ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿರುವ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುವಂತೆ ಜೆ.ವಾಯ್.ಎಸ್ ಜಿಲ್ಲಾ ಗೌರವ ಅಧ್ಯಕ್ಷ ಎಮ್ ಹಾದಿಮನಿ ಆಕ್ರೋಶ.

ಮಾರ್ಕಬ್ಬಿನಹಳ್ಳಿ ಜನೇವರಿ.27

ಅವ್ಯವಸ್ಥೆ ಮಧ್ಯ ನಿತ್ಯ ಸಂಚಾರ ಸಮಸ್ಯೆಯ ಅವಾಂತರ ಕಣ್ಣಿಗೆ ಕಾಣುತ್ತಿದ್ದರು ಕ್ಯಾರೆ ಎನ್ನದ ಸಂಬಂಧಪಟ್ಟ ಅಧಿಕಾರಿಗಳು ಭಯದ ವಾತಾವರಣದಲ್ಲಿ ಜನ ,ಹೌದು ಇಂದು ನಾವು ತಮ್ಮ ಮುಂದೆ ಹೇಳಲೂ ಹೊರಟಿರುವ ಸ್ಟೋರಿ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮದಲ್ಲಿನ ಟಿಸಿ (ವಿದ್ಯುತ್ ಪರಿವರ್ತಕ)ಗೆ ರಕ್ಷಣೆ ತಂತಿ ಬೇಲಿ ಇಲ್ಲದ ಪರಿಣಾಮ ಯಾವುದೇ ಸಂದರ್ಭ ಅಮಾಯಕ ಜನರನ್ನು ಇಲ್ಲಿ ಅಳವಡಿಸಲಾದ ವಿದ್ಯುತ್ ಟಿಸಿ ಪರಿವರ್ತಕ ಬಲಿಗಾಗಿ ಕಾಯುವಂತಿದೆ. ಮಾರ್ಕಬ್ಬಿನಹಳ್ಳಿ ಗ್ರಾಮದ ಊರ ಒಳಗೆ ಹೋಗುವ ಮುಖ್ಯ ರಸ್ತೆಯಲ್ಲಿ ಜನ ಎದುರಿಸುತ್ತಿರುವ ಚಿತ್ರಣ ಇದಾಗಿದೆ. ಈ ವಿದ್ಯುತ್ ಪರಿವರ್ತಕ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುತ್ತದೆ. ನೂರಾರು ಸಾರ್ವಜನಿಕರು ಹಾಗೂ ಜಾನುವಾರು ಅಲ್ಲದೆ ರೈತರ ಎತ್ತಿನ ಬಂಡಿ ಸೇರಿ ನಿತ್ಯ ನೂರಾರು ವಾಹನಗಳು ಈ ರಸ್ತೆಗೆ ಸಂಚಾರ ಮಾಡುತ್ತವೆ.ಹೀಗಾಗಿ ಇಕ್ಕಟಾದ ರಸ್ತೆ ವಾಹನಗಳು ಬೈಪಾಸಾಗ ಬೇಕಾದರೆ ಯಾವುದೇ ಸಂದರ್ಭ ವಿದ್ಯುತ್ ಪರಿವರ್ತಕಕ್ಕೆ ತಾಗಿದರೆ ಅಮಾಯಕರು ಬಲಿ ಯಾಗಬೇಕಾಗುತ್ತದೆ. ಇದರಿಂದ ಗ್ರಾಮದ ಜನರು ಭಯದ ಆಂತಕ ದಲ್ಲಿದ್ದಾರೆ.ಇದರ ಬಗ್ಗೆ ಬಸವನ ಬಾಗೇವಾಡಿ ಕೆ,ಇ,ಬಿ ಅಧಿಕಾರಿಗಳಿಗೆ ಭೇಟಿಯಾಗಿ ಮಾತಿನ ಮೂಲಕ ಮತ್ತು ಲಿಖಿತ ದೂರು ನಿಡಿದರು ಈ ಸ್ಥಳಾಂತರಕ್ಕೆ ಮುಂದಾಗುತ್ತಿಲ್ಲ.ಎಂದು ಜಾಂಭವ ಯುವ ಸೇನಾ ಸಂಘಟನೆಯವರು ಆರೊಪಿಸಿದ್ದಾರೆ. ಈಗಾಗಲೇ ಈ ಗ್ರಾಮದಲ್ಲಿನ ರೈತರ ಹಸು ಎಮ್ಮೆಗಳು ವಿದ್ಯುತ್‌ ಟಿಸಿ ತಂತಿಗೆ ತಾಗಿ ಬಲಿಯಾಗಿರುತ್ತವೆ. ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಈ ಎರಡು ಶಾಲೆ ಮದ್ಯದಲ್ಲಿ ವಿದ್ಯುತ್ ಟಿಸಿ (ಪರಿವರ್ತಕ) ಇರುವುದರಿಂದ ಶಾಲಾ ಮಕ್ಕಳು, ಪಾಲಕರು ಭಯ ಪಡುವಂತಾಗಿದೆ. ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಕಂಪೌಡಕ್ಕೆ ಹತ್ತಿರ ಇದೆ.ಇದರಿಂದ ಮತ್ತೆ ಯಾವುದೆ ಜೀವ ಹಾನಿಯಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಂಡು ಈ ವಿದ್ಯುತ್ ಪರಿವತರ್ಕ ಬೇರೆಡೆ ಸ್ಥಳಾಂತರ ಮಾಡಿ ಗ್ರಾಮಸ್ಥರಿಗೆ ಹಾಗೂ ಈ ರಸ್ತೆಗೆ ಅಡ್ಡಾಡುತ್ತಿರುವ ಸಾರ್ವಜಕರಿಗೆ ಅನುಕೂಲ ಮಾಡಿ ಕೊಡುತ್ತಾರೋ ಇಲ್ಲವೋ ಕಾಯ್ದು ನೋಡಬೇಕಾಗಿದೆ.

ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button