ಅಂಬೇಡ್ಕರ್ ಪ್ರತಿಮೆಗೆ ಅವಮಾನ ಖಂಡಿಸಿ – ದಲಿತ ವಿಮೋಚನಾ ಜಿಲ್ಲಾ ಸಮಿತಿಯಿಂದ ಹೋರಾಟದ ಎಚ್ಚರಿಕೆ.
ಹುಬ್ಬಳ್ಳಿ ಜನೇವರಿ.25

ಕಲಬುರ್ಗಿ ಜಿಲ್ಲೆ ಕೋಟನೂರ (ಡಿ) ಪ್ರದೇಶದಲ್ಲಿ ಇರುವ ಸಂವಿಧಾನ ಶಿಲ್ಪಿ, ಭಾರತ ರತ್ನ, ಡಾ|| ಬಿ.ಆರ್. ಅಂಬೇಡ್ಕರ್ ರವರ ಪುತ್ಥಳಿಗೆ ದಿ: 23-01-2024 ರಂದು ಅಪಮಾನ ಮಾಡಿ ಪಟಾಕಿ ಸಿಡಿಸಿ ತಮ್ಮ ವಿಕೃತ ಮನಸ್ಸು ಪ್ರದರ್ಶನ ಗೊಳಿಸಿದ್ದಾರೆ ಇಂತಹ ಜಾತಿವಾದಿಯ ಮನಸ್ಸಸ್ಥಿತಿ ಇನ್ನೂ ಜೀವಂತವಾಗಿವೆ ಎಂಬುವುದು ವಿಷಾದನೀಯ ಕರ್ನಾಟಕ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಡಳಿತಗಳು ಸಂವಿಧಾನ ಶಿಲ್ಪಿ, ಡಾ|| ವಿ.ಆರ್ ಅಂಬೇಡ್ಕರ ರವರ ಪುತ್ಥಳಿಗಳಿಗೆ ರಕ್ಷಣೆ ನೀಡಲು ಸಂಪೂಣ ವಿಫಲವಾಗಿವೆ, ಹಾಗೂ ದಲಿತ ಜನಾಂಗಕ್ಕೆ ಇವರಿಂದ ರಕ್ಷಣೆ ಎಂಬುವುದು ಪುಸ್ತಕದ ಮಾತಾಗಿದೆ. ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್ ಅಂಬೇಡ್ಕರ ಅವರಿಗೆ ಚುತ್ಯಿ ಬಂದರೆ ದಲಿತರ ಮೇಲೆ ದೌರ್ಜನ್ಯ ನಡೆದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ಮಾನ್ಯ ಡಾ|| ಎಚ್. ಸಿ. ಮಹಾದೇವಪ್ಪ ರವರು ಸಮಾಜ ಕಲ್ಯಾಣ ಇಲಾಖೆ ಸಚಿವರು ಕಳೆದ ಕೆಲವು ದಿನಗಳ ಹಿಂದೆ ಹೇಳಿದ್ದರು ಆದರೂ ಕೂಡಾ ರಾಜ್ಯದ ಎಲ್ಲಾ ಜಿಲ್ಲಾಡಾಳಿತಗಳು ಎಚ್ಚೆತ್ತು ಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು ಖಂಡನೀಯ ವಿಶೇಷವಾಗಿ ಕಲಬುರ್ಗಿ ಜಿಲ್ಲಾಡಳಿತ ತನ್ನ ವಿಫಲತೆಯನ್ನು ತೋರಿಸಿದೆ.

ಜಿಲ್ಲಾಡಳಿತದ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ ರವರ ಪುತ್ಥಳಿಗೆ ಅಪಮಾನ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು ಮತ್ತು ಮತ್ತೋಮ್ಮೆ ಈ ರೀತಿ ಘಟನೆ ಘಟಿಸದಂತೆ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ಎಚ್ಚರವಹಿಸಲು ಆದೇಶಿಸಬೇಕು ಎಂದು ರಾಜ್ಯ ಸರಕಾರಕ್ಕೆ ಒತ್ತಾಯಿಸುತ್ತೇವೆ ಇದೇ ರೀತಿ ಪದೇ ಪದೇ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ ರವರ ಮೇಲೆ ಅಪಮಾನ ನಡೆದರೆ ರಾಜ್ಯಾಂದ್ಯಂತ ದಲಿತ ಹೋರಾಟದ ಆಂಧೋಲನಗಳು ಅನಿವಾರ್ಯ ಎಂದು ಸಿದ್ದಾರ್ಥ ಮಲ್ಲಮ್ಮನವರ ಜಿಲ್ಲಾಧ್ಯಕ್ಷರು, ಸುರೇಶ ಶಿವಣ್ಣನವರ ಹುಬ್ಬಳ್ಳಿ ತಾಲೂಕಾ ಅಧ್ಯಕ್ಷರು, ಉಮೇಶ ಮಾದರ ಕುಂದಗೋಳ ತಾಲೂಕಾ ಅಧ್ಯಕ್ಷರು, ಕೆಂಚಪ್ಪ ಮಲ್ಲಮ್ಮನವರ ಜಿಲ್ಲಾ ಕಾರ್ಯಾಧ್ಯಕ್ಷರು, ಓಂ ನಮಃ ಶಿವಾಯ ವೀರಾಪೂರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಲಿತ ವಿಮೋಚನಾ ಚಳುವಳಿ ಜಿಲ್ಲಾ ಸಮಿತಿಯು ಪತ್ರಿಕಾ ಪ್ರಕಟಣೆಯ ಮೂಲಕ ತೀವ್ರವಾಗಿ ಎಚ್ಚರಿಸುತ್ತದೆ.