ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ 400 ಕೋಟಿ ₹. ಅನುದಾನಕ್ಕೆ ಸಜ್ಜು – ಶಾಸಕ ಡಾ. ಎನ್.ಟಿ.ಶ್ರೀನಿವಾಸ್.

ಕೂಡ್ಲಿಗಿ ಜನೇವರಿ.27

ಪಟ್ಟಣ ಸೇರಿದಂತೆ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ನಾನೂರು ಕೋಟಿ ರೂ. ಸರ್ಕಾರ ದಿಂದ ಅನುದಾನಕ್ಕೆ ಸಜ್ಜಾಗಿದ್ದು ಸದ್ಯದಲ್ಲೇ ಅನುಮೋದನೆ ದೊರೆಯುವ ಮೂಲಕ ಮಾದರಿ ಕ್ಷೇತ್ರವಾಗುವ ಭರವಸೆ ಎದ್ದು ಕಾಣುತ್ತಿದ್ದು ಈಗಾಗಲೇ ಆರೋಗ್ಯ, ಶಿಕ್ಷಣ, ಸೇರಿದಂತೆ ಅನೇಕ ಇಲಾಖೆಯ ಅಭಿವೃದ್ಧಿಗೆ ಅನುಮೋದನೆ ದೊರೆತಿದೆ ಅಲ್ಲದೆ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಕ್ಷೇತ್ರದ ಅಭಿವೃದ್ಧಿಯ ತಮ್ಮ ಕನಸನ್ನು ಹಾಗೂ ಕಾಂಗ್ರೆಸ್ ಸರ್ಕಾರ ಕ್ಷೇತ್ರಕ್ಕೆ ನೀಡುವ ಅನುದಾನದ ಸಹಕಾರವನ್ನು ನೆನಪಿಸಿಕೊಂಡರು.ಅವರು ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಇಂದು ತಾಲೂಕಾ ಆಡಳಿತ ಆಯೋಜಿಸಿದ 75.ನೇ ಗಣರಾಜ್ಯೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡುತ್ತ ನಾನು ಈ ಸಂವಿಧಾನಾತ್ಮಕ ದೇಶದ ಸಾಹಿತ್ಯ, ಸಂಸ್ಕೃತಿ ಬೀಡು ಈ ಕರುನಾಡಿನಲ್ಲಿ ಹುಟ್ಟಿದ್ದೇ ಪುಣ್ಯವಾಗಿದ್ದು ಅದರಲ್ಲಿ ಸಂವಿಧಾನಾತ್ಮಕವಾಗಿ ಒಬ್ಬ ಶಾಸಕನಾಗಿ ಹಗಲು ರಾತ್ರಿ ಎನ್ನದೆ ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ಕಾರ್ಯ ಹಾಗೂ ಮಾದರಿ ಕ್ಷೇತ್ರದ ಕನಸು ನನಸು ಮಾಡುವ ಗುರಿ ನನ್ನದಾಗಿದೆ ಎಂದು ತಿಳಿಸಿದ ಅವರು ಕ್ಷೇತ್ರದ ಶಾಸಕನಾದ ನಂತರ ಪ್ರತಿ ಹಳ್ಳಿಗಳನ್ನು ಸುತ್ತಾಡಿ ಅಲ್ಲಿನ ಸಮಸ್ಯೆಗಳನ್ನು ಅರಿತು ಅದರ ಪರಿಹಾರ ಮಾಡುವಲ್ಲಿ ಮುಂದಾಗಿರುವೆ ಹಾಗೂ ಕೆಲ ಸಮಸ್ಯೆ ಪರಿಹರಿಸಿದ ಸಂತಸ ನನ್ನಲ್ಲಿದೆ.

ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ 38.ರಿಂದ 40.ಇಲಾಖೆಗಳ ಸಹಕಾರ ದಿಂದ 400.ಕೋಟಿ ₹. ಅನುದಾನಕ್ಕೆ ಸಜ್ಜಾಗಿದ್ದು 43.ಕೋಟಿ ರೂ ವೆಚ್ಚದಲ್ಲಿ ಪಟ್ಟಣ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, 4.ಕೋಟಿ ರೂ ವೆಚ್ಚದಲ್ಲಿ ಶಿಥಿಲಾವಸ್ಥೆಯ ಪೊಲೀಸ್ ಠಾಣೆ ನೆಲ ಸಮಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ, 40.ಕೋಟಿ ರೂ ಗ್ರಾಮೀಣ ಭಾಗದ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಸಚಿವ ಸತೀಶ್ ಜಾರಕಿಹೊಳೆ ಅನುದಾನ ಬಿಡುಗಡೆ ಮಾಡಿದ್ದಾರೆ. ಕೂಡ್ಲಿಗಿ ಪಟ್ಟಣಕ್ಕೆ ಪಾವಗಡ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಕೂಡ್ಲಿಗಿ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ 75.ಕೋಟಿ ರೂ ಬಿಡುಗಡೆಯಾಗಿದ್ದು ಸದ್ಯದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ. ಕಲ್ಯಾಣ ಕರ್ನಾಟಕದಿಂದ 75.ಕೋಟಿ ರೂ ಅನುದಾನ ಆಸ್ಪತ್ರೆ, ರಸ್ತೆ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ ಖನಿಜ ಅಭಿವೃದ್ಧಿ ನಿಧಿಯಿಂದ 10.ಕೋಟಿ ರೂ ಬಿಡುಗಡೆಗೆ ಕಾನೂನಾತ್ಮಕ ಚರ್ಚೆ ನಡೆಯುತ್ತಿದ್ದೂ ಬಿಡುಗಡೆಯಾಗುವ ಸಂಭವವಿದೆ, ಡಿಗ್ರಿ ಕಾಲೇಜ್ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ನಿಧಿಯಿಂದ 2.ಕೋಟಿ ರೂ ಮತ್ತು ತಾಲೂಕಾ ಆಸ್ಪತ್ರೆಯ ಶವಗಾರ ಪಾರ್ಕಿಂಗ್ ವ್ಯವಸ್ಥೆಗೆ 1.ಕೋಟಿ ರೂ ಅನುದಾನ ದೊರೆತಿದೆ. ಮತ್ತು ಕೂಡ್ಲಿಗಿ ಹಾಗೂ ಕೊಟ್ಟೂರು ಕ್ಷೇತ್ರದ ಮಾಜಿ ಶಾಸಕರಾದ ಎನ್ ಟಿ ಬೊಮ್ಮಣ್ಣ ಕನಸಾದ ಆಸ್ಪತ್ರೆ, ಕಾಲೇಜುಗಳ ಅಭಿವೃದ್ಧಿಗೆ , ಸಿರಾಜ್ ಶೇಕ್, ಅವರ ಕನಸಿನ ವಸತಿ ಯೋಜನೆ ನಿರ್ಮಾಣದ ರಾಜೀವಗಾಂಧಿ ನಗರದ ಅಭಿವೃದ್ಧಿ, ದಿವಂಗತ ಮಾಜಿ ಶಾಸಕ ಮರುಳ ಸಿದ್ದನಗೌಡ ಮತ್ತು ಮಾಜಿ ಸಚಿವೆ ಭಾಗೀರಥಿ ಮರುಳಸಿದ್ದನಗೌಡ ನೆನಪಿಸಿಕೊಂಡು ಉಜ್ಜಿನಿ ಭಾಗದ ವ್ಯಾಪ್ತಿಗೆ 11.ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದೆ. ಮತ್ತು ಮಾಜಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರ ಕೆರೆ ನೀರು ತುಂಬಿಸುವ ಯೋಜನೆ ಈಗಾಗಲೇ 90 % ಕಾಮಗಾರಿ ಮುಗಿದಿದ್ದು ಉಳಿದ 10%ಕಾಮಗಾರಿ ತೊಡಕಾಗಿದ್ದು ಅದನ್ನು ಈಗಾಗಲೇ ಸರಿ ಪಡಿಸಲಾಗಿದ್ದು ಜೂನ್ ತಿಂಗಳಲ್ಲಿ ನೀರು ತರುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಹೂಡೇಂ ನಲ್ಲಿ ಏಕಲವ್ಯ ವಸತಿ ಶಾಲೆ, ಗುಂಡಿನಹೊಳೆ ಭಾಗದಲ್ಲಿ ಕೃಷಿ ವಿಜ್ಞಾನ ಕಾಲೇಜ್, ಆರ್ ಕೆ ಶೆಟ್ರು ಅವರು ನೀಡಿರುವ ನಿವೇಶನದಲ್ಲಿ ಕನ್ನಡ ಭವನ, ಗುರುಗಳ ನೆನಪಿಗೆ ಗುರುಭವನ ನಿರ್ಮಾಣ, ಮತ್ತು ಬಹು ಮುಖ್ಯವಾಗಿ ಸರ್ಕಾರದ ಅನುದಾನದಲ್ಲಿ ವೀರ ವನಿತೆ ಓಬವ್ವಳ ತವರೂರು ಹಾಗೂ ಗುಡೇಕೋಟೆ ಪಾಳೇಗಾರರ ಆಳಿದ ನಾಡಾಗಿರುವ ಗುಡೇಕೋಟೆ ಉತ್ಸವಕ್ಕೆ ಸರ್ಕಾರದ ಅನುದಾನ ಬಿಡುಗಡೆ ಮಾಡಿದೆ ಗುಡೇಕೋಟೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ನಿರುದ್ಯೋಗ ಸಮಸ್ಯೆ ಅರಿತು ಕೂಡ್ಲಿಗಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರ ನಿರ್ಮಾಣಕ್ಕೆ ಮುಂದಾಗಿರುವೆ ಮತ್ತು ಐದಾರು ಪಬ್ಲಿಕ್ ಶಾಲೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ತಿಳಿಸಿದರು.ಇದಕ್ಕೂ ಮೊದಲು ಮಹಾತ್ಮಾ ಗಾಂಧೀಜಿ ಚಿತಾಭಸ್ಮ ಹುತಾತ್ಮ ಸ್ಮಾರಕಕ್ಕೆ ತೆರಳಿ ಪುಷ್ಪಗುಚ್ಛ ಅರ್ಪಿಸಿದರು ನಂತರ ಕೂಡ್ಲಿಗಿ ತಹಸೀಲ್ದಾರ್ ಎಂ ರೇಣುಕಾ ಧ್ವಜಾರೋಹಣ ನೆರವೇರಿಸಿ 75.ನೇ ಗಣರಾಜ್ಯೋತ್ಸವದ ಸಂದೇಶ ಸಾರಿದರು. ವೇದಿಕೆಯಲ್ಲಿ ಕೂಡ್ಲಿಗಿ ಡಿವೈಎಸ್ ಪಿ ಮಲ್ಲೇಶಪ್ಪ,ಪ್ರಾಚಾರ್ಯರಾದ ಡಾ ಕೊತ್ಲಮ್ಮ ಮಲ್ಲಾಪುರ, ಇ.ಓ ರವಿಕುಮಾರ, ಮುಖ್ಯಾಧಿಕಾರಿ ಫಿರೋಜ್ ಖಾನ್, ಸಿಪಿಐ ಸುರೇಶ ತಳವಾರ್ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು, ಪಟ್ಟಣ ಪಂಚಾಯತಿಯ ಎಲ್ಲಾ ಸದಸ್ಯರು, ಭಾಗವಹಿಸಿದ್ದರು.ಗುಂಡುಮುಣುಗು ಲಕ್ಷ್ಮಿ ಸೇರಿದಂತೆ ಸುಮಾರು 30.ಜನ ಸಾಧಕರಿಗೆ ಶಾಸಕರ ಪತ್ನಿ ಪುಷ್ಪ ಶ್ರೀನಿವಾಸರವರು ನೆನಪಿನ ಕಾಣಿಕೆ ಜೊತೆಗೆ ಸನ್ಮಾನಿಸಿ ಗೌರವಿಸಲಾಯಿತು.ಮೈಸೂರು ವೈದ್ಯಕೀಯ ಹಳೇ ವಿದ್ಯಾರ್ಥಿಗಳ ಬಳಗದ ಸಹಕಾರದಿಂದ ಸಾರ್ವಜನಿಕರು ಪೋಡಿ ಹಾಗೂ ಇತರೆ ಸಮಸ್ಯೆಗಳ ಪರಿಹಾರ ಬಹುಬೇಗನೆ ಕಾರ್ಯಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ಕಂದಾಯ ನೀರಿಕ್ಷಕರು ಮತ್ತು ಸರ್ವೇ ಇಲಾಖೆಯವರಿಗೆ ಲ್ಯಾಪ್ ಟ್ಯಾಪ್ ವಿತರಣೆ ಮಾಡಲಾಯಿತು. ನಂತರ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಜೀವನಾಧಾರಿತ ನೃತ್ಯ ರೂಪಕ ಆಯೋಜನೆ ನೋಡಿ ಕೂಡ್ಲಿಗಿ ಶಾಸಕ ತಂದೆ ನೆನಪಿನಲ್ಲಿ ಕಂಬನಿ ಮಿಡಿದರು.ವಿವಿಧ ಶಾಲೆಯ ಮಕ್ಕಳಿಂದ ದೇಶ ಭಕ್ತಿ ಗೀತೆಗಳ ನೃತ್ಯ ರೂಪಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಜಿಲ್ಲಾ ವರದಿಗಾರರು:ರಾಘವೇಂದ್ರ ಸಾಲುಮನೆ ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button