ಎ.ಎಂ. ಪ್ರಭುದೇವಯ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ.
ಹಿರೇಹೆಗ್ಡಾಳ್ ಜನೇವರಿ.24

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹಿರೇ ಹೆಗ್ಡಾಳ್ ಗ್ರಾಮದ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಇವರ ವತಿಯಿಂದ ಸತತ 25 ವರ್ಷ ಹಿರೇ ಹೆಗ್ಡಾಳ್ ನೇತಾಜಿ ಪ್ರೌಢಶಾಲೆಯಲ್ಲಿ ಕ್ರಿಯಾಶೀಲ ಮೌಲ್ಯಯುತ ಶಿಕ್ಷಕರಾಗಿ ಕಾರ್ಯನಿರ್ವಹಿಸಿ ಸಾವಿರಾರು ಮಕ್ಕಳ ಭವಿಷ್ಯಕ್ಕೆ ಬೆಳಕಾಗಿ ಪ್ರಸ್ತುತ ದೈಹಿಕ ಶಿಕ್ಷಣ ಪರಿಕ್ಷರ ಹುದ್ದೆಗೆ ಪದೋನ್ನತಿ ಹೊಂದಿರುವ ಎ ಎಂ ಪ್ರಭುದೇವಯ್ಯ ಇವರಿಗೆ ಹಿರೇ ಹೆಗ್ಡಾಳ್ ಗ್ರಾಮದ ಪರವಾಗಿ ಹಳೆ ವಿದ್ಯಾರ್ಥಿಗಳ ಪರವಾಗಿ ಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು ಮುಖ್ಯ ಗುರುಗಳಾದ ಪಿ.ಡಿ ರಂಗಪ್ಪ ಇವರ ಅಧ್ಯಕ್ಷತೆಯಲ್ಲಿ ಹಾಗೂ ಪದ್ಮನಾಭ ಕರಣಂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎಸ್ ಡಿ ಎಂ ಸಿ ಸರ್ವ ಸದಸ್ಯರು ಭಾಗಿಯಾಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿ 1999 ನೇ ಇಸವಿಯಲ್ಲಿ ಇಲ್ಲಿವರೆಗೂ ಸೇವೆ ಸಲ್ಲಿಸಿದ ಎ.ಎಂ. ಪ್ರಭುದೇವಯ್ಯ ದೈಹಿಕ ಶಿಕ್ಷಕರಿಗೆ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳಿಂದ ಸನ್ಮಾನ ಹಾಗೂ ಊರಿನ ಹಿರಿಯ ಮುಖಂಡರಿಂದ ರೈತಾಪಿ ವರ್ಗದವರು ಶಾಲಾ ಅಡಿಗೆ ಸಹಾಯಕರು ಸಾಸಲವಾಡ ಬಪ್ಪಲಾಪುರ ಸಾಣಿಹಳ್ಳಿ ಹಿರೆ ಹೆಗ್ಡಾಳ್ ಹಾಸ್ಟೆಲ್ ವಿದ್ಯಾರ್ಥಿಗಳಿಂದ ದೈಹಿಕ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು ಹಾಗೂ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಎ.ಎಂ. ಪ್ರಭುದೇವಯ್ಯ ದೈಹಿಕ ಶಿಕ್ಷಕರು ನಾನು ಮೊದಲನೇದಾಗಿ ಈ ಊರಿಗೆ ಬಂದಾಗ ಶಾಲೆಗೆ ಕಾಂಪೌಂಡ್ ವ್ಯವಸ್ತೆ ಇರಲಿಲ್ಲ ಹಾಗೂ ಮಕ್ಕಳಿಗೆ ಕ್ರೀಡಾಕೂಟ ನಡೆಸಲು ಶಾಲೆ ಆವರಣ ಸ್ವಚ್ಛತೆಯಿಂದ ಕೂಡಿರಲಿಲ್ಲ ಹಾಗಾಗಿ ಊರಿನ ಸಹಕಾರದೊಂದಿಗೆ ತಾಲೂಕು ಕ್ರೀಡಾಕೂಟ ನಡೆಸಿದ್ದೇನೆ ಊರಿನ ಸಹಕಾರ ತುಂಬಾ ನಮಗೆ ಮೆಚ್ಚುಗೆ ಇದೆ ನಾನು ಈ ಊರನ್ನು ಬಿಟ್ಟು ಹೋಗಲು ದುಃಖವಾದ ಸಂದೇಶನು ಇದೆ ಆದರೆ ಸರಕಾರ ಆದೇಶದ ಮೇರೆಗೆ ನಾನು ಸಂಡೂರು ತಾಲೂಕಿಗೆ ದೈಹಿಕ ಶಿಕ್ಷಣ ಪರಿವೀಕ್ಷರ ಹುದ್ದೆಗೆ ನನ್ನನ್ನು ಆಯ್ಕೆ ಮಾಡಿರುತ್ತಾರೆ ನಾನು ಬಿಟ್ಟು ಹೋಗಲು ತುಂಬಾ ನನ್ನಿಂದ ಕಷ್ಟಕರವಾಗಿದೆ ನಿಮ್ಮೆಲ್ಲರ ಸಹಕಾರ ಯಾವತ್ತೂ ಇದ್ದೇ ಇರುತ್ತದೆ ಎಂದು ಈ ಗ್ರಾಮಕ್ಕೆ ಯಾವತ್ತು ನಾನು ಚಿರಋಣಿ ಎಂದು ತಿಳಿಸಿದರು ಹಾಗೆ ಹಳೆ ವಿದ್ಯಾರ್ಥಿಗಳು ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುತ್ತಾ ಹಾಗಾಗಿ ಮೆರವಣಿಗೆ ಮುಖಾಂತರ ನಮ್ಮನ್ನ ಇಷ್ಟು ಸ್ವಾಗತ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ನಾನು ಯಾವತ್ತೂ ಚಿರಋಣಿ ಎಂದು ತಿಳಿಸಿದರು ನಿರೂಪಣೆ ಮಾಡಿದ ಸ್ವಾಮಿ ಶಿಕ್ಷಕರು ಕೊಟ್ರೇಶ್ ಶಿಕ್ಷಕರು ಹಾಗೂ ಸಾಹ ಶಿಕ್ಷಕಿಯರು ಶಿಕ್ಷಕರು ಭಾಗಿಯಾಗಿದ್ದರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಅಂಬೇಡ್ಕರ್ ಶಾಲೆ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿ ಎ.ಎಂ. ಪ್ರಭುದೇವಯ್ಯ ಇವರಿಗೆ ಅದ್ದೂರಿಯಾಗಿ ಸನ್ಮಾನ ಮಾಡಲಾಯಿತು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ