ಸಂಘದ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ