ಶ್ರೀ ಕೊಟ್ಟೂರೇಶ್ವರ ಕಾಲೇಜಿನ ಬಾಲಕರ ನಿಲಯದ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ರೋಗದ ಭೀತಿ.
ಕೊಟ್ಟೂರು ಜನೇವರಿ.24

ಕೆಲವು ವಿದ್ಯಾರ್ಥಿ ನಿಲಯಗಳು ಸಮಸ್ಯೆಗಳ ಆಗರ ಕಂತೆ ಕಂತೆ ಇರುವವಂತೆ. ನಿಲಯ ಪಾಲಕರು ಆಗೊಮ್ಮೆ, ಈಗೊಮ್ಮೆ ಬಂದು, ಕೆಲ ವಿದ್ಯಾರ್ಥಿಗಳನ್ನು ಅತಿಯಾದ ಪ್ರೀತಿ ಇರುವವರಂತೆ ತೋರಿಸಿ ಕೊಳ್ಳುವುದಕ್ಕಾಗಿ ಮಾತಿನ ಶೈಲಿಯಲ್ಲಿ ಅವರನ್ನು ಮಾತನಾಡಿಸುತ್ತಾ, ಮರಳು ಮಾಡುವರಂತೆ. ‘ಮೆನೋ’ ಚಾಟ್ ಪ್ರಕಾರ ಆಹಾರವನ್ನು ನೀಡದೆ, ಕೊಳೆತ, ಕಡಿಮೆ ದರದ ತರಕಾರಿ ತಂದು ಬಡ ವಿದ್ಯಾರ್ಥಿಗಳಿಗೆ ನೀಡಿ ಖುಷಿ ಪಡುವುದರಲ್ಲಿ ನಿಪುಣರಂತೆ, ವಿದ್ಯಾರ್ಥಿ ನಿಲಯ ಸಮಸ್ಯೆಗಳ ಬಗ್ಗೆ ಬರೆಯುತ್ತಾ ಹೋದರೆ ಪುಟಗಳೇ ಸಾಲದು, ವಿದ್ಯಾರ್ಥಿ ನಿಲಯದಲ್ಲಿರುವ ಮಕ್ಕಳ ಬಗ್ಗೆ ಜಾಗೃತಿವಹಿಸಿ ಮಕ್ಕಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಕಾಣುವ ನಿಲಯ ಪಾಲಕರಿಗೆ ನಮ್ಮ “ಸಿಹಿ-ಕಹಿ” ಕನ್ನಡ ದಿನ ಪತ್ರಿಕೆ ಮತ್ತು ಎಸ್.ಕೆ ನ್ಯೂಸ್ ಚಾನೆಲ್ ಕನ್ನಡ ಸಾಮಾಜಿಕ ಮಾಧ್ಯಮದಿಂದ ಒಂದು ಸಲಾಂ ಹೇಳಿ ಬಿಡೋಣ!ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ನಾಯಿ ಕೊಡೆಯಂತೆ ಸಾಕಷ್ಟು ವಿದ್ಯಾರ್ಥಿ ನಿಲಯಗಳು ಹುಟ್ಟಿ ಕೊಂಡಿವೆ ಎಂದರೆ ತಪ್ಪಾಗಲಾರದು. ಕೆಲವು ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತದೆ, ಕೆಲವು ನಿಲಯಗಳಲ್ಲಿ ಪತ್ರಕರ್ತರು ಮತ್ತು ಸಂಘ ಸಂಸ್ಥೆಯವರು ಆಹಾರ ಧಾನ್ಯಗಳನ್ನು ಮತ್ತು ತರಕಾರಿ ಪ್ರಮಾಣವನ್ನು ಪರಿಶೀಲನೆ ಮಾಡಲು ಬಿಡುವುದಿಲ್ಲವಂತೆ, ಹಾಗಾದರೆ ಅದರ ಕ್ವಾಲಿಟಿಯ ಪ್ರಮಾಣ ಕಂಡು ಹಿಡಿಯಲು ಅಲ್ಲಿನ ನಿಲಯ ಪಾಲಕರು ಅವಕಾಶ ನೀಡುವುದಿಲ್ಲವಂತೆ, ಸರಿ ಅದು ಏನೇ ಇರಲಿ ಈಗ ನಾವು ಸ್ವಲ್ಪ ಕೊಟ್ಟೂರೇಶ್ವರ ವಸತಿ ವಿದ್ಯಾರ್ಥಿ ನಿಲಯ ಹೊರಗಡೆ ಕಾಂಪೌಂಡಿನ ಒಳಗೆ ಅಲ್ಲಲ್ಲಿ ಹೆಚ್ಚಾಗಿ ಆಹಾರವನ್ನು ಎಲ್ಲೆಂದರಲ್ಲಿ ಸಂಗ್ರಹ ಮಾಡಿರುವರಂತೆ. ಅದು ನೋಡುಗರಿಗೆ ಹಸಯ್ಯ ರೀತಿಯಲ್ಲಿ ಕಾಣುವುದಂತೆ, ಅದರ ನಿಲಯ ಪಾಲಕರು ಹೇಳುವ ಪ್ರಕಾರ ನಾವು ಆದಷ್ಟು ಮಟ್ಟಿಗೆ ಸ್ವಚ್ಛತೆ ಕಾಪಾಡಿ ಕೊಳ್ಳುತ್ತೇವೆ, ಈಗ ಊಟದ ಸಮಯ ವಾಗಿರುವುದರಿಂದ, ಹೆಚ್ಚಾಗಿರುವ ಅನ್ನ ಸಂಬಾರನ್ನು ವಿದ್ಯಾರ್ಥಿಗಳು ಹೀಗೆ ಎರಡು ಕಡೆ ಹಾಕಿದ್ದಾರೆ.

ಅದನ್ನು ಸರಿಪಡಿಸಿ ಕೊಳ್ಳುತ್ತೇವೆ ಎಂದರು ತಮ್ಮ ವಿದ್ಯಾರ್ಥಿ ನಿಲಯದ ವೆಸ್ಟ್ ನೀರು(ಎಂಜಲು ನೀರು, ಮುಸುರೆ ನೀರು, ಕೈ ಮತ್ತು ಮೈ ತೊಳೆದ ನೀರು) ಎಲ್ಲಿಗೆ ಕಳುಹಿಸುವ ವ್ಯವಸ್ಥೆ ಮಾಡಿರುವಿರಿ ಎಂದು ಪ್ರಶ್ನೆ ಮಾಡಿದರೆ, ಅವರು ಹೇಳುವ ಉತ್ತರ ಇಷ್ಟೇ, ಗಿಡಗಳಿಗೆ ನಾವು ಬಿಡುತ್ತಿದ್ದೇವೆ. ನಾವು ಹೊರಗಡೆ ಬಿಡುವುದಿಲ್ಲ, ಯಾರು ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ ಹೊರಗಡೆ ನೀರು ಬಿಡುವುದು ಪರಿಶಿಷ್ಟ ಜಾತಿಯ ವಿದ್ಯಾರ್ಥಿ ನಿಲಯದಿಂದ ಹರಿಯುತ್ತದೆ. ಎಂದು ಹೇಳಿದರು. ಅದನ್ನು ನಾವು ಪರಿಶೀಲನೆ ಮಾಡಿದಾಗ, ಮುಸುರೆ ನೀರು, ಎಂಜಲ ನೀರು, ಕೈ ಮತ್ತು ಮೈತೊಳೆದ ನೀರು ಗಿಡಗಳಿಗೆ ಬಿಟ್ಟರೆ, ಗಿಡಗಳ ಪರಿಸ್ಥಿತಿ ಏನಾಗಬೇಕು ನೀವೇ ಯೋಚಿಸಿ? ಇವರೇ ಈ ಗಿಡಗಳನ್ನು ನಾಶಕ್ಕೆ ಕಾರಣ ಕರ್ತರಾಗುತ್ತಾರೆ. ಇವರು ಹೇಳುವುದನ್ನು ಕೇಳಿ ಕೆಲವು ಸಾವ೯ಜನಿಕರು, ತಮ್ಮ ಅಷ್ಟೇಕ್ಕೆ ತಾವೇ ಮಾತನಾಡಿ ಕೊಳ್ಳುವರಂತೆ. ಅದರ ಅರಿವಿಲ್ಲದಂತೆ ಮಾಧ್ಯಮಗಳ ಮುಂದೆ ನಾವು ಗಿಡಗಳಿಗೆ ಬಿಡುತ್ತೇವೆ ಎಂದು ನಿಲಯ ಪಾಲಕರು ಹೇಳಿದರು. ಇವರು ಗಿಡಕ್ಕೆ ಬಿಡಲಿಲ್ಲ ಅಂದರೆ, ಇಲ್ಲಿನ ‘ವೇಸ್ಟ್’ ನೀರು ಎಲ್ಲಿಗೆ ಹೋಗುತ್ತದೆ ಎಂಬುದೇ ಆಶ್ಚಯ೯ವಾಗಿದೆ. ಒಟ್ಟಿನಲ್ಲಿ ಇವರ ನ್ಯೂನತೆಗಳಿಂದ ನಿಲಯದ ಹಿಂದೆ, ಕಾಂಪೌಂಡಿನ ಹೊರಗೆ ಸೊಳ್ಳೆ ಘಟಕ ದಂತೆ, ಸೊಳ್ಳೆ ತಯಾರಾಗುವುದಂತೂ ನಿಜ. ಏನಂತೀರ? ಈ ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಲವಾರು ಈ ಕೊಳಚೆ ನೀರಿನಿಂದ ರೋಗಗಳು ಹರಡುವುದಕ್ಕಿಂತ ಮುಂಚಿತವಾಗಿ ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು, ಆರೋಗ್ಯ ಇಲಾಖೆಯವರು ಮತ್ತು ಪಟ್ಟಣ ಪಂಚಾಯ್ತಿಯವರು ಏನು ಕಾನೂನು ಕ್ರಮ ಜರುಗಿಸುವರೋ ಕಾದು ನೋಡೋಣ! ಮುಂದಿನ ಸಂಚಿಕೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಬಿಸಿಎಂ ವಿದ್ಯಾರ್ಥಿ ನಿಲಯ ಹಾಗೂ ಪಟ್ಟಣ ಪಂಚಾಯತಿಯ ನಿರ್ಲಕ್ಷ್ಯದ ಬಗ್ಗೆ ವರದಿ ಮಾಡಲಾಗುವುದು ಅದಕ್ಕಾಗಿಯೇ Wait and see.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ.ಕೊಟ್ಟೂರು