ಮದಭಾವಿ ಗ್ರಾಮದ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಧ್ವಜಾರೋಹಣ.
ಮದಭಾವಿ ಜನೇವರಿ.26

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಾಲಯದ ಆವರಣದಲ್ಲಿ ಜನೆವರಿ 26 ಗಣರಾಜ್ಯೋತ್ಸವ ಆಚರಿಸಲಾಯಿತು. ಭಾವಚಿತ್ರಕ್ಕೆ ಪೂಜೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದರಾಯ ತೋಡಕರ ಉಮೇಶ ಪಾಟೀಲ ಸಲ್ಲಿಸಿದರು. ಪಿ ಕೆ ಪಿ ಎಸ್ ಸೊಸೈಟಿ ನೂತನ ನಿರ್ದೇಶಕರಾದ ಭೀಮಗೌಡಾ ನಾಯಿಕ ಹಾಗೂ ಮುಖಂಡರಾದ ಪ್ರವೀಣ ನಾಯಿಕ ಧ್ವಜಾರೋಹಣ ಮಾಡಿದರು.ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಮಹಾದೇವ ನಾಯಿಕ,ಪಿ ಕೆ ಪಿ ಎಸ್ ಅಧ್ಯಕ್ಷ ನಿಜಗುಣಿ ಮಗದುಮ್ಮ, ಉಪಾಧ್ಯಕ್ಷ ಅಶೋಕ ಪೂಜಾರಿ, ಅರ್ಜುನ ಇಬ್ರಾಹಿಂಪೂರ, ಮಪ್ಪು ಪೂಜಾರಿ, ಸಂತೋಷ ನಾಯಿಕ, ಮಲ್ಲಪ್ಪಾ ಐನಾಪುರೆ,ರಾವಸಾಬ ಚೌಗಲಾ,ಅಸ್ಲಾಂ ಮುಲ್ಲಾ,ಅಶೋಕ ಸೂರ್ಯವಂಶಿ, ಸಿದರಾಯ ಪತಂಗೆ, ಪ್ರಶಾಂತ ನಾಯಿಕ, ರಾವಸಾಬ ಮಗದುಮ್ಮ,ಅಮಸಿದ್ದ ರೋಗಿ,ಪರಗೊಂಡ ಮುದೋಳ, ಬಸು ಪಾಟೀಲ, ರವಿ ಪಾಟೀಲ, ಪಿರಗೊಂಡ ಪಾಟೀಲ ನಾರಾಯಣ ಭಾಮನೆ,ಸುಭಾಸ ಪೂಜಾರಿ, ಶಿಕ್ಷಕರಾದ ಪಿ ಎಮ್ ಬಡಿಗೇರ, ಬಿ ಆರ್ ಪಾಟೀಲ, ಜಿನೇಂದ್ರ ಪಾಟೀಲ,ಸಚ್ಚಿನ ಹೊಸಮನಿ, ವಿ ಆರ್ ತಕತರಾವ್, ಎಂ ಎಂ ಪಠಾಣ, ಎಸ್ ಬಿ ಲೋಟೆ ಕೆ ಎ ಕಿರಣಗಿ, ಎಂ ವಿ ಕೋಳೆಕರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು:ಎಂ.ಎಂ.ಶರ್ಮಾ.ಬೆಳಗಾವಿ