75.ನೇ ಗಣರಾಜ್ಯೋತ್ಸವ ಕೊಟ್ಟೂರಿನಲ್ಲಿ ಅಸ್ತವ್ಯಸ್ತ.
ಕೊಟ್ಟೂರು ಜನೇವರಿ.26

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ 75.ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಪಿಎಸ್ಐ ಗೀತಾಂಜಲಿ ಸಿಂಧೆ ಮುಂದಾಳತ್ವದಲ್ಲಿ ಹಾಗೂ ಪಟ್ಟಣದ ಎಲ್ಲಾ ಶಾಲಾ ಮಕ್ಕಳು ಅಚ್ಚುಕಟ್ಟಾದ ನೀಟಾದ ಪಥ ಸಂಚಲನ ದೊಂದಿಗೆ ಕಾರ್ಯಕ್ರಮ ಚೆನ್ನಾಗಿ ನಡೆದರೂ ಕೆಲವು ಅಧಿಕಾರಿಗಳ ನಿರ್ಲಕ್ಷ್ಯತನ ದಿಂದ ಅಲ್ಲೋಲ ಕಲ್ಲೋಲವಂತೆ ನಿರೂಪಣೆಗೂ ಮತ್ತು ಕಾರ್ಯಕ್ರಮಕ್ಕೂ ಅಜಗಜಾಂತರವಂತೆ ಮತ್ತು ಒಂದು ರಾಷ್ಟ್ರೀಯ ಹಬ್ಬಕ್ಕೆ ಕೆಲ ಗೀತೆಗಳ ಮೂಲಕ ಗೌರವ ಸೂಚಿಸುವುದು ಹಾಗೂ ಅದಕ್ಕೆ ಪ್ರತಿಯೊಬ್ಬ ಪ್ರಜೆ ಮತ್ತು ಅಧಿಕಾರಿಗಳ ಜವಾಬ್ದಾರಿಯುತವಾದ ಕಾರ್ಯ ಎಂದರೆ ತಪ್ಪಾಗಲಾರದು.ಶಾಸಕರಾದ ಕೆ ನೇಮಿರಾಜ್ ನಾಯ್ಕ್ ವಿಧಾನಸಭಾ ಕ್ಷೇತ್ರ ಹಗರಿಬೊಮ್ಮನಹಳ್ಳಿ ಇವರು ಮತ್ತೊಂದು ತಾಲೂಕಿನ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಕೆಲ ಗೀತೆಗಳು ಹಾಡಿ ರೈತ ಗೀತೆಯನ್ನು ಆಡಲಿಕ್ಕೆ ಹೇಳಿ ತದನಂತರ ಅದನ್ನು ನಿಲ್ಲಿಸಿ, ರೈತ ಸಂಕುಲಕ್ಕೆ ಮಸಿ ಬಳಿದಿದ್ದಾರೆ ಎಂದು ಇಲ್ಲಿನ ರೈತ ಸಂಘಟನೆಯ ಮುಖಂಡರುಗಳು ಬೇಸರ ವ್ಯಕ್ತಪಡಿಸಿದ್ದಾರೆ.ಒಟ್ಟಿನಲ್ಲಿ ಈ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರು ಕೊಟ್ಟೂರಿನಲ್ಲಿ ಗೊಣಗುತ್ತಿದ್ದಾರೆ ಸದ್ದೇ ಸದ್ದು ಗಣರಾಜ್ಯೋತ್ಸವ ಕಾರ್ಯಕ್ರಮದ್ದೇ ಆಗಿದೆ.ರಾಷ್ಟ್ರೀಯ ಹಬ್ಬಗಳ ತಾಲೂಕು ಅಧ್ಯಕ್ಷರು ತಾಲೂಕಿನ ದಂಡಾಧಿಕಾರಿಯೇ ಆಗಿರುತ್ತಾರೆ ಇದಕ್ಕೆ ಈ ಕಾರ್ಯಕ್ರಮದಲ್ಲಿ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳಿಗೆ ಯಾವ ರೀತಿ ಕ್ರಮ ಜರುಗಿಸುವಿರಿ ಹಾಗೂ ಕಾರ್ಯಕ್ರಮದ ಸಂಘಟನಕಾರರಿಗೆ ಆಹ್ವಾನ ಪತ್ರಿಕೆ ನೀಡಿಲ್ಲ ಮತ್ತು ಕಾರ್ಯಕ್ರಮ ಗೊಂದಲಕ್ಕೆ ಈಡಾಗಿದೆ ಎಂದಲ್ಲ ವಿಚಾರಣೆ ನಡೆಸಿದಾಗ ಹೌದು ಸ್ವಲ್ಪ ನೂನ್ಯತೆಗಳ ಆಗಿವೆ ಇನ್ನೂ ಮುಂದೆ ಸರಿಪಡಿಸಿ ಕೊಂಡು ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ಇದೇ ರೀತಿ ಮುಂದುವರೆದರೆ ಅಧಿಕಾರಿಗಳ ವಿರುದ್ಧ ಮುಂದೆ ಇದಕ್ಕೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಗುಡಿಯಾರ್ ಮಲ್ಲಿಕಾರ್ಜುನ್ ಸಿಪಿಐಎಂಎಲ್ ಲಿಬರೇಶನ್ ಪಕ್ಷದ ತಾಲೂಕು ಕಾರ್ಯದರ್ಶಿಗಳು ರಾಷ್ಟ್ರಗೀತೆ ಹಾಗೂ ನಾಡಗೀತೆಯನ್ನು ಹಾಡಿ ರೈತ ಗೀತೆಯನ್ನು ಹಾಡಲಿಕ್ಕೆ ಹೇಳಿ ರೈತ ಗೀತೆಯನ್ನು ಹಾಡದಿರುವುದು ಈ ದೇಶಕ್ಕೆ ಅನ್ನ ಕೊಡುವ ರೈತನನ್ನು ಅವಮಾನಿಸಿರುವುದು ತಾಲೂಕಾ ಆಡಳಿತಕ್ಕೆ ಕೊಟ್ಟೂರು ತಾಲೂಕು ವಿವಿಧ ಸಂಘಟನೆ ಸಂಸ್ಥೆಯ ಪಧಾದಿಕಾರಿಗಳು ಧಿಕ್ಕಾರವನ್ನು ಹೇಳುತ್ತಿದ್ದೇವೆ ಹಾಗೂ ಈ ಹಾಡನ್ನು ಹಾಡದಿರುವುದಕ್ಕೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ ಇದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಎಸ್. ಜಯಪ್ರಕಾಶ ನಾಯ್ಕ ತಾಲ್ಲೂಕ ಅಧ್ಯಕ್ಷ ಮಂಜುನಾಥ ಜಿಲ್ಲಾ ಮುಖಂಡರಾದ ಕೊಟ್ರಯ್ಯ ನೀಲಕಂಠನಗೌಡ್ರು ರಮೇಶ್ ನಾಯ್ಕ ಸುರೇಶ್ ನಾಯ್ಕ ಮತ್ತು ಕೊಟ್ಟೂರು ತಾಲೂಕು ಎಸ್ ಡಿ ಎಂ ಸಿ ಅದ್ಯಕ್ಷರು ಕೆ.ಎಸ್ ಹರೀಶ್. ಕರ್ನಾಟಕ ಮಾನವ ಹಕ್ಕುಗಳ ಜನ ಸೇವಾ ಸಂಸ್ಥೆ ತಾಲೂಕು ಅದ್ಯಕ್ಷರು ಬಿ.ಸತೀಶ್ ಮತ್ತು ತಾಲೂಕಿನ ಇನ್ನಿತರ ವಿವಿಧ ಸಂಘಟನೆಯ ಪಧಾದಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ವೆಂಕಟಸ್ವಾಮಿ ಸಿಪಿಐ,ಎ ನಸುರುಲ್ಲಾ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳು ಹಾಗೂ ಸದಸ್ಯರು ಎಲ್ಲಾ ಇಸಿಓ ಸಿಆರ್‌ಪಿ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಮಕ್ಕಳು ಸಾರ್ವಜನಿಕರು ಸೇರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು