ಶರಣ ಸಾಹಿತ್ಯ ಪರಿಷತ್ ತಾಲೂಕಾ ಘಟಕದಿಂದ ದತ್ತಿ ಉಪನ್ಯಾಸ.
ಪೂಜಾರಹಳ್ಳಿ ಜನೇವರಿ.25





ವಚನ ಸಾಹಿತ್ಯವು ಸಮಾಜದ ಅಸಮಾನತೆ ಮೂಡನಂಬಿಕೆ ಜಾತೀಯತೆಯನ್ನು ಹೋಗಲಾಡಿಸಲು ಶರಣರಿಂದ ರಚಿತವಾಗಿರುವ ಸಾರವನ್ನು ಎಲ್ಲರೂ ಅರ್ಥೈಸಿಕೊಂಡು ಜೀವನ ನಡೆಸಬೇಕು ಎಂದು ಶರಣ ಸಾಹಿತ್ಯ ಪರಿಷತ್ತಿನ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ ರವಿಕುಮಾರ್ ತಿಳಿಸಿದರು. ಸಮೀಪದ ಪೂಜಾರಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹನೀಯರು ವಿದ್ವಾಂಸರಿಂದ ಸಾಹಿತ್ಯ ಶ್ರೀಮಂತಗೊಂಡಿದೆ ಕನ್ನಡ ಸಾಹಿತ್ಯದ ಜೊತೆಗೆ ಉದ್ದೇಶವು ಶರಣ ಸಾಹಿತ್ಯ ಪರಿಷತ್ ಹೊಂದಿದ್ದು ಶರಣರ ವಚನಾಮೃತ ಸಾಧ್ಯ ಎಂದರು.ಈ ವೇಳೆ ಹುಲಿಕೆರೆ ಗ್ರಾಮದ ವಿಶಾಲಾಕ್ಷಿ ಎಮ್ ಷಡಕ್ಷರಿ ಹೆಸರಿನ ದತ್ತಿ ವಿಷಯ ಸಾವಯವ ಹಾಗೂ ಅಲ್ಲಮ ಪ್ರಭುದೇವರ ಆಧ್ಯಾತ್ಮದ ಕೃಷಿ ಕುರಿತು ನಿವೃತ್ತ ಉಪನ್ಯಾಸಕ ಎಚ್‌ವಿ ವಸಂತ ಸಜ್ಜನ್ ಮಾತನಾಡಿ 12ನೇ ಶತಮಾನದಲ್ಲಿ ಬಸವಣ್ಣನವರ ಕಾಯಕ ದಾಸೋಹ ತತ್ವ ಮಾರು ಹೋಗಿ ದೇಶದ ನಾನಾ ಭಾಗಗಳಿಂದ ಕಲ್ಯಾಣಕ್ಕೆ ಆಗಮಿಸಿದರು.

ಜೊತೆಗೆ ಸಾವಯವ ಪದಾರ್ಥಗಳನ್ನು ಬೆಳೆಯುವುದರ ಜೊತೆಗೆ ಸಾವಯವ ಪದಾರ್ಥಗಳನ್ನು ಬಳಸುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ವಿದ್ಯಾಭ್ಯಾಸದಲ್ಲಿ ಉನ್ನತ ಹುದ್ದೆಗೆ ಹೋಗಲು ಸಹಕಾರಿಯಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಸೋಮ ಚಂದ್ರಶೇಖರಯ್ಯ ಲೋಲಾಕ್ಷಮ್ಮ ಅವರ ದತ್ತಿ ವಿಷಯ ವಚನ ಸಾಹಿತ್ಯದ ಜೀವನ ಮೌಲ್ಯಗಳು ಕುರಿತು ಮಾಹಿತಿ ನೀಡಿದರು. ಇನ್ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕರಾದ ಅನಂತ್ ಕುಮಾರ್ ಸ್ವ ವಿವರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಗತಿಪರ ರೈತ ಪೂಜಾರಹಳ್ಳಿ ತಿಪ್ಪೇಸ್ವಾಮಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಪ್ರಧಾನ ಕಾರ್ಯದರ್ಶಿ ಕೆಎಸ್ ವೀರೇಶ್, ವರದಿಗಾರರು ಹುಡೇಂ ಕೃಷ್ಣಮೂರ್ತಿ, ಶಾಲಾ ಮುಖ್ಯ ಶಿಕ್ಷಕ ಕೆ ಬಸಯ್ಯ, ಶಿಕ್ಷಕರಾದ ನಾಗಭೂಷಣ, ಜಯಪ್ಪ, ನವೀನ್ ಕುಮಾರ್ ಸೇರಿದಂತೆ ಇತರರ ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ