ಜಾಗತಿಕ ಲಿಂಗಾಯಿತ ಮಹಿಳಾ ಸಮಾವೇಶ.
ತರೀಕೆರೆ ಜನೇವರಿ.25
ಅಕ್ಕ ನಾಗಲಾಂಬಿಕೆ ಗದ್ದಿಗೆಯನ್ನು ಅಭಿವೃದ್ಧಿಪಡಿಸಲು ಲಿಂಗಾಯಿತ ಸಮಾಜಕ್ಕೆ ಐಕ್ಯ ಸ್ಥಳವನ್ನು ಖಾತೆ ಬದಲಾವಣೆ ಮಾಡಿಕೊಡಬೇಕು, ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಬೇಕು ಎಂದು ತಾಲೂಕು ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾದ ಜಿ ಚಂದ್ರಶೇಖರಪ್ಪ ಹೇಳಿದರು. ಅವರು ಇಂದು ಅಕ್ಕ ನಾಗಲಾಂಬಿಕೆ ಸಮುದಾಯ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಿಂದುಳಿದ ಮತ್ತು ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡುವ ಮೀಸಲಾತಿ ಸೌಲಭ್ಯವನ್ನು ಸರ್ಕಾರ ಮಂಜೂರು ಮಾಡಬೇಕು ಎಂದು ಹೇಳಿದರು ಅಕ್ಕ ನಾಗಲಾಂಬಿಕೆ ಗದ್ದಿಗೆ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಸಾಣೆಹಳ್ಳಿ ಮಠದ ಡಾ. ಪಂಡಿತಾರಾಧ್ಯ ಸ್ವಾಮೀಜಿಗಳು ಪ್ರಾರಂಭದಿಂದಲೂ ನೇತೃತ್ವ ವಹಿಸಿರುತ್ತಾರೆ ಅವರ ಮಾರ್ಗದರ್ಶನದಲ್ಲಿ ಸಮುದಾಯದ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.
ಗೋರು ಚನ್ನಬಸಪ್ಪ ರವರ ಪುತ್ರಿ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷರಾದ ಮುಕ್ತ ಬಿ ಕಾಗಲಿ, ರವರ ನೇತೃತ್ವದಲ್ಲಿ ಜನವರಿ ದಿನಾಂಕ 27 ಮತ್ತು 28ರಂದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಜಾಗತಿಕ ಲಿಂಗಾಯಿತ ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿದೆ ಈ ಸಮಾವೇಶಕ್ಕೆ ತರೀಕೆರೆಯಿಂದ ಸುಮಾರು 150 ಜನ ಮಹಿಳೆಯರು ಮತ್ತು ಜಿಲ್ಲೆಯಿಂದ 500 ಜನ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ತಾಲೂಕು ಲಿಂಗಾಯಿತ ಮಹಿಳಾ ಘಟಕದ ಅಧ್ಯಕ್ಷರಾದ ಮಮತಾ ರಮೇಶ್ ರವರು ಹೇಳಿದರು. ಲಿಂಗಾಯಿತ ಸಮುದಾಯಕ್ಕೆ ಸೇರಿದ ಎಲ್ಲಾ ಉಪ ಜಾತಿಗಳನ್ನು ಒಂದುಗೂಡಿಸಿ ಲಿಂಗಾಯತ ಧರ್ಮ ಮಾತ್ರ ಉಳಿಸಬೇಕಾಗಿದೆ ಲಿಂಗಾಯಿತ ಎಂಬುದು ಜಾತಿಯಲ್ಲ, ಒಂದು ಧರ್ಮ,ಎಂದು ಲಿಂಗಾಯಿತ ಮಹಾಸಭಾ ಸದಸ್ಯರಾದ ಚೆನ್ನಯ್ಯರವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸದಸ್ಯರಾದ ಷಣ್ಮುಖಪ್ಪ, ರಮೇಶ್, ಬಿಎಸ್ಏನ್ಎಲ್ ಪ್ರಸನ್ನ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್.ತರೀಕೆರೆ.