ಪ್ರಾಥಮಿಕ ಸಹಕಾರಿ ಸಂಘಕ್ಕೆ ನೂತನವಾಗಿ – ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ.
ಘಾಳಪೂಜಿ ಜ.03

ಮುದ್ದೇಬಿಹಾಳ ತಾಲೂಕಿನ ಘಾಳಪೂಜಿ ಗ್ರಾಮದ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷರಾದ ಡಿ.ಬಿ ನಾಡಗೌಡ್ರ ಮತ್ತು ಉಪಾಧ್ಯಕ್ಷ ರಾದ ಶ್ರೀಮತಿ ನೀಲಮ್ಮ ಪರಸಪ್ಪ ಲೋಟಗೇರಿ ಅವರ ಸ್ವಯಂ ಪ್ರೇರಿತ ರಾಜಿನಾಮೆಯಿಂದ ನೂತನವಾಗಿ ಅಧ್ಯಕ್ಷರಾಗಿ ಲೋಟಗೇರಿ ಗ್ರಾಮದ ರಾಮಣ್ಣ ಹಟ್ಟಿ ಮತ್ತು ಉಪಾಧ್ಯಕ್ಷರಾಗಿ ಇಂಗಳಗಿ ಗ್ರಾಮದ ಅಮರೇಶ ಕರಡಿ ಅವರನ್ನು ಎಲ್ಲಾ ಸದಸ್ಯರ ಸಹಮತ ದಿಂದ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಯಾದರು.
ನೂತನ ಅಧ್ಯಕ್ಷರಾದ ರಾಮಣ್ಣ ಹಟ್ಟಿ ಮಾತನಾಡಿ ನಮ್ಮ ಸಂಘದ ಎಲ್ಲಾ ಸದಸ್ಯರು ನನ್ನನ್ನು ಅವಿರೋಧವಾಗಿ ಆಯ್ಕೆಮಾಡಿದ್ದಕ್ಕೆ ಧನ್ಯವಾದಗಳು. ನಾನು ಸಂಘದ ಉಪಾಧ್ಯಕ್ಷರನ್ನು ಮತ್ತು ಎಲ್ಲಾ ಸದಸ್ಯರನ್ನು ಒಪ್ಪಿಗೆ ಪಡೆದು ಕೆಲಸ ಮಾಡುವೆ. ಮತ್ತು ಸಂಘದ ಏಳಿಗೆ ಮತ್ತು ಅಭಿವೃದ್ಧಿಗಾಗಿ ಕೆಲಸವನ್ನು ಮಾಡುವೆ ಎಂದು ಮಾತನಾಡಿದರು.
ಇದೇ ಸಂಧರ್ಬದಲ್ಲಿ ನಿರ್ದೇಶಕಾದ ಯಮನಪ್ಪ ಕಮರಿ, ದೇವಮ್ಮ ಚ ಜೂಲಗುಡ್ಡ, ನೀಲಮ್ಮಲೋಟಗೇರಿ, ಐ ಜಿ ನಾಡಗೌಡರ, ಬಿ ಎಸ್ ಕಣಕಾಲಮಠ, ಶಿವಶರಣರ ಹಾದಿಮನಿ, ರಮೇಶ ವಾಲಿಕಾರ, ಹಾಗೂ ಡಿ ಬಿ ನಾಡಗೌಡ್ರ ಇದ್ದರು.
ಇದೇ ವೇಳೆಯಲ್ಲಿ ಬ್ಯಾಂಕಿನ ಸಿಬ್ಬಂದಿಗಳಾದ ಪ್ರಭಾರ ಕಾರ್ಯದರ್ಶಿ ರಾವಜಪ್ಪ ಮಾದರ, ರಘುನಾಥ ಸಾಸನೂರ, ಸಾಯಬಣ್ಣ ಚಲವಾದಿ ಹಾಗೂ ಗ್ರಾಮಸ್ಥರಾದ ಬಸಣ್ಣ ಹುಗ್ಗಿ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಮಲ್ಲಪ್ಪ ಜೂಲಗುಡ್ಡ, ಯಲ್ಲಪ್ಪ ನಾಗರಬೆಟ್ಟ, ಚನ್ನಬಸಪ್ಪ ಹಾದಿಮನಿ, ತಾ.ಪಂ ಸದಸ್ಯರಾದ ಸುರೇಶ ಹುಗ್ಗಿ, ರೇವಣಸಿದ್ದಪ್ಪ ದಳಪತಿ, ಗ್ರಾ.ಪಂ ಸದಸ್ಯೆ ನೀಲಮ್ಮ ನಾಗರಬೆಟ್ಟ, ಬಿ ಕೆ ಮಂಗಳೂರ, ಬಸವರಾಜ ಹಟ್ಟಿ, ಶಿವಪುತ್ರ ಬಂಗಾಳಿ, ನಾಗೇಶ ಬಾಚಿಬಾಳ, ಗಂಗಾಧರ ಜೂಲಗುಡ್ಡ, ಹುಲಗಪ್ಪ ನಾಗರಬೆಟ್ಟ ಮುತ್ತಣ್ಣ ನಾಗಬೇನಾಳ ಸೇರಿದಂತೆ ಇನ್ನಿತರರು ಇದ್ದರು.
ವರದಿ:ಜಿ.ಎನ್ ಬೀರಗೊಂಡ (ಮುತ್ತು).

