ಅಯೋಧ್ಯೆ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಿ – ದೇವೂರ.

ಹುನಗುಂದ ಜನೇವರಿ.21

ಜ.22. ರಂದು ಅಯೋಧ್ಯೆಯಲ್ಲಿ ಜರಗುವ ಶ್ರೀ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಪಟ್ಟಣದ ಸರ್ವಧರ್ಮಿಯರು ಶಾಂತಿ ಸೌಹಾರ್ದತೆಯಿಂದ ಆಚರಣೆಯನ್ನು ಮಾಡಬೇಕು ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು ಎಂದು ಪಿಎಸ್‌ಐ ಚನ್ನಯ್ಯ ದೇವೂರ ಹೇಳಿದರು.ರವಿವಾರ ಪಟ್ಟಣದ ಪೊಲೀಸ್ ಠಾಣಿಯ ಆವರಣದಲ್ಲಿ ಕರೆಯಲಾಗಿದ್ದ ಅಯೋದ್ಯೆ ರಾಮ ಮಂದಿರ ಲೋಕಾರ್ಪಣೆ ಹಾಗೂ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಶಾಂತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು ಕೋಮು ಸಾಹಾರ್ದತೆಗೆ ಹುನಗುಂದ ಪಟ್ಟಣ ಹೆಸರಾಗಿದ್ದು.ಅದನ್ನು ಪ್ರತಿಯೊಬ್ಬರು ಕಾಯ್ದು ಕೊಳ್ಳಬೇಕು, ರಾಮ ಮೂರ್ತಿಯ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಯಾವುದೇ ಮೆರವಣೆಗಳಿಗೆ ಅವಕಾಶವಿಲ್ಲ, ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ಕೈಂಕರ್ಯ ಮತ್ತು ಪೂಜೆ,ಪ್ರಸಾದ,ದೀಪೋತ್ಸವಕ್ಕೆ ಅವಕಾಶವನ್ನು ನೀಡಲಾಗಿದ್ದು.ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿ ಕೊಳ್ಳಬೇಕು, ಯಾರಾದರೂ ಗೊಂದಲಗಳನ್ನು ಸೃಷ್ಠಿಸಿ ಕೋಮು ಗಲಭೆಗಳಿಗೆ ಅವಕಾಶ ಕೊಟ್ಟರೇ ಅಂತವರ ಮೇಲೆ ಕಾನೂನು ಕ್ರಮವನ್ನು ಕೈಕೊಳ್ಳಲಾಗುವುದು.ಅದಕ್ಕಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಕೊಳ್ಳಬೇಕು.ಪಟ್ಟಣ ಸೇರಿದ್ದಂತೆ ತಾಲೂಕಿನ ಯಾವುದೇ ಸ್ಥಳಗಳಲ್ಲಿ ಗಲಾಟೆ,ಜಗಳ,ದಾಂದಲೆಗಳು ನಡೆದರೇ 112 ಕ್ಕೆ ದೂರವಾಣಿ ಕರೆ ಮಾಡಿ,ಇನ್ನು ಸೈಬರ್ ಕ್ರೆöಮ್‌ಗಳು ನಡದರೇ 1೦3೦ಕ್ಕೆ ಕರೆ ಮಾಡಬೇಕು ಎಂದರು.ಮುಸ್ಲಿಂ ಯುನಿಟಿ ರಾಜ್ಯಾಧ್ಯಕ್ಷ ಜಬ್ಬಾರ ಕಲಬುರ್ಗಿ ಮಾತನಾಡಿ ಬಾಬ್ರಿ ಮಸೀದಿಯ ಜಾಗೆಯಲ್ಲಿ ಶ್ರೀ ರಾಮ ಮಂದಿರ ಕಟ್ಟವಂತೆ ದೇಶದ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪುನ್ನು ಗೌರವಿಸುವುದರ ಜೊತೆಗೆ ಎಲ್ಲಾ ಧರ್ಮಿಯರು ಸ್ವಾಗತಿಸಿದ್ದೇವೆ.ಜ.22 ರಂದು ನಡೆಯುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಂದು ಇಡೀ ದೇಶವೇ ಸಡಗರ ಸಂಭ್ರಮದಲ್ಲಿದ್ದು.ಪಟ್ಟಣದ ಎಲ್ಲಾ ಧರ್ಮಿಯರು ಸೇರಿಕೊಂಡು ಈ ಒಂದು ರಾಮಲಲ್ಲಾ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಕೋಮು ಸೌಹಾರ್ದತೆಯಿಂದ ಆಚರಿಸೋಣ.ಸೌಹಾರ್ದತೆಯ ಸಂಕೇತವಾದ ಇಂತಹ ಸಮಾರಂಭಗಳಲ್ಲಿ ಕೆಲವೊಂದು ಯುವಕರು ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮತ್ತು ಗೊಂದಲ ಸೃಷ್ಠಿ ಕಾರ್ಯದಲ್ಲಿ ತೊಡಗುತ್ತಾರೆ.ಅಂತವರ ಮೇಲೆ ಪೊಲೀಸರು ನಿಗಾವಹಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದರು. ಮುಖಂಡ ಮಹಾಂತೇಶ ಹಳ್ಳೂರ ಮಾತನಾಡಿ ಹುನಗುಂದ ಪಟ್ಟಣ ಕೋಮು ಸಾಹಾರ್ದತೆಯ ತವರೂರಾಗಿದ್ದು.ಇಲ್ಲಿ ಹಿಂದು ಮುಸ್ಲಿಂರು ಎಲ್ಲಾ ಹಬ್ಬಗಳನ್ನು ಅಣ್ಣ ತಮ್ಮಂದಿರಂತೆ ಕೂಡಿಕೊಂಡು ಆಚರಣೆ ಮಾಡುತ್ತಾ ಬಂದಿದೇವೆ,ನಾವೆಲ್ಲಾ ಭಾರತೀಯರು ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯಕ್ರಮವನ್ನು ಸರ್ವ ಧರ್ಮದವರು ಸೇರಿಕೊಂಡು ಶಾಂತಿ ಸೌಹಾರ್ದತೆಯಿಂದ ಆಚರಣೆ ಮಾಡೋಣ ಎಂದರು.ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಾಂತಪ್ಪ ಹೊಸಮನಿ,ಮಹಿಬೂಬು ಸರಕಾವಸ್,ಮಲ್ಲಿಕಾರ್ಜುನ ಚೂರಿ, ಲಕ್ಷ್ಮಣ ಗಾಯಕವಾಡ,ಮುನ್ನಾ ಬಾಗವಾನ,ಮಹಾಂತೇಶ ಚಿತ್ತವಾಡಗಿ ಸೇರಿದ್ದಂತೆ ಅನೇಕರು ಉಪಸ್ಥಿತರಿದ್ದರು.ಪೊಲೀಸ್ ಬಸವರಾಜ ಗೌಡರ ಸ್ವಾಗತಿಸಿ ವಂದಿಸಿದರು.

****ಬಾಕ್ಸ್ ಸುದ್ದಿ***ಅಯೋಧ್ಯೆ ಶ್ರೀರಾಮ ಮಂದಿರ ಅನಾವರಣ ಕಾರ್ಯಕ್ರಮ ದಂದು ಜ.22 ರಂದು ಪಟ್ಟಣದ 59 ದೇವಸ್ಥಾನಗಳಲ್ಲಿ ವಿಶೇಷ ಪೂಜೆ,ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.ಮಧ್ಯಾಹ್ನ ಸಂಗಮೇಶ್ವರ ದೇವಸ್ಥಾನ,ಮುದಿಮಾರುತಿ ದೇವಸ್ಥಾನ,ಅಯ್ಯಪ್ಪನಗುಡಿ,ಗುಂಡದಗುಡಿ ಸೇರಿದ್ದಂತೆ ವಿವಿಧ ದೇವಸ್ಥಾನಗಳಲ್ಲಿ ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದ್ದು.ಸಾಯಂಕಾಲ ದೀಪೋತ್ಸವ ಕಾರ್ಯಕ್ರಮ ಜರುಗಲಿದೆ.ಮಲ್ಲಿಕಾರ್ಜುನ ಚೂರಿ.ಬಿಜೆಪಿ ಮುಖಂಡ ಹುನಗುಂದ.

ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ.ಹುನಗುಂದ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button