ಅಹಿಂದ ಚಳುವಳಿಯ ಗುರಿ ಸಮ ಸಮಾಜ ನಿರ್ಮಾಣ – ಎಸ್. ಮೂರ್ತಿ.
ಬೆಂಗಳೂರು ನ.04

ಸಂವಿಧಾನದ ಹಕ್ಕುಗಳನ್ನು ಜಾರಿಗೆ ತರಬೇಕು, ಸಮ ಸಮಾಜ ನಿರ್ಮಾಣ ಮಾಡಬೇಕು ಇದೆ ಅಹಿಂದ ಚಳುವಳಿಯ ಉದ್ದೇಶ ಗುರಿ ಎಂದು ಅಹಿಂದ ಚಳುವಳಿಯ ರಾಜ್ಯ ಮುಖ್ಯ ಸಂಚಾಲಕರಾದ ಸಿದ್ದಯ್ಯ ಮೂರ್ತಿರವರು ಹೇಳಿದರು. ಅವರು ಇಂದು ಬೆಂಗಳೂರು ರಾಜ ಭವನ ರಸ್ತೆಯಲ್ಲಿರುವ ಹೋಟೆಲ್ ಪರಾಗ್ ನ ಸಭಾಂಗಣದಲ್ಲಿ ಕರೆದಿದ್ದ ಅಹಿಂದ ಚಳುವಳಿಯ ರಾಜ್ಯ ಸಮಿತಿ ಸಭೆಯಲ್ಲಿ ಮಾತನಾಡಿದರು. ಶೋಷಿತರನ್ನು ಬಡತನ ರೇಖೆಗಿಂತ ಆರ್ಥಿಕ ಅಭಿವೃದ್ಧಿಗಾಗಿ ರಾಜ್ಯದಲ್ಲಿ ಅಹಿಂದ ಸಬಲೀಕರಣ ಸೌಹಾರ್ದ ಸಹಕಾರಿ ಬ್ಯಾಂಕನ್ನು ಸ್ಥಾಪಿಸುತ್ತಿದ್ದೇವೆ ಎಲ್ಲರೂ ಷೇರುದಾರರಾಗ ಬೇಕೆಂದು ಕರೆ ಕೊಟ್ಟರು. 2022 ರಲ್ಲಿ ಜನಗಣತಿ ಮಾಡಬೇಕಿತ್ತು ಆದರೆ ಮಾಡಿಲ್ಲ, ಕೇಂದ್ರ ಸರ್ಕಾರ ಜನಗಣತಿ ಮಾಡುವಾಗ ಜಾತಿ ಗಣತಿಯನ್ನು ಜೊತೆಗೆ ಮಾಡಬೇಕು, ಈ ಕುರಿತು ಕೇಂದ್ರ ಸರ್ಕಾರಕ್ಕೆ ಮನವಿ ಮೂಲಕ ಒತ್ತಾಯಿಸುತ್ತೇವೆ. ಹಾಗೂ ಜನ ಪ್ರತಿನಿಧಿ ಕಾಯ್ದೆ ಪ್ರಕಾರ ಚುನಾವಣಾ ಕ್ಷೇತ್ರಗಳು ರೂಟೇಷನ್ ರೀತಿ ಜಾತಿ ಆಧಾರದ ಮೇಲೆ ಮರು ಹಂಚಿಕೆ ಮಾಡಬೇಕೆಂದು ಚುನಾವಣಾ ಆಯೋಗಕ್ಕೆ ಮನವಿ ಪತ್ರ ನೀಡುತ್ತೇವೆ ಎಂದರು.
ಅಹಿಂದ ಚಳುವಳಿಯನ್ನು ರಾಜ್ಯದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಸಂಘಟಿಸಿ ಬಲಿಷ್ಠ ಪಡಿಸಬೇಕು ಕಾರ್ಯಕರ್ತರಿಗೆ ನಾಯಕತ್ವ ತರಬೇತಿ ನೀಡಬೇಕು ಎಂದು ಹೇಳಿದರು. ರಾಜ್ಯ ಸಮಿತಿಯ ಪ್ರಮುಖರಾದ ವೆಂಕಟೇಶಗೌಡ, ಸುಬ್ಬಯ್ಯ ನಾಗರಾಜ್, ಸುರೇಂದ್ರ, ದಾಸಪ್ರಕಾಶ್, ಅಶೋಕ್ ಕುಮಾರ್, ತರೀಕೆರೆ ಎನ್. ವೆಂಕಟೇಶ್, ಎಂ ವೆಂಕಟೇಶ್ ಬೆಂಗಳೂರು, ಜೀ.ವಿ ಶ್ವೇತ, ಕೃಷ್ಣಪ್ಪ, ಕೆಂಪರಾಜ್, ಜಗದೀಶ್, ವೆಂಕಟೇಶಯ್ಯ, ಡಾ, ರಾಜಣ್ಣ, ಹರೀಶ್ ಬಾಬು, ಎನ್ ಆರ್ ಪ್ರಭು, ಗಂಗಾಧರ್, ರುದ್ರೇಶ್, ತಾಜ್ ಭಾಷಾ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು