ರಾಷ್ಟ್ರ ಮಟ್ಟದ ಅಂಬೇಡ್ಕರ್ ಫೆಲೋಷಿಫ್ ಪ್ರಶಸ್ತಿ ಪುರಸ್ಕೃತರಾದ ರಾಜ್ಯ ನಾಯಕರಿಗೆ – ಹೊಳಲ್ಕೆರೆ ತಾಲೂಕ ಡಿ.ಎಸ್.ಎಸ್.ಸಮಿತಿಯಿಂದ ಅಭಿನಂದನೆ ಸಮಾರಂಭ.
ಹೊಳಲ್ಕೆರೆ ಡಿಸೆಂಬರ್.23

ರಾಷ್ಟ್ರಮಟ್ಟದ ಡಾ. ಬಿ.ಆರ್ ಅಂಬೇಡ್ಕರ್ ಫೆಲೋಷಿಫ್ ಪ್ರಶಸ್ತಿ ಪುರಸ್ಕೃತರಾದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಹಾತ್ಮ ಪ್ರೊಫೆಸರ್ ಬಿ. ಕೃಷ್ಣಪ್ಪ ಸ್ಥಾಪಿತ,ರಿ. ನಂ 386/2021-22. ಸಂಘಟನೆಯ ರಾಜ್ಯ ಸಂಚಾಲಕರಾದ ಡಿ ಆರ್ ಪಾಂಡುರಂಗ ಸ್ವಾಮಿ ಹಾಗೂ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್. ರವರನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಾ ಡಿ.ಎಸ್.ಎಸ್ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಅಭಿನಂದನಾ ಸಮಾರಂಭವನ್ನು ಕೋಡಿಹಳ್ಳಿ ಶಾಖಾ ಮಠದ ಶ್ರೀ ಷಡಕ್ಷರಮುನಿ ಸ್ವಾಮೀಜಿ ಉದ್ಘಾಟನೆ ಮಾಡಿದರು. ಅಭಿನಂದನಾ ಸಮಾರಂಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಕೊಡಿಗಲ್ ರಮೇಶ್, ಭರ್ಮಪ್ಪ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರಾದ ದುರ್ಗಾ ದಾಸ್, ರಾಜ್ಯ ಸಮಿತಿ ಸದಸ್ಯರಾದ ಶಿವಕುಮಾರ್,ಮಹಿಳಾ ಒಕ್ಕೂಟದ ರಾಜ್ಯ ಸಮಿತಿ ಸದಸ್ಯರಾದ ತಿಪ್ಪಮ್ಮ, ಜಿಲ್ಲಾ ಸಂಚಾಲಕರಾದ ದಿವಾಕರ್, ತಾಲೂಕು ಸಂಚಾಲಕರಾದ ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಜಿಲ್ಲಾ ವರದಿಗಾರರು:ಎನ್.ವೆಂಕಟೇಶ್. ತರೀಕೆರೆ