ವಿದ್ಯಾವಂತರ ಕೈಯಲ್ಲಿದೆ ಭಾರತದ ಭವಿಷ್ಯ.
ಇಂಡಿ ಜನೇವರಿ.25

ಪ್ರತಿಯೊಬ್ಬರು ಶಿಕ್ಷಣದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು.ವಿದ್ಯೆ ವಿದ್ಯಾರ್ಥಿಗಳ ಜೀವನ ಬೆಳಗುವ ಕಣ್ಣು, ಕಾರಣ ಭಾರತದ ಭವಿಷ್ಯ ವಿದ್ಯಾವಂತರ ಕೈಯಲ್ಲಿ ಇದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ ಹೇಳಿದರು.ಪಟ್ಟಣದ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಕಾ ಉಪಕರಣಗಳ ಪ್ರದರ್ಶನ, ಆಹಾರ ಹಬ್ಬ, ರಂಗೋಲಿ ಸ್ಪರ್ಧೇ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಸ್ಥೆಯ ಉಪಾಧ್ಯಕ್ಷ ಸಂಗಣ್ಣ ಇರಾಬಟ್ಟಿ ಮಾತನಾಡಿ ಇಂದು ನಮ್ಮ ಯುವಕ ಯುವತಿಯರು ವಿಜ್ಞಾನ, ಕ್ರೀಡೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮುಂದಿದ್ದು ಜಗತ್ತು ನಮ್ಮ ಯುವಕರ ಕಾರ್ಯ ಪ್ರಶಂಸಿಸುತ್ತಿದ್ದಾರೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಪಿ.ಬಿ.ಕತ್ತಿ,ಪ್ರಾಚಾರ್ಯ ಸುಧಾ ಸುಣಗಾರ, ಮುಖ್ಯ ಗುರುಗಳಾದ ರಾಜಕುಮಾರ ಪಾಟೀಲ ವಿದ್ಯಾರ್ಥಿಗಳ ಸ್ಪರ್ಧೇ ಕುರಿತು ಮಾತನಾಡಿದರು. ಡಿ.ಎಸ್.ಮಠಪತಿ, ಸಿ.ಎಸ್.ಪೂಜಾರಿ,ಎಂ.ಎಂ ಪೊದ್ದಾರ,ಸಂಗೀತಾ ಉಟಗಿ, ಸುರೇಖಾ ಭೈರಶೆಟ್ಟಿ,ಶೃತಿ ಬಿರಾದಾರ,ರೇಣುಕಾ ಗೊಟಗಿ, ಕಮರುನ್ನಿಸಾ ಕೊಟ್ನಾಳ ಮತ್ತಿತರಿದ್ದರು.
ಬಾಕ್ಸ್ -ಇಂಡಿ ಪಟ್ಟಣದ ಕರ್ನಾಟಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿಕಾ ಉಪಕರಣಗಳ ಪ್ರದರ್ಶನ, ಆಹಾರ ಹಬ್ಬ, ರಂಗೋಲಿ ಸ್ಪರ್ಧೇ ಕಾರ್ಯಕ್ರಮದಲ್ಲಿ ಕುಡಿಗನೂರ ಮಾತನಾಡಿದರು.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ