ಉ.ಕ ಪ್ರತಿಭೆಗಳಿಗೆ ಇನ್ನಷ್ಟು ಅವಕಾಶಗಳು ಸಿಗಬೇಕಿದೆ – ಲಿಂಗರಾಜ ಪಾಟೀಲ.

ಹುಬ್ಬಳ್ಳಿ ಜನೇವರಿ.25 :

ಚಿತ್ರರಂಗದಲ್ಲಿ ಉತ್ತರ ಕರ್ನಾಟಕದ ಹಲವು ಪ್ರತಿಭೆಗಳು ಬೆಳಗುತ್ತಿವೆ. ಇನ್ನೂ ಸಾಕಷ್ಟು ಪ್ರತಿಭಾನ್ವಿತ ಕಲಾವಿದರು, ತಂತ್ರಜ್ಞರು ಇಲ್ಲಿದ್ದು ಅವರಿಗೂ ಹೆಚ್ಚಿನ ಅವಕಾಶಗಳು ಸಿಗಬೇಕಿದೆ ಎಂದು ಹುಡಾ ಮಾಜಿ ಅಧ್ಯಕ್ಷ ಲಿಂಗರಾಜ ಪಾಟೀಲ ಹೇಳಿದರು.

ಅವರು ಹುಬ್ಬಳ್ಳಿಯ ಸುಶ ಫಿಲ್ಮ್ ಫ್ಯಾಕ್ಟರಿಯಲ್ಲಿ ಹತ್ತು ವಾರಗಳ ಕಾಲ ವಾರಾಂತ್ಯ ತರಬೇತಿಯಲ್ಲಿ ಅಭಿನಯ, ನಿರ್ದೇಶನ ಹಾಗೂ ಹೊಸ್ಟಿಂಗ್ ತರಬೇತಿ ಪಡೆದವರ ಬಿಳ್ಕೋಡುವ ಮತ್ತು ಪ್ರಮಾಣಪತ್ರ ವಿತರಣೆ ಸಮಾರಂಭದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮನರಂಜನಾ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ವಿದ್ದು ಅವುಗಳ ಸದ್ಭಳಕೆ ಸರಿಯಾಗಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅತಿಥಿಗಳಾಗಿ ರಂಗಭೂಮಿ, ಚಿತ್ರರಂಗದ ಸಾಹಿತಿ ಕಲಾವಿದ ಜಿ.ವಿ.ಹಿರೇಮಠ, ಚಲನಚಿತ್ರ ನಟ,ನಿರ್ಮಾಪಕ ರೇಣುಕುಮಾರ ಸಂಸ್ಥಾನಮಠ, ಚಲನಚಿತ್ರ ವಿತರಕ ಅಹ್ಮದ ಕುಲ್ಮಿ, ಸಿನಿಮಾ ಪತ್ರಕರ್ತರಾದ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಿಗಿ ಪಾಲ್ಗೊಂಡಿದ್ದರು.

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಾ.ಶಂಕರ ಸುಗತೆ ಮಾತನಾಡಿ ಉತ್ತರ ಕರ್ನಾಟಕದ ಜನರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯಬೇಕು ಎನ್ನುವ ಕಾರಣಕ್ಕೆ ಈ ಸಂಸ್ಥೆ ಹುಟ್ಟು ಹಾಕಲಾಗಿ. ಈಗಾಗಲೇ ರಾಜ್ಯದ ಹಲವಾರು ನಿರ್ಮಾಪಕರು ಚಲನಚಿತ್ರ ನೋಂದಣಿ ಮಾಡಿ ಚಿತ್ರಕೂಡ ನಿರ್ಮಿಸುತ್ತಿದ್ದಾರೆ. ಸರಕಾರ ಇಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೆರವು ನೀಡಬೇಕು. ಉತ್ತರ ಕರ್ನಾಟಕದವರಿಗೆ ಅವಕಾಶಗಳಿಲ್ಲ ಎನ್ನುವಂತಿಲ್ಲ. ಸಾಕಷ್ಟು ಕಲಾವಿದರು, ತಂತ್ರಜ್ಞರು ಚಿತ್ರರಂಗದಲ್ಲಿ ಈಗಾಗಲೇ ತೊಡಗಿಕೊಂಡಿದ್ದಾರೆ. ಆದಾಗ್ಯೂ ಈ ಭಾಗದವರೇ ಹೆಚ್ಚು ಇಲ್ಲಿಯ ಸಂಪನ್ಮೂಲಗಳನ್ನು, ವಿವಿಧ ಕಲಾವಿದರು, ತಂತ್ರಜ್ಞರನ್ನು ಪರಿಣಿತರನ್ನು ಬಳಸಿಕೊಂಡು ಉತ್ತರ ಕರ್ನಾಟಕದಲ್ಲಿ ಚಲನಚಿತ್ರದ ಚಟುವಟಿಕೆಗಳು ಹೆಚ್ಚಾಗಲು ಕೈಜೊಡಿಸಬೇಕಾಗಿದೆ ಎಂದರು. ತರಬೇತಿ ಪಡೆದ ೨೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತಲ್ಲದೆ ಮುಂದಿನ ದಿನಗಳಲ್ಲಿ ಕಿರುಚಿತ್ರ, ಚಲನಚಿತ್ರಗಳಲ್ಲಿ ಅವಕಾಶ ನೀಡಲಾಗುವದೆಂದರು.

ತರಬೇತಿ ಪಡೆದ ಗೌತಮ ತಾಂಬೆ, ಪಾವನಿ ಪಾಟೀಲ, ಸಂಜನಾ ತುಂಗಳ ಪ್ರವೀಣ ಸುಂಕದ ಮೊದಲಾದವರು ಅಭಿಪ್ರಾಯ ಹಂಚಿಕೊಂಡರು. ಸಿನಿಮಾ ಪತ್ರಕರ್ತರಾದ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಗಿ ಸಂದರ್ಭೋಚಿತ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ವಿ.ಸುರೇಶ ಅವರು ಬರೆದ ಹಾಡಿನ ಧ್ವನಿಸುರುಳಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ಸಾಧಕರಾದ ಛಾಯಾಗ್ರಾಹಕ ವಿ. ಸುರೇಶ, ಚಲನಚಿತ್ರ ನಿರ್ದೇಶಕ ಶಿವಾಜಿರಾವ್ ವಾಟಕರ್, ನೃತ್ಯ ನಿರ್ದೇಶಕ ಶಿವಪ್ರಕಾಶ ನಾಯಕ ಅವರನ್ನು ಗೌರವಿಸಿ ಸತ್ಕರಿಸಲಾಯಿತು. ಬೆಳಗಾವಿಯ ನಿರ್ಮಾಪಕ ಸೂರಜ ದೇಸಾಯಿ, ಬೀದರದ ಶಾಂತಕುಮಾರ ಪಾಟೀಲ, ಗಾಯಕ ರವೀಂದ್ರ ರಾಮದುರ್ಗಕರ ಕಾರ್ಯಕ್ರಮದಲ್ಲಿ ಉಪಸ್ಥಿರಿದ್ದರು. ವ್ಯವಸ್ಥಾಪಕ ನಿರ್ದೇಶಕ ಓಂಕಿರಣ ಕೊಂಗೆ ಸ್ವಾಗತಿಸಿದರು. ಕವಿತಾ ವಂದಿಸಿದರು. ವೈಷ್ಣವಿ ಆಚಾರ್ಯ ನಿರೂಪಿಸಿದರು.

ವರದಿ
ಡಾ.ಪ್ರಭು ಗಂಜಿಹಾಳ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button